ಕೆಡಿ ಚಿತ್ರದ ಸರ್ಸೆ ಸರ್ಸೆ ಹಾಡಿನ ವಿವಾದ: ಗಾಯಕಿ ಮಂಗ್ಲಿ ಬೇಷರತ್ ಕ್ಷಮೆಯಾಚನೆ
x

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ವ್ಯಕ್ತವಾದ ನಂತರ ಗಾಯಕಿ ಮಂಗ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. 

'ಕೆಡಿ' ಚಿತ್ರದ 'ಸರ್ಸೆ ಸರ್ಸೆ' ಹಾಡಿನ ವಿವಾದ: ಗಾಯಕಿ ಮಂಗ್ಲಿ ಬೇಷರತ್ ಕ್ಷಮೆಯಾಚನೆ

'ಸರ್ಸೆ ಸರ್ಸೆ' ಹಾಡಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅದರ ಹಿಂದಿ ಆವೃತ್ತಿಯನ್ನು ಹಾಡಿದ್ದ ಗಾಯಕಿ ಮಂಗ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ.


Click the Play button to hear this message in audio format

ಧ್ರುವ ಸರ್ಜಾ ಅಭಿನಯದ 'ಕೆಡಿ: ದಿ ಡೆವಿಲ್' ಚಿತ್ರದ 'ಸರ್ಸೆ ಸರ್ಸೆ' ಹಾಡಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅದರ ಹಿಂದಿ ಆವೃತ್ತಿಯನ್ನು ಹಾಡಿದ್ದ ಗಾಯಕಿ ಮಂಗ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಇದೇ ಸಂದರ್ಭದಲ್ಲಿ, ಈ ವಿವಾದಾತ್ಮಕ ಹಾಡಿನಲ್ಲಿ ಹೆಜ್ಜೆಹಾಕಿರುವ ಖ್ಯಾತ ಬಾಲಿವುಡ್ ನಟಿ ನೋರಾ ಫತೇಹಿ ಚಿತ್ರತಂಡದ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಗಾಯಕಿ ಮಂಗ್ಲಿ ಬೇಷರತ್ ಕ್ಷಮೆಯಾಚನೆ

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ವ್ಯಕ್ತವಾದ ನಂತರ ಗಾಯಕಿ ಮಂಗ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. ಸಾರ್ವಜನಿಕರ ಭಾವನೆಗಳಿಗೆ ಗೌರವ ನೀಡಿ ಈ ಹಾಡನ್ನು ಎಲ್ಲಾ ಡಿಜಿಟಲ್ ವೇದಿಕೆಗಳಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗಾಯಕಿ ಮಂಗ್ಲಿ ಸ್ಪಷ್ಟನೆ

ಅರಿಯದೆ ನಡೆದುಹೋದ ಈ ತಪ್ಪಿಗೆ ತಾವು ಪ್ರತಿಯೊಬ್ಬರಲ್ಲೂ ಕ್ಷಮೆ ಕೇಳುವುದಾಗಿ ತಿಳಿಸಿರುವ ಅವರು, ಯಾರಿಗೂ ನೋವು ಮಾಡುವ ಉದ್ದೇಶ ತಮಗಿರಲಿಲ್ಲ ಎಂದಿದ್ದಾರೆ. ಹಾಡಿನ ಸಾಹಿತ್ಯವನ್ನು ತಿದ್ದಲಾಗಿದ್ದು, ಶೀಘ್ರದಲ್ಲೇ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ತಮ್ಮ ಬೆಂಬಲಕ್ಕೆ ನಿಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಚಿತ್ರತಂಡಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ.

ಚಿತ್ರತಂಡದ ವಿರುದ್ಧ ನೋರಾ ಆಕ್ರೋಶ

ಈ ಇಡೀ ವಿವಾದದಿಂದ ಸಂಪೂರ್ಣವಾಗಿ ದೂರವಿರುವುದಾಗಿ ಘೋಷಿಸಿರುವ ನಟಿ ನೋರಾ ಫತೇಹಿ, ಚಿತ್ರತಂಡದ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವು ಮೂರು ವರ್ಷಗಳ ಹಿಂದೆಯೇ ಈ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಅದು 'ನಾಯಕ್ ನಹಿ ಖಲ್ನಾಯಕ್ ಹೂ ಮೇ' ಹಾಡಿನ ರಿಮೇಕ್ ಎಂದು ತಮಗೆ ಹೇಳಲಾಗಿತ್ತು ಎಂದು ಅವರು ವಿಡಿಯೋ ಸಂದೇಶದಲ್ಲಿ ವಿವರಿಸಿದ್ದಾರೆ. ಕನ್ನಡ ಭಾಷೆ ಅರ್ಥವಾಗದ ಕಾರಣ ಚಿತ್ರತಂಡ ಹೇಳಿದ್ದನ್ನು ಮಾತ್ರವೇ ನಂಬಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಹಿಂದಿ ಭಾಷೆಗೆ ಡಬ್ ಮಾಡುವಾಗ ತಮ್ಮ ಯಾವುದೇ ಅನುಮತಿಯಿಲ್ಲದೆ ಅಶ್ಲೀಲ ಸಾಹಿತ್ಯವನ್ನು ಬಳಸಲಾಗಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಜೊತೆಗೆ, ಹಾಡಿನ ಬಿಡುಗಡೆ ಸಮಾರಂಭದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಫೋಟೋಗಳನ್ನು ಬಳಸಿದ್ದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನೋರಾ ಫತೇಹಿ ಸ್ಪಷ್ಟನೆ

ನಿರ್ದೇಶಕರು ಹಾಗೂ ನಿರ್ಮಾಪಕರೇ ಹೊಣೆ

ಕಲಾವಿದರಾಗಿ ಚಿತ್ರದ ಅಂತಿಮ ಹಂತದ ಬಗ್ಗೆ ತಮಗೆ ಹೆಚ್ಚಿನ ನಿಯಂತ್ರಣ ಇರುವುದಿಲ್ಲ ಎಂದು ನೋರಾ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕೇವಲ ಕಲಾವಿದರ ಹೆಸರನ್ನು ಬಳಸಿಕೊಂಡು ಇಂತಹ ವಿವಾದಾತ್ಮಕ ವಿಷಯಗಳನ್ನು ಸೃಷ್ಟಿಸುವ ನಿರ್ದೇಶಕರು ಮತ್ತು ನಿರ್ಮಾಪಕರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಅಶ್ಲೀಲ ಹಾಡಿನ ವಿರುದ್ಧ ತೀವ್ರವಾಗಿ ಧ್ವನಿ ಎತ್ತಿದ ಜನತೆಗೆ ಅವರು ವಿಶೇಷ ಧನ್ಯವಾದ ಅರ್ಪಿಸಿದ್ದಾರೆ. ಈ ಆಕ್ರೋಶದ ಫಲವಾಗಿಯೇ ಚಿತ್ರತಂಡ ಹಾಡನ್ನು ಹಿಂಪಡೆಯುವ ಅನಿವಾರ್ಯತೆಗೆ ಸಿಲುಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ, ನಟಿ ಕಂಗನಾ ರಣಾವತ್, ಗಾಯಕ ಅರ್ಮಾನ್ ಮಲಿಕ್ ಅವರ ವಿರೋಧ ಹಾಗೂ ದೆಹಲಿ ಪೊಲೀಸರ ಸೈಬರ್ ಸೆಲ್‌ನಲ್ಲಿ ದಾಖಲಾದ ಕ್ರಿಮಿನಲ್ ದೂರಿನ ನಂತರ ಚಿತ್ರತಂಡ ಈ ನಿರ್ಧಾರ ಕೈಗೊಂಡಿದೆ.

'ಸರಿಕೆ ಚುನರಿ' ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ನಟಿ ನೋರಾ ಫತೇಹಿ ಕೂಡ ಮೌನ ಮುರಿದಿದ್ದಾರೆ. ಮೌನ ಮುರಿದಿದ್ದು, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಈ ಹಾಡಿನ ಹಿಂದಿ ಅವತರಣಿಕೆಯ ಸಾಹಿತ್ಯ ಮತ್ತು ಮೇಕಿಂಗ್‌ನಿಂದ ತಾವು ಅಂತರ ಕಾಯ್ದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಹಾಡು ಬಿಡುಗಡೆ ಸಮಾರಂಭದಲ್ಲೇ ತಮಗೆ ಈ ಬಗ್ಗೆ ಅತೃಪ್ತಿ ಇತ್ತು ಎಂದು ನೋರಾ ಬಹಿರಂಗಪಡಿಸಿದ್ದಾರೆ. ಲಿರಿಕಲ್ ವಿಡಿಯೋದಲ್ಲಿ ಬಳಸಲಾದ ಎಐ ಫೋಟೋಗಳು ಮತ್ತು ಕೆಲವು ದೃಶ್ಯಗಳು ಸಮರ್ಪಕವಾಗಿರಲಿಲ್ಲ. ಈ ಕುರಿತು ವೇದಿಕೆಯ ಮೇಲೆ ಶಾಂತವಾಗಿದ್ದರೂ, ಆಂತರಿಕವಾಗಿ ತೀವ್ರ ಬೇಸರವಾಗಿತ್ತು ಎಂದು ಅವರು ಹೇಳಿದ್ದಾರೆ. ತಮ್ಮ ವರ್ಚಸ್ಸಿಗೆ ಧಕ್ಕೆ ಬರುವಂತಹ ವಿಷಯಗಳನ್ನು ಒಪ್ಪಲು ಸಾಧ್ಯವಿಲ್ಲದ ಕಾರಣ, ತಾವು ಈ ಯೋಜನೆಯ ಪ್ರಚಾರದಿಂದ ದೂರ ಉಳಿಯಲು ನಿರ್ಧರಿಸಿರುವುದಾಗಿ ನಿರ್ದೇಶಕರಿಗೆ ಮೊದಲೇ ತಿಳಿಸಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಕಲಾವಿದರಿಗೆ ಕೆಲವು ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕಡಿಮೆ ಇರುತ್ತದೆ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ಕೊನೆಗೂ ಜನರ ವಿರೋಧದ ಹಿನ್ನೆಲೆಯಲ್ಲಿ ವಿವಾದಿತ ಹಿಂದಿ ಹಾಡನ್ನು ತೆಗೆದುಹಾಕಿರುವುದಕ್ಕೆ ಸಮಾಧಾನ ವ್ಯಕ್ತಪಡಿಸಿದ್ದಾರೆ.

Read More
Next Story