Social Stigma | ಮುಟ್ಟಾದ ಬಾಲಕಿಯರು ಬರಬಾರದೆಂದು ಮುಚ್ಚಿದ ವಸತಿ ಶಾಲೆ! ಗೃಹ ಸಚಿವರ ಕ್ಷೇತ್ರದಲ್ಲಿ ಇದೆಂಥಾ ಮೌಢ್ಯ?
ಅಲ್ಲಿ ವಿದ್ಯಾರ್ಥಿನಿಯರೇ ಇಲ್ಲ. ಕಸ ಕಡ್ಡಿ, ಕುಡುಕರ ಅಡ್ಡೆಯಾಗಿ ಬದಲಾಗಿರುವ ಈ ವಿದ್ಯಾರ್ಥಿನಿಲಯವು ಸ್ಥಳೀಯರ ಅಂಧಶ್ರದ್ಧೆಯಿಂದ ಪಾಳು ಬಿದ್ದಿದೆ. ವಿದ್ಯಾರ್ಥಿನಿಯರು ಮುಟ್ಟಾದರೆ ಗ್ರಾಮದೇವತೆಗೆ ಅಪಚಾರ ಆಗಲಿದೆ ಎಂಬ ಮೂಢನಂಬಿಕೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮುಳುವಾಗಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಬಾಲಕಿಯರಿಗಾಗಿ ಜಿಲ್ಲಾ ಪಂಚಾಯ್ತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ಕಸ್ತೂರ ಬಾ ಗಾಂಧಿ ಬಾಲಿಕ ವಿದ್ಯಾರ್ಥಿನಿಲಯ ಆರಂಭಿಸಿದೆ. ಈ ವಿದ್ಯಾರ್ಥಿನಿಲಯದಲ್ಲಿ ಹೆಣ್ಣು ಮಕ್ಕಳು ವಾಸ ಮಾಡಿದರೆ ದೇವಿಗೆ ಕೋಪ ಬರಲಿದೆ ಎಂಬ ಅಜ್ಞಾನ, ಮೂಢನಂಬಿಕೆ ಜನರಲ್ಲಿದೆ. ಮಾಂಸ ಸೇವಿಸಿದ ದಿನದಂದು ಈ ರಸ್ತೆಯಲ್ಲಿ ಓಡಾಡಲೂ ಜನ ಹೆದರುವಷ್ಟರ ಮಟ್ಟಿಗೆ ಮೂಢನಂಬಿಕೆ ತುಂಬಿ ತುಳುಕುತ್ತಿದೆ. ಇನ್ನು ಋತುಚಕ್ರಕ್ಕೆ ಒಳಗಾದ ಹೆಣ್ಣು ಮಕ್ಕಳು ದೇವಸ್ಥಾನದ ಸಮೀಪವೇ ಇರುವ ಮತ್ತೊಂದು ಪ್ರೌಢಶಾಲೆಗೆ ಒಂಬತ್ತು ದಿನ ಹೆಜ್ಜೆ ಇಡುವಂತಿಲ್ಲ..! ಹೌದು, ಇಂತಹ ಸಾಮಾಜಿಕ ಅನಿಷ್ಟ ಪದ್ಧತಿಯೊಂದು ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸುಮಾರು 80ಕಿ.ಮೀ. ದೂರದಲ್ಲಿರುವ, ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಕೊರಟಗೆರೆಯಲ್ಲಿ ಆಚರಣೆಯಲ್ಲಿದೆ. ಮಹಿಳೆಯರು ಕೆಲಸ ಮಾಡುವ ಕಡೆ ಮುಟ್ಟಿನ ರಜೆ ನೀಡಬೇಕೆಂದು ಸರ್ಕಾರ ಆದೇಶ ನೀಡಿದೆ. ಆದರೆ, ಇಲ್ಲಿ ಬಾಲಕಿಯರು ನೈಸರ್ಗಿಕ ಪ್ರಕ್ರಿಯೆಯಂತೆ ಮುಟ್ಟಾದರೆ, ಅವರು ಶಾಲೆಯ ಮೆಟ್ಟಿಲು ಹತ್ತುವಂತಿಲ್ಲ ಅಥವಾ ವಸತಿ ಶಾಲೆಯಲ್ಲಿ ಇರುವಂತಿಲ್ಲ ಎಂಬ ಕ್ರೂರ ಕಟ್ಟುಪಾಡು ಚಾಲ್ತಿಯಲ್ಲಿರುವುದು ಅಚ್ಚರಿಗೆ ಕಾರಣವಾಗಿದೆ.

ಅಲ್ಲಿ ವಿದ್ಯಾರ್ಥಿನಿಯರೇ ಇಲ್ಲ. ಕಸ ಕಡ್ಡಿ, ಕುಡುಕರ ಅಡ್ಡೆಯಾಗಿ ಬದಲಾಗಿರುವ ಈ ವಿದ್ಯಾರ್ಥಿನಿಲಯವು ಸ್ಥಳೀಯರ ಅಂಧಶ್ರದ್ಧೆಯಿಂದ ಪಾಳು ಬಿದ್ದಿದೆ. ವಿದ್ಯಾರ್ಥಿನಿಯರು ಮುಟ್ಟಾದರೆ ಗ್ರಾಮದೇವತೆಗೆ ಅಪಚಾರ ಆಗಲಿದೆ ಎಂಬ ಮೂಢನಂಬಿಕೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮುಳುವಾಗಿದೆ.
ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಬಾಲಕಿಯರಿಗಾಗಿ ಜಿಲ್ಲಾ ಪಂಚಾಯ್ತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ಕಸ್ತೂರ ಬಾ ಗಾಂಧಿ ಬಾಲಿಕ ವಿದ್ಯಾರ್ಥಿನಿಲಯ ಆರಂಭಿಸಿದೆ. ಈ ವಿದ್ಯಾರ್ಥಿನಿಲಯದಲ್ಲಿ ಹೆಣ್ಣು ಮಕ್ಕಳು ವಾಸ ಮಾಡಿದರೆ ದೇವಿಗೆ ಕೋಪ ಬರಲಿದೆ ಎಂಬ ಅಜ್ಞಾನ, ಮೂಢನಂಬಿಕೆ ಜನರಲ್ಲಿದೆ. ಮಾಂಸ ಸೇವಿಸಿದ ದಿನದಂದು ಈ ರಸ್ತೆಯಲ್ಲಿ ಓಡಾಡಲೂ ಜನ ಹೆದರುವಷ್ಟರ ಮಟ್ಟಿಗೆ ಮೂಢನಂಬಿಕೆ ತುಂಬಿ ತುಳುಕುತ್ತಿದೆ. ಇನ್ನು ಋತುಚಕ್ರಕ್ಕೆ ಒಳಗಾದ ಹೆಣ್ಣು ಮಕ್ಕಳು ದೇವಸ್ಥಾನದ ಸಮೀಪವೇ ಇರುವ ಮತ್ತೊಂದು ಪ್ರೌಢಶಾಲೆಗೆ ಒಂಬತ್ತು ದಿನ ಹೆಜ್ಜೆ ಇಡುವಂತಿಲ್ಲ..!
ಹೌದು, ಇಂತಹ ಸಾಮಾಜಿಕ ಅನಿಷ್ಟ ಪದ್ಧತಿಯೊಂದು ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸುಮಾರು 80ಕಿ.ಮೀ. ದೂರದಲ್ಲಿರುವ, ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಕೊರಟಗೆರೆಯಲ್ಲಿ ಆಚರಣೆಯಲ್ಲಿದೆ. ಮಹಿಳೆಯರು ಕೆಲಸ ಮಾಡುವ ಕಡೆ ಮುಟ್ಟಿನ ರಜೆ ನೀಡಬೇಕೆಂದು ಸರ್ಕಾರ ಆದೇಶ ನೀಡಿದೆ. ಆದರೆ, ಇಲ್ಲಿ ಬಾಲಕಿಯರು ನೈಸರ್ಗಿಕ ಪ್ರಕ್ರಿಯೆಯಂತೆ ಮುಟ್ಟಾದರೆ, ಅವರು ಶಾಲೆಯ ಮೆಟ್ಟಿಲು ಹತ್ತುವಂತಿಲ್ಲ ಅಥವಾ ವಸತಿ ಶಾಲೆಯಲ್ಲಿ ಇರುವಂತಿಲ್ಲ ಎಂಬ ಕ್ರೂರ ಕಟ್ಟುಪಾಡು ಚಾಲ್ತಿಯಲ್ಲಿರುವುದು ಅಚ್ಚರಿಗೆ ಕಾರಣವಾಗಿದೆ.

