More Video
VIEW ALL →
ಸ್ಟಿಂಗ್ ಆಪರೇಷನ್ ವಿವಾದಕ್ಕೆ ಹೈಕಮಾಂಡ್ ಎಂಟ್ರಿ? ಸಿದ್ದರಾಮಯ್ಯ–ಡಿಕೆಶಿ ಭೇಟಿ ಬೆನ್ನಲ್ಲೇ...
ಕರ್ನಾಟಕದ ಸ್ಟಿಂಗ್ ಆಪರೇಷನ್ ವಿವಾದದ ನಡುವೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ನಾಯಕರಿಂದ ವರದಿ ಕೇಳಿದೆ ಎನ್ನಲಾಗಿದೆ. ಸಿದ್ದರಾಮಯ್ಯ–ಡಿಕೆ ಶಿವಕುಮಾರ್ ಭೇಟಿ ಮತ್ತು ಎಚ್.ಡಿ. ಕುಮಾರಸ್ವಾಮಿ ಕರೆದ ಜೆಡಿಎಸ್ ಶಾಸಕರ ಸಭೆ ಕುತೂಹಲ ಮೂಡಿಸಿವೆ.

ದೆಹಲಿ ಪೊಲೀಸರಿಂದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಬಂಧನ, ನೇಹಾ ಬೋರಾ ಬಿಡುಗಡೆ
ದೆಹಲಿಯಲ್ಲಿ ‘ಲೆಹ್ರಾ ದೋ ತಿರಂಗಾ’ ಪ್ರತಿಭಟನೆ ವೇಳೆ ವಶಕ್ಕೆ ಪಡೆಯಲಾಗಿದ್ದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಬಂಧನವಾಗಿದೆ. ಬಂಧನಕ್ಕೊಳಗಾಗಿದ್ದ ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ಬಿಡುಗಡೆಯಾಗಿದೆ.

VB-G RAM G ನೌಕರರ ಪ್ರತಿಭಟನೆ, ವೇತನವಿಲ್ಲದೆ ಜೀವನ ನಡೆಸುವುದಾದರೂ ಹೇಗೆ?, ಸೇವಾ ಭದ್ರತೆಗೆ...
ಕೆಲಸದ ಭದ್ರತೆ, ವೇತನ ಸರಿಯಾದ ಸಮಯಕ್ಕೆ ಬರುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಬಿ-ಜಿ ರಾಮ್ ಜಿ ನೌಕರರು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಸಿಎಂ ಸ್ಟಿಂಗ್ ಆರೋಪಿಗಳ ಬಂಧನಕ್ಕೆ ಎಚ್ಡಿಕೆ ಗಡುವು, ಮಾಗಡಿಯಲ್ಲಿ ಚಿರತೆ ಭೀತಿ , ಸ್ವೀಟ್...
ಸ್ಟಿಂಗ್ ವಿಡಿಯೋ ಹರಿಬಿಡಲೆಂದೇ 'ಕರ್ನಾಟಕ ಹನಿಟ್ರ್ಯಾಪ್' ಎಂಬ ಯೂಟ್ಯೂಬ್ ಚಾನೆಲ್ ತೆರೆಯಲಾಗಿದ್ದು, ಚಾನೆಲ್ ಆರಂಭವಾದ ಕೆಲವೇ ಕ್ಷಣಗಳಲ್ಲಿ 54 ಮಂದಿ ಸಬ್ಸ್ಕ್ರೈಬ್ ಆಗಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ,

ದಲಿತರ ಮೀಸಲಾತಿ ಹೆಚ್ಚಳ: ಸಾಮಾಜಿಕ ನ್ಯಾಯದ ಹೆಸರಿನಲ್ಲಿ ರಾಜಕೀಯ ಪಕ್ಷಗಳ ಕಣ್ನೊರೆಸುವ...
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳದ ವಿಚಾರ ಇದೀಗ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ರದ್ದಾಗಿದೆ. ಹೈಕೋರ್ಟ್ ನೀಡಿದ ಈ ತೀರ್ಪು ಕೇವಲ ಕಾನೂನಿನ ಹಿನ್ನಡೆಯಲ್ಲ, ಬದಲಾಗಿ ದಲಿತ ಸಮುದಾಯದ ಮತಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು ಹೆಣೆದ ಕಣ್ನೊರೆಸುವ ತಂತ್ರದ ಮುಖವಾಡವನ್ನು ಕಳಚಿದೆ.
ಸಾಮಾಜಿಕ ನ್ಯಾಯದ ಹರಿಕಾರರು ಎಂದು ಬಿಂಬಿಸಿಕೊಳ್ಳುವ ನಾಯಕರು, ದಲಿತರ ಭವಿಷ್ಯದ ಜೊತೆ ಹೇಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದಕ್ಕೆ ಇದೊಂದು ಜ್ವಲಂತ ನಿದರ್ಶನವಾಗಿ ಮಾರ್ಪಟ್ಟಿದೆ. ದಲಿತರ ಹಕ್ಕುಗಳಿಗಿಂತಲೂ, ಅವರ ಮತಗಳ ಮೇಲಿನ ವ್ಯಾಮೋಹವೇ ಈ ಇಡೀ ಮೀಸಲಾತಿ ನಾಟಕದ ಕೇಂದ್ರಬಿಂದು ಎಂಬುದು ಈಗ ಜಗಜ್ಜಾಹೀರಾಗಿದೆ.
ಚುನಾವಣೆಗಾಗಿ ಮಾಡಿದ ಕೇವಲ ಗಿಮಿಕ್ ಆಗಿತ್ತೇ?
ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೀಸಲಾತಿ ಪ್ರಮಾಣವನ್ನು ಶೇಕಡಾ 15ರಿಂದ 17ಕ್ಕೆ ಹಾಗೂ 3ರಿಂದ 7ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ವಿಧಿಸಿರುವ ಶೇಕಡಾ 50ರ ಮಿತಿಯನ್ನು ಮೀರುವ ಈ ನಿರ್ಧಾರಕ್ಕೆ ಅತ್ಯಗತ್ಯವಾದ ಸಂವಿಧಾನದ ಒಂಬತ್ತನೇ ಅನುಸೂಚಿಯ ರಕ್ಷಣೆ ಒದಗಿಸುವಲ್ಲಿ ಸರ್ಕಾರ ಉದ್ದೇಶಪೂರ್ವಕವಾಗಿಯೇ ಮೌನ ವಹಿಸಿತ್ತೇ ಎಂಬ ಗಂಭೀರ ಪ್ರಶ್ನೆ ಈಗ ಎದುರಾಗಿದೆ. ಕೇಂದ್ರದಲ್ಲಿಯೂ ತಮ್ಮದೇ ಸರ್ಕಾರವಿದ್ದರೂ, ಕೇವಲ ವರದಿಗಳ ಆಧಾರದ ಮೇಲೆ ಅವಸರದಲ್ಲಿ ಆದೇಶ ಹೊರಡಿಸಿದ್ದು ಕೇವಲ ಚುನಾವಣೆಗಾಗಿ ಮಾಡಿದ ಗಿಮಿಕ್ ಎಂಬುದು ಈಗ ಸ್ಪಷ್ಟವಾಗುತ್ತಿದೆ. ಕಾನೂನಿನ ಪರೀಕ್ಷೆಯಲ್ಲಿ ಈ ಆದೇಶ ನಿಲ್ಲುವುದಿಲ್ಲ ಎಂಬ ಸತ್ಯ ಗೊತ್ತಿದ್ದರೂ, ಕೇವಲ ದಲಿತರ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ಹೆಣೆದ ರಾಜಕೀಯ ತಂತ್ರವಿದು ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.
ಭರವಸೆಗಳ ಬೆನ್ನೇರಿದ ಹೊಸ ಸರ್ಕಾರ ಮತ್ತು ವಿಳಂಬ ನೀತಿ
ಮತ್ತೊಂದೆಡೆ, ದಲಿತರ ಆಶಾಕಿರಣವೆಂದು ಹೇಳಿಕೊಳ್ಳುತ್ತಾ ಅಧಿಕಾರಕ್ಕೆ ಬಂದಿರುವ ಹಾಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಡೆಗಳು ಕೂಡ ಕೇವಲ ಭರವಸೆಗಳಿಗೆ ಸೀಮಿತವಾದಂತಿವೆ. ಹೈಕೋರ್ಟ್ ತೀರ್ಪಿನ ಬಳಿಕ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಒಳಮೀಸಲಾತಿ ಜಾರಿ ಮತ್ತು ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಂಡು ದೃಢವಾದ ಕಾನೂನು ಹೋರಾಟ ನಡೆಸುವ ಬದಲು, ವಿಳಂಬ ನೀತಿ ಅನುಸರಿಸುತ್ತಿರುವುದು ಇದು ಮತ್ತೊಂದು ಕಣ್ನೊರೆಸುವ ತಂತ್ರವೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ದಲಿತರಿಗೆ ನೈಜ ನ್ಯಾಯ ಒದಗಿಸುವುದಕ್ಕಿಂತ, ಈ ವಿಚಾರವನ್ನು ಜೀವಂತವಾಗಿಟ್ಟುಕೊಂಡು ಮುಂದಿನ ಚುನಾವಣೆಗಳಿಗೂ ಬಳಸಿಕೊಳ್ಳುವ ಲೆಕ್ಕಾಚಾರ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಎದ್ದುಕಾಣುತ್ತಿದೆ.
ರಾಜಕೀಯಕ್ಕೆ ಬಲಿಯಾದ ದಲಿತರು
ರಾಜಕೀಯ ಪಕ್ಷಗಳ ಈ ಮೇಲಾಟದಲ್ಲಿ ಅಂತಿಮವಾಗಿ ಬಲಿಯಾಗುತ್ತಿರುವುದು ಮಾತ್ರ ಸರ್ಕಾರಿ ಉದ್ಯೋಗ ಹಾಗೂ ಉನ್ನತ ಶಿಕ್ಷಣದ ನಿರೀಕ್ಷೆಯಲ್ಲಿದ್ದ ದಲಿತ ಯುವ ಸಮುದಾಯ. ಮೀಸಲಾತಿ ಹೆಚ್ಚಳದ ಆದೇಶವನ್ನು ನಂಬಿಕೊಂಡು ಕನಸು ಕಟ್ಟಿಕೊಂಡಿದ್ದ ಸಾವಿರಾರು ಅಭ್ಯರ್ಥಿಗಳು ಇದೀಗ ಅತಂತ್ರರಾಗಿದ್ದಾರೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಧಿಕಾರ ಹಿಡಿಯುವ ಪಕ್ಷಗಳು, ಬಿಕ್ಕಟ್ಟು ಎದುರಾದಾಗ ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ದಲಿತರ ಉದ್ಧಾರದ ಮಾತುಗಳು ಕೇವಲ ಚುನಾವಣಾ ಪ್ರಣಾಳಿಕೆಗಳ ಅಲಂಕಾರಿಕ ಪದಗಳಾಗಿ ಉಳಿದಿರುವುದು ಪ್ರಜಾಪ್ರಭುತ್ವದ ಅತಿ ದೊಡ್ಡ ವಿಪರ್ಯಾಸ.

ಹಸಿದವರಿಗೆ ಅನ್ನ ನೀಡುವ ʼಬಿಎಂಟಿಸಿ ಕೃಷ್ಣʼನ ಅಕ್ಷಯಪಾತ್ರೆ

ದಲಿತರ ಮೀಸಲಾತಿ ಹೆಚ್ಚಳ: ಸಾಮಾಜಿಕ ನ್ಯಾಯದ ಹೆಸರಿನಲ್ಲಿ ರಾಜಕೀಯ ಪಕ್ಷಗಳ ಕಣ್ನೊರೆಸುವ ತಂತ್ರವೇ?

CRZ Rules Relaxation: ಕರಾವಳಿ ಮೇಲೆ ಮಾಫಿಯಾ ಭೀತಿ? | ಕರ್ನಾಟಕ ಸರ್ಕಾರದ ಉದ್ದೇಶವೇನು?

ಕರ್ನಾಟಕ ಎಸ್ಸಿ–ಎಸ್ಟಿ ಮೀಸಲಾತಿ ಹೆಚ್ಚಳ ರದ್ದು: 56,432 ಹುದ್ದೆಗಳ ನೇಮಕಾತಿಗೆ ಸಂಕಷ್ಟವೇ?

ಸ್ಟಾರ್ಲಿಂಕ್ ಭಾರತ ಪ್ರವೇಶಕ್ಕೆ ತಡೆ ಏಕೆ? ಭದ್ರತೆ, ಅಂಬಾನಿ ಸುತ್ತ ರಾಜಕೀಯ ಚರ್ಚೆ

ಸೌದಿ ಅರೇಬಿಯಾ ಮೇಲೆ ಹೌತಿಗಳ ಕ್ಷಿಪಣಿ ದಾಳಿ: ಅಮೆರಿಕ ಯುದ್ಧಕ್ಕೆ ಇಳಿಯುತ್ತಾ?

ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 700 ದಾಟಿದೆ; ಸಂರಕ್ಷಣೆಗೆ ಸವಾಲುಗಳೇನು?

ಅಮೆರಿಕದ ಗ್ರೀನ್ ಕಾರ್ಡ್ ಸಂಕಷ್ಟ: ಭಾರತೀಯ ಟೆಕ್ಕಿಗಳಿಗೆ ಹೆಚ್ಚಿದ ಆತಂಕ

ರೆಪೋ ದರ ಏರಿಕೆ: ನಿಮ್ಮ EMI ಎಷ್ಟು ಹೆಚ್ಚಾಗಲಿದೆ? ಇಲ್ಲಿದೆ ಲೆಕ್ಕಾಚಾರ

ಪದವೀಧರ ಮತದಾರರಿಗೆ ಅರ್ಜಿ 18 ಗೊಂದಲ; ಎಸ್ಐಆರ್ : Gen Z ಗಳಿಗೇಕೆ ಆತಂಕ?

ಪದವೀಧರ ಕ್ಷೇತ್ರಗಳಿಗೆ ಚುನಾವಣೆ: Gen Z ಮತದಾರರಿಗೆ Form 18 ಗೊಂದಲ

ಆಕಾಶದ ಮಧ್ಯೆ ರಕ್ತಸಿಕ್ತ ಹೈಜಾಕ್ ಯತ್ನ: ಫ್ಲೈದುಬೈ ವಿಮಾನದಲ್ಲಿ ಉಗ್ರನ ಅಟ್ಟಹಾಸ ಮೆಟ್ಟಿನಿಂತ ಕ್ಯಾಪ್ಟನ್ ಹಾಗೂ ಪ್ರಯಾಣಿಕರು

ಸಿದ್ದರಾಮಯ್ಯ ಸ್ಟಿಂಗ್ ವಿವಾದಕ್ಕೆ ಟ್ವಿಸ್ಟ್, ಸೈಬರ್ ಪೊಲೀಸರಿಂದ ಆಪರೇಷನ್

VB-G RAM G ನೌಕರರ ಪ್ರತಿಭಟನೆ, ವೇತನವಿಲ್ಲದೆ ಜೀವನ ನಡೆಸುವುದಾದರೂ ಹೇಗೆ?, ಸೇವಾ ಭದ್ರತೆಗೆ ಆಗ್ರಹ

ಸಿಎಂ ಸ್ಟಿಂಗ್ ಆರೋಪಿಗಳ ಬಂಧನಕ್ಕೆ ಎಚ್ಡಿಕೆ ಗಡುವು, ಮಾಗಡಿಯಲ್ಲಿ ಚಿರತೆ ಭೀತಿ , ಸ್ವೀಟ್ ಅಂಗಡಿಗಳ ಮೇಲೆ ದಿಢೀರ್ ದಾಳಿ

Siddaramaiah Sting| ಎಚ್ಡಿಕೆ–ಪ್ರಿಯಾಂಕ್ ವಾಕ್ಸಮರ; ಶುಭಾ ಕೊಲೆ ಪ್ರಕರಣಕ್ಕೆ ತಿರುವು, ಮೈಸೂರು ಕಂಬಳಕ್ಕೆ ಕೋಣಗಳು ಸಜ್ಜು

ಸಿದ್ದು–ಜಾರಕಿಹೊಳಿ ಭೇಟಿ, ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಮಣಿಯಿತೇ ಸರ್ಕಾರ? ದಸರಾ ಅಂಬಾರಿಗೆ ಪ್ರಶಾಂತ ಸಜ್ಜು

ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಎಚ್ಡಿಕೆ ಮಾತು, ಕಬ್ಬು ಬೆಳೆಗಾರರ ಹೋರಾಟ, ದರ್ಶನ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಸಿದ್ದು ಹೇಳಿಕೆಯಿಂದ ಸ್ಟಿಂಗ್ ವಿವಾದಕ್ಕೆ ತಿರುವು; ಪ್ರಜ್ವಲ್ ಜೈಲು ಸ್ಥಳಾಂತರಕ್ಕೆ ಬ್ರೇಕ್, ಆಗ್ನೆಸ್ ಕಾಲೇಜಿನಲ್ಲಿ ಪ್ರತಿಭಟನೆ

ಮೈಸೂರು ದಸರಾ, ಖಾಸಗಿ ಆಸ್ಪತ್ರೆಗಳಿಗೆ ಹೊಸ ಕಾನೂನು, ಇಡಗುಂಜಿ ದೇಗುಲ ವಿವಾದ

ಬರದ ನಡುವೆ ಸಚಿವರಿಗೆ ದುಬಾರಿ ಕಾರು, ನದಿ ತಿರುವಿಗೆ ವಿರೋಧ, ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯ ನಿರೀಕ್ಷೆ

ರವಿ ಗಣಿಗ ಪೆನ್ಡ್ರೈವ್ ಆರೋಪ, ಐಸ್ಕ್ರೀಮ್ ಘಟಕಗಳ ಮೇಲೆ ದಾಳಿ, ಅಂಬಾರಿ ರೇಸ್ನಿಂದ ಮಹೇಂದ್ರ ಔಟ್

ಡಿಕೆಶಿ ಟ್ರ್ಯಾಪ್ ಆರೋಪ; ಕುಂಬಳಕಾಯಿ ಕಳ್ಳ ಯಾರೆಂದ ಎಚ್ಡಿಕೆ

ಆಪರೇಷನ್ ಸಿದ್ಧರಾಮಯ್ಯ: ಹೆಚ್ಡಿಕೆ ಸಿಡಿಸಿದ ಬಾಂಬ್
ಅಭಿಮತ

ವೀಕೆಂಡ್ ಮಜಾಕ್ಕೆ ಮಳೆಯ ಸಾಥ್! ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆ ಹೇಗಿದೆ? ವಿಜ್ಞಾನಿ ಸಿ.ಎಸ್.ಪಾಟೀಲ್ ಮಾಹಿತಿ

VB-G RAM G ನೌಕರರ ಪ್ರತಿಭಟನೆ, ವೇತನವಿಲ್ಲದೆ ಜೀವನ ನಡೆಸುವುದಾದರೂ ಹೇಗೆ?, ಸೇವಾ ಭದ್ರತೆಗೆ ಆಗ್ರಹ

ಸ್ಟಿಂಗ್ ಆಪರೇಷನ್ ಬಿರುಗಾಳಿ: ಎಚ್ ಡಿಕೆ, ಸುರೇಶ್ ಬಾಬು ಸ್ಫೋಟಕ ಹೇಳಿಕೆ

ಡಿಕೆಶಿ ಸ್ಟಿಂಗ್ ಆಪರೇಷನ್ ಆರೋಪ: ತನಿಖೆಗೆ ಕಾಂಗ್ರೆಸ್, ಬಿಜೆಪಿ ಶಾಸಕರ ಒತ್ತಾಯ

ಸೌಜನ್ಯ ಪ್ರಕರಣ: ಹೋರಾಟಗಾರರ ವಿರುದ್ಧ ವಾಯ್ಸ್ ಆಪ್ ಪಬ್ಲಿಕ್ ಗಂಭೀರ ಆರೋಪ

ಅಮೆರಿಕದ ಗ್ರೀನ್ಕಾರ್ಡ್ ನಿಯಮ ಬಿಗಿ: ಭಾರತೀಯ ಉದ್ಯೋಗಿಗಳಿಗೆ ಮತ್ತಷ್ಟು ಸಂಕಷ್ಟ

ನದಿ ಜೋಡಣೆ ಹೆಸರಲ್ಲಿ ಪಶ್ಚಿಮ ಘಟ್ಟಕ್ಕೆ ಕಂಟಕ.. ಬೇಡ್ತಿ–ಅಘನಾಶಿನಿ ಮುಟ್ಟಬೇಡಿ.!

ವಿಜಯಪುರದಲ್ಲಿ ಎಸ್ಐಆರ್ ವಿವಾದ: 'ನಾವು ಸತ್ತಿಲ್ಲ': ದಾಖಲೆ ಹಿಡಿದು ಮಹಿಳೆಯರ ಆಕ್ರೋಶ

SIR ಪ್ರತಿಭಟನೆಯಲ್ಲಿ ಧ್ರುವ್ ರಾಠಿ-ಅಭಿಜೀತ್ ದಿಪ್ಕೆ ಭಾಷಣ: 'ಜನತಾ ನ್ಯಾಯಾಲಯ' ನೋಡಿ ಜನ ಹೇಳಿದ್ದೇನು?

ಮತ್ತೆ ಬೀದಿಗಿಳಿದ KSRTC BMTC ನೌಕರರು: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

ರಾಜ್ಯದಲ್ಲಿ ಹೆಚ್ಚುತ್ತಿರುವ ತಾಪಮಾನ ಕಾರಣ ವಿವರಿಸಿದ ವಿಜ್ಞಾನಿ ಸಿ.ಎಸ್. ಪಾಟೀಲ್
ಮತದಾರರ ಪಟ್ಟಿ ಪರಿಷ್ಕರಣೆ ವಿವಾದ: ಫಾರ್ಮ್ 7 ಸಲ್ಲಿಕೆಗೆ ಎಫ್ಐಆರ್ ದಾಖಲಿಸಿದ ಕಾಂಗ್ರೆಸ್ ವಿರುದ್ಧ ಡಾ. ಅನಿಲ್ ಥಾಮಸ್ ಕಿಡಿ
ಟ್ರೆಂಡಿಂಗ್ ವಿಡಿಯೊ
- ಕರ್ನಾಟಕ
ಹವಾಮಾನ ಬಿಕ್ಕಟ್ಟಿಗೆ ರ್ಯಾಪ್ ಧ್ವನಿ: ‘ನೀರ್ ಕೊಡು’ ಮೂಲಕ ಜಾಗೃತಿ
ಆಲ್ಬಮ್ನಲ್ಲಿ ಒಟ್ಟು ಆರು ರ್ಯಾಪ್ ಹಾಡುಗಳಿದ್ದು, ದೇಶದ ವಿವಿಧ ಭಾಗಗಳ ಕಲಾವಿದರು ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಹವಾಮಾನ ಬದಲಾವಣೆಯ ಕುರಿತು ಹಾಡುಗಳನ್ನು ರಚಿಸಿದ್ದಾರೆ.






















