IPL 2026 | Opening match in Bengaluru, who will be RCBs opponent? Here is the full list
x

ಎಂ. ಚಿನ್ನಸ್ವಾಮಿ ಕ್ರೀಡಾಂಗಣ

IPL 2026 |ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಐಪಿಎಲ್‌ ಉದ್ಘಾಟನಾ ಪಂದ್ಯ; ಆರ್‌ಸಿಬಿ ಎದುರಾಳಿ ಯಾರು?

ಕೆಎಸ್‌ಸಿಎ ಹಾಗೂ ಆರ್‌ಸಿಬಿ ಆಡಳಿತ ಮಂಡಳಿಯ ನಿರಂತರ ಪ್ರಯತ್ನದ ಫಲವಾಗಿ ಹಾಗೂ ನಿವೃತ್ತ ನ್ಯಾಯಮೂರ್ತಿ ಕುನ್ಹಾ ವರದಿ ಅನುಷ್ಠಾನಗೊಳಿಸುವ ಷರತ್ತಿನೊಂದಿಗೆ ರಾಜ್ಯ ಸರ್ಕಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಆಡಿಸಲು ಅನುಮತಿ ನೀಡಿತ್ತು.


Click the Play button to hear this message in audio format

ಕಳೆದ ಒಂದು ತಿಂಗಳಿಂದ ಟಿ-20 ವಿಶ್ವಕಪ್‌ ಪಂದ್ಯಗಳ ರಸದೌತಣ ಸವಿದಿದ್ದ ಕ್ರಿಕೆಟ್‌ ಅಭಿಮಾನಿಗಳಿಗೆ ಬಿಸಿಸಿಐ ಸಿಹಿ ಸುದ್ದಿ ನೀಡಿದೆ. 19 ನೇ ಆವೃತ್ತಿಯ ಐಪಿಎಲ್‌ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾ.28 ರಿಂದ ಪಂದ್ಯಗಳು ಆರಂಭವಾಗಲಿವೆ.

ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ 2025ರ ಚಾಂಪಿಯನ್ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಹೈದರಾಬಾದ್‌ ಸನ್‌ರೈಸರ್ಸ್‌ ತಂಡಗಳು ಮುಖಾಮುಖಿಯಾಗಲಿದ್ದು, ಏಪ್ರಿಲ್‌ 12 ರವರೆಗೂ ಮೊದಲ ಹಂತದಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿವೆ.

ಬೆಂಗಳೂರಿನಲ್ಲೇ ಉದ್ಘಾಟನಾ ಪಂದ್ಯ

ಕಳೆದ ವರ್ಷ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದಿದ್ದ ಕಾಲ್ತುಳಿತ ದುರಂತದ ನಂತರ ಬೆಂಗಳೂರಿನಲ್ಲಿ ಯಾವುದೇ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪಂದ್ಯಗಳನ್ನು ಆಡಲು ರಾಜ್ಯ ಸರ್ಕಾರ ಅನುಮತಿ ನೀಡಿರಲಿಲ್ಲ. ಕೆಎಸ್‌ಸಿಎ ಹಾಗೂ ಆರ್‌ಸಿಬಿ ಆಡಳಿತ ಮಂಡಳಿ ನಿರಂತರ ಪ್ರಯತ್ನದ ಫಲವಾಗಿ ಹಾಗೂ ನಿವೃತ್ತ ನ್ಯಾಯಮೂರ್ತಿ ಕುನ್ಹಾ ವರದಿ ಅನುಷ್ಠಾನಗೊಳಿಸುವ ಷರತ್ತಿನೊಂದಿಗೆ ರಾಜ್ಯ ಸರ್ಕಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಆಡಿಸಲು ಅನುಮತಿ ನೀಡಿತ್ತು. ಇದೀಗ ಬಿಸಿಸಿಐ ಕೂಡ ಐಪಿಎಲ್‌ ಉದ್ಘಾಟನಾ ಪಂದ್ಯವನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸುತ್ತಿರುವುದಕ್ಕೆ ಆರ್‌ಸಿಬಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ವೇಳಾಪಟ್ಟಿ

ಮಾ.28ರಿಂದ ಆರಂಭವಾಗುವ ಐಪಿಎಲ್‌ ಮೊದಲ ಹಂತದ ಪಂದ್ಯಗಳು ಏ.12ಕ್ಕೆ ಮುಕ್ತಾಯಗೊಳ್ಳಲಿವೆ. ಅಸ್ಸಾಂ, ಕೇರಳ ಹಾಗೂ ಪಶ್ಚಿಮ ಬಂಗಾಳ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಮಾ.28: ಆರ್‌ಸಿಬಿ VS ಎಸ್‌ಆರ್‌ಎಚ್‌ - ಬೆಂಗಳೂರು

ಮಾ.29: ಎಂಐ VS ಕೆಕೆಆರ್‌ - ಮುಂಬೈ

ಮಾ.30: ಆರ್‌ಆರ್‌ VS ಸಿಎಸ್‌ಕೆ - ಗುಹವಾಟಿ

ಮಾ.31: ಪಿಬಿಕೆಎಸ್‌ VS ಜಿಟಿ - ಮುಲ್ಲನ್‌ಪುರ

ಏ.1 : ಎಲ್‌ಎಸ್‌ಜಿ VS ಡಿಸಿ - ಲಕ್ನೋ

ಏ.2 : ಕೆಕೆಆರ್‌ VS ಎಸ್‌ಆರ್‌ಎಚ್‌ - ಕೊಲ್ಕತ್ತ

ಏ.3 : ಸಿಎಸ್‌ಕೆ VS ಪಿಬಿಕೆಎಸ್‌ - ಚೆನ್ನೈ

ಏ.4: ಡಿಸಿ VS ಎಂಐ - ದೆಹಲಿ

ಏ.5: ಎಸ್‌ಆರ್‌ಎಚ್‌ VS ಎಲ್‌ಎಸ್‌ಜಿ - ಹೈದರಾಬಾದ್‌

ಆರ್‌ಸಿಬಿ VS ಸಿಎಸ್‌ಕೆ - ಬೆಂಗಳೂರು

ಏ.6: ಕೆಕೆಆರ್‌ VS ಪಿಬಿಕೆಎಸ್‌ - ಕೊಲ್ಕತ್ತ

ಏ.7: ಆರ್‌ಆರ್‌ VS ಎಂಐ - ಗುಹವಾಟಿ

ಏ.8: ಡಿಸಿ VS ಜಿಟಿ - ದೆಹಲಿ

ಏ.9: ಕೆಕೆಆರ್‌ VS ಎಲ್‌ಎಸ್‌ಜಿ - ಕೊಲ್ಕತ್ತ

ಏ.10: ಆರ್‌ಆರ್‌ VS ಆರ್‌ಸಿಬಿ - ಗುಹವಾಟಿ

ಏ.11: ಪಿಬಿಕೆಎಸ್‌ VS ಎಸ್‌ಆರ್‌ಎಚ್‌ - ಮುಲ್ಲನ್‌ಪುರ

ಸಿಎಸ್‌ಕೆ VS ಡಿಸಿ - ಚೆನ್ನೈ

ಏ.12: ಎಲ್‌ಎಸ್‌ಜಿ VS ಜಿಟಿ - ಲಕ್ನೋ

ಎಂಐ VS ಆರ್‌ಸಿಬಿ - ಮುಂಬೈ

ಐಪಿಎಲ್‌ ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಶೀಘ್ರವೇ ಪ್ರಕಟಿಸಲಿದೆ.

Read More
Next Story