ಸಾರಾ ಅಲಿ ಖಾನ್‌ಗೆ ಸನಾತನ ಪರೀಕ್ಷೆ: ಕೇದಾರನಾಥ ಪ್ರವೇಶಕ್ಕೆ ಬೇಕು ಅಫಿಡವಿಟ್
x

ನಾನು ಸನಾತನಿ ಎಂದು ಬರೆದುಕೊಡಬೇಕು ನಟಿ ಸಾರಾ

ಸಾರಾ ಅಲಿ ಖಾನ್‌ಗೆ 'ಸನಾತನ' ಪರೀಕ್ಷೆ: ಕೇದಾರನಾಥ ಪ್ರವೇಶಕ್ಕೆ ಬೇಕು ಅಫಿಡವಿಟ್

ಬದರಿನಾಥ ಕೇದಾರನಾಥ ದೇವಾಲಯ ಪ್ರವೇಶಕ್ಕೆ ನಟಿ ಸಾರಾ ಅಲಿ ಖಾನ್‌ಗೆ ಬಿ ಕೆ ಟಿಸಿ ಹೊಸ ಷರತ್ತು ವಿಧಿಸಿದೆ. ಸನಾತನ ಧರ್ಮದ ಮೇಲೆ ನಂಬಿಕೆ ಇದೆ ಎಂದು ಅಫಿಡವಿಟ್ ಸಲ್ಲಿಸುವುದು ಇನ್ಮುಂದೆ ಕಡ್ಡಾಯ.


Click the Play button to hear this message in audio format

ಬದರಿನಾಥ ಮತ್ತು ಕೇದಾರನಾಥ ದೇಗುಲಗಳಿಗೆ ಭೇಟಿ ನೀಡುವ ಸಂಬಂಧ ನಟಿ ಸಾರಾ ಅಲಿ ಖಾನ್ ಅವರು ಈ ಬಾರಿ ಹೊಸ ನಿಯಮವನ್ನು ಎದುರಿಸಬೇಕಾಗಿದೆ. ಸನಾತನ ಧರ್ಮದ ಮೇಲೆ ತಮಗೆ ನಂಬಿಕೆ ಇದೆ ಎಂದು ಪ್ರಮಾಣಪತ್ರ (ಅಫಿಡವಿಟ್) ಸಲ್ಲಿಸಿದರೆ ಮಾತ್ರ ಅವರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಬದರಿ-ಕೇದಾರ್ ದೇಗುಲ ಸಮಿತಿ ಅಧ್ಯಕ್ಷ ಹೇಮಂತ್ ದ್ವಿವೇದಿ ಸ್ಪಷ್ಟಪಡಿಸಿದ್ದಾರೆ.

ಮಾರ್ಚ್ 10 ರಂದು ನಡೆದ ಸಮಿತಿಯ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಹಿಂದೂಯೇತರರು ಈ ಪವಿತ್ರ ಕ್ಷೇತ್ರಗಳನ್ನು ಪ್ರವೇಶಿಸಬೇಕಾದರೆ ತಾವು ಸನಾತನಿಗಳು ಮತ್ತು ಹಿಂದುತ್ವದಲ್ಲಿ ನಂಬಿಕೆ ಹೊಂದಿದ್ದೇವೆ ಎಂಬ ಲಿಖಿತ ಘೋಷಣೆಯನ್ನು ನೀಡಬೇಕಾಗುತ್ತದೆ. ಸಾರಾ ಅಲಿ ಖಾನ್ ಅವರ ತಂದೆ ಮುಸ್ಲಿಂ ಮತ್ತು ತಾಯಿ ಸಿಖ್ ಧರ್ಮಕ್ಕೆ ಸೇರಿದವರಾಗಿರುವುದರಿಂದ, ಅವರು ದೇಗುಲ ಪ್ರವೇಶಿಸುವ ಮುನ್ನ ಈ ವಿಧಿವಿಧಾನವನ್ನು ಪೂರೈಸಬೇಕಾಗುತ್ತದೆ ಎಂದು ಸಮಿತಿ ತಿಳಿಸಿದೆ. ಈ ಹೊಸ ನಿಯಮವು ಕೇವಲ ಸಾರಾ ಅವರಿಗೆ ಮಾತ್ರವಲ್ಲದೆ, ಶ್ರದ್ಧಾ ಭಕ್ತಿಯಿಂದ ಬರುವ ಎಲ್ಲಾ ಹಿಂದೂಯೇತರರಿಗೂ ಅನ್ವಯಿಸಲಿದೆ.

ಕಂಗನಾ ರಣಾವತ್ ಪ್ರತಿಕ್ರಿಯೆ

ಈ ಬೆಳವಣಿಗೆಯ ಕುರಿತು ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದು, ಸತ್ಯವನ್ನು ಹೇಳಲು ಅಥವಾ ಬರೆದುಕೊಡಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದ್ದಾರೆ. ನಾವೆಲ್ಲರೂ ಸನಾತನಿಗಳೇ ಆಗಿರುವಾಗ ಈ ಬಗ್ಗೆ ಪ್ರಮಾಣಪತ್ರ ನೀಡಲು ಹೆದರುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ತಿರುಪತಿಯಲ್ಲಿ ಪವನ್ ಕಲ್ಯಾಣ್ ಅವರ ಪುತ್ರಿ ಕೂಡ ಇದೇ ಮಾದರಿಯ ನಂಬಿಕೆಯ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು. ಏಪ್ರಿಲ್ ತಿಂಗಳಿನಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಲಿದ್ದು, ಈಗಾಗಲೇ ಲಕ್ಷಾಂತರ ಭಕ್ತರು ನೋಂದಣಿ ಮಾಡಿಕೊಂಡಿದ್ದಾರೆ.

ಸಾರಾ ಅಲಿ ಖಾನ್ ಅವರಿಗೆ ಕೇದಾರನಾಥದೊಂದಿಗೆ ವಿಶೇಷ ಭಾವನಾತ್ಮಕ ಸಂಬಂಧವಿದ್ದು, ಈ ಹಿಂದೆ ಅನೇಕ ಬಾರಿ ಅವರು ಅಲ್ಲಿಗೆ ಭೇಟಿ ನೀಡಿದ್ದಾರೆ. ತಮ್ಮ ಧಾರ್ಮಿಕ ಗುರುತಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಈ ಹಿಂದೆ ಉತ್ತರಿಸಿದ್ದ ಅವರು, ತಾವು ಭಾರತೀಯರೆಂದು ಗುರುತಿಸಿಕೊಳ್ಳಲು ಬಯಸುವುದಾಗಿ ಮತ್ತು ಕೇದಾರನಾಥದಲ್ಲಿ ತಮಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದ್ದರು. ಆದರೆ ಪ್ರಸಕ್ತ ವರ್ಷದ ಯಾತ್ರೆಯ ವೇಳೆ ಅವರು ಈ ಹೊಸ ನಿಯಮಕ್ಕೆ ಹೇಗೆ ಸ್ಪಂದಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Read More
Next Story