ಪಶ್ಚಿಮ ಏಷ್ಯಾ ಬಿಕ್ಕಟ್ಟು, ತೈಲ ಬೆಲೆ ಏರಿಕೆ ಎಫೆಕ್ಟ್: ಸೆನ್ಸೆಕ್ಸ್, ನಿಫ್ಟಿ ದಿಢೀರ್ ಕುಸಿತ; ಹೂಡಿಕೆದಾರರಿಗೆ ಆಘಾತ
x

ಸೆನ್ಸೆಕ್ಸ್ ಸಂಸ್ಥೆಗಳಲ್ಲಿ, ಅದಾನಿ ಪೋರ್ಟ್ಸ್, ಲಾರ್ಸೆನ್ & ಟೂಬ್ರೊ, ಏಷ್ಯನ್ ಪೇಂಟ್ಸ್, ಭಾರತ್ ಎಲೆಕ್ಟ್ರಾನಿಕ್ಸ್, ಎಟರ್ನಲ್, ರಿಲಯನ್ಸ್ ಇಂಡಸ್ಟ್ರೀಸ್, ಪವರ್ ಗ್ರಿಡ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಮುಖ ಲಾಭ ಗಳಿಸಿದವುಗಳಲ್ಲಿ ಸೇರಿವೆ. ಟ್ರೆಂಟ್, ಟೈಟಾನ್, ಐಟಿಸಿ ಮತ್ತು ಹಿಂದೂಸ್ತಾನ್ ಯೂನಿಲಿವರ್ ಹಿಂದುಳಿದವುಗಳಲ್ಲಿ ಸೇರಿವೆ. 

ಪಶ್ಚಿಮ ಏಷ್ಯಾ ಬಿಕ್ಕಟ್ಟು, ತೈಲ ಬೆಲೆ ಏರಿಕೆ ಎಫೆಕ್ಟ್: ಸೆನ್ಸೆಕ್ಸ್, ನಿಫ್ಟಿ ದಿಢೀರ್ ಕುಸಿತ; ಹೂಡಿಕೆದಾರರಿಗೆ ಆಘಾತ

ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 'ಸೆನ್ಸೆಕ್ಸ್' 708.38 ಅಂಕ (ಶೇ. 0.93) ಕುಸಿದು 75,326.04 ಮಟ್ಟಕ್ಕೆ ತಲುಪಿದೆ.


Click the Play button to hear this message in audio format

ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಯುದ್ಧದ ಭೀತಿ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶತಕ ಬಾರಿಸಿರುವ (100 ಡಾಲಡರ್​) ಪರಿಣಾಮ ಭಾರತೀಯ ಷೇರುಪೇಟೆ ಶುಕ್ರವಾರ ತೀವ್ರ ಕುಸಿತ ಕಂಡಿದೆ. ವಾರದ ಕೊನೆಯ ದಿನದ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡಾ 1ರಷ್ಟು ಕುಸಿದಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 'ಸೆನ್ಸೆಕ್ಸ್' 708.38 ಅಂಕ (ಶೇ. 0.93) ಕುಸಿದು 75,326.04 ಮಟ್ಟಕ್ಕೆ ತಲುಪಿದೆ. ಇತ್ತ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 'ನಿಫ್ಟಿ' ಕೂಡ 222.05 ಅಂಕ (ಶೇ. 0.93) ಕಳೆದುಕೊಂಡು 23,417.10 ಮಟ್ಟದಲ್ಲಿ ವಹಿವಾಟು ಮುಂದುವರಿಸಿದೆ. ಗುರುವಾರದ ಅಂತ್ಯಕ್ಕೂ ಸೆನ್ಸೆಕ್ಸ್ 829.29 ಅಂಕ ಹಾಗೂ ನಿಫ್ಟಿ 227.70 ಅಂಕಗಳ ಭಾರಿ ನಷ್ಟದೊಂದಿಗೆ ವಹಿವಾಟು ಮುಕ್ತಾಯಗೊಳಿಸಿದ್ದವು.ಷೇರುಪೇಟೆ ಕುಸಿತಕ್ಕೆ ಪ್ರಮುಖ ಕಾರಣಗಳೇನು?

ಜಾಗತಿಕ ಮಾರುಕಟ್ಟೆಗಳಲ್ಲಿನ ಭಾರಿ ಮಾರಾಟದ ಒತ್ತಡ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) ನಿರಂತರವಾಗಿ ಬಂಡವಾಳ ಹಿಂಪಡೆಯುತ್ತಿರುವುದು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವು ಷೇರುಪೇಟೆಯ ಇಳಿಮುಖಕ್ಕೆ ಪ್ರಮುಖ ಕಾರಣಗಳಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100.5 ಡಾಲರ್‌ಗೆ (ಶೇ. 0.07 ಏರಿಕೆ) ತಲುಪಿರುವುದು ಆಮದು ಅವಲಂಬಿತ ಭಾರತೀಯ ಮಾರುಕಟ್ಟೆಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಿದೆ.

ವಿನಿಮಯ ಕೇಂದ್ರದ ದತ್ತಾಂಶಗಳ ಪ್ರಕಾರ, ಗುರುವಾರವೊಂದೇ ದಿನ ವಿದೇಶಿ ಹೂಡಿಕೆದಾರರು (FIIs) 7,049.87 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಆದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು (DII) 7,449.77 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿರುವುದು ಮಾರುಕಟ್ಟೆಗೆ ಕೊಂಚ ಆಸರೆಯಾಗಿದೆ.

ನಷ್ಟ-ಲಾಭದ ಷೇರುಗಳ ವಿವರ

ಸೆನ್ಸೆಕ್ಸ್‌ನ 30 ಪ್ರಮುಖ ಕಂಪನಿಗಳ ಪಟ್ಟಿಯಲ್ಲಿ ಲಾರ್ಸೆನ್ ಅಂಡ್ ಟೂಬ್ರೊ (L&T), ಟಾಟಾ ಸ್ಟೀಲ್, ಇಂಡಿಗೋ (InterGlobe Aviation), ಅಲ್ಟ್ರಾಟೆಕ್ ಸಿಮೆಂಟ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಟೆಕ್ ಮಹೀಂದ್ರ ಷೇರುಗಳು ಅತಿ ಹೆಚ್ಚು ನಷ್ಟ ಅನುಭವಿಸಿವೆ. ಪವರ್ ಗ್ರಿಡ್, ಹಿಂದೂಸ್ತಾನ್ ಯೂನಿಲಿವರ್, ಐಟಿಸಿ ಮತ್ತು ಬಜಾಜ್ ಫಿನ್‌ಸರ್ವ್ ಷೇರುಗಳು ಲಾಭದ ಹಳಿಗೆ ಮರಳಿವೆ.

ತಜ್ಞರ ವಿಶ್ಲೇಷಣೆ ಮತ್ತು ಜಾಗತಿಕ ಮಾರುಕಟ್ಟೆ

"ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ತೀವ್ರ ಅನಿಶ್ಚಿತತೆ ಮನೆಮಾಡಿದೆ. ಕಚ್ಚಾ ತೈಲ ಬೆಲೆ 100 ಡಾಲರ್ ಆಸುಪಾಸಿನಲ್ಲಿರುವುದರಿಂದ ಬುಲ್ಸ್ (ಖರೀದಿದಾರರು) ರಕ್ಷಣಾತ್ಮಕ ಹೆಜ್ಜೆ ಇಡುತ್ತಿದ್ದಾರೆ. ವಿದೇಶಿ ಹೂಡಿಕೆದಾರರ ನಿರಂತರ ಮಾರಾಟದಿಂದಾಗಿ ಲಾರ್ಜ್-ಕ್ಯಾಪ್ ಷೇರುಗಳು ತೀವ್ರ ಒತ್ತಡಕ್ಕೆ ಸಿಲುಕಿವೆ" ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ವಿಶ್ಲೇಷಿಸಿದ್ದಾರೆ. ಏಷ್ಯಾದ ಪ್ರಮುಖ ಮಾರುಕಟ್ಟೆಗಳಾದ ದಕ್ಷಿಣ ಕೊರಿಯಾದ ಕಾಸ್ಪಿ, ಜಪಾನ್‌ನ ನಿಕ್ಕಿ, ಶಾಂಘೈ ಕಾಂಪೋಸಿಟ್ ಮತ್ತು ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕಗಳು ಕೂಡ ನಷ್ಟದಲ್ಲಿ ವಹಿವಾಟು ನಡೆಸುತ್ತಿವೆ. ಗುರುವಾರ ಅಮೆರಿಕದ ನಾಸ್ಡಾಕ್, ಡೌಜೋನ್ಸ್ ಹಾಗೂ ಎಸ್‌&ಪಿ 500 ಕೂಡ ತೀವ್ರ ಕುಸಿತ ಕಂಡಿದ್ದವು.

Read More
Next Story