Karnataka Budget 2025 Live: ಕರ್ನಾಟಕ ಬಜೆಟ್ ಗಾತ್ರವೆಷ್ಟು, ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು? ಇಲ್ಲಿದೆ ಎಲ್ಲ ಮಾಹಿತಿ
ಕೃಷಿಗೆ ಸಿಎಂ ಕೊಟ್ಟಿದ್ದೇನು?
50 ಸಾವಿರ ರೈತರಿಗೆ ಸಹಾಯಧನ- 428 ಕೋಟಿ ರೂ. ಅನುದಾನ ಮೀಸಲು
1.81 ಲಕ್ಷ ರೈತರಿಗೆ ತುಂತುರು ನೀರಾವರಿ ಯೋಜನೆ, ಇದಕ್ಕೆ 400 ಕೋಟಿ ರೂ. ಅನುದಾನ
ರೇಷ್ಮೆ ಅಭಿವೃದ್ಧಿ ಯೋಜನೆಗೆ 55 ಕೋಟಿ ರೂ.
ಬಿಸಿಯೂಟ ಕಾರ್ಯಕರ್ತೆಯರ ಗೌರವಧನ ಹೆಚ್ಚಳ
1 ಸಾವಿರ ರೂ. ಹೆಚ್ಚಿಸಿದ ರಾಜ್ಯ ಸರ್ಕಾರ, ಮಾಸಿಕ 1 ಸಾವಿರ ರೂಪಾಯಿ ಏರಿಕೆ, ಅತಿಥಿ ಶಿಕ್ಷಕರಿಗೆ 2 ಸಾವಿರ ರೂ. ಹೆಚ್ಚಳ
ಪತ್ರಕರ್ತರಿಗೂ ಸಿಎಂ ಸಂಜೀವಿನಿ ಯೋಜನೆ
2,500 ಪತ್ರಕರ್ತರಿಗೆ ಸಂಜೀವಿನಿ ಯೋಜನೆ
5 ಲಕ್ಷ ರೂ.ವರೆಗೆ ಕ್ಯಾಶ್ ಲೆಸ್ ಚಿಕಿತ್ಸೆ
ಪತ್ರಕರ್ತರಿಗೆ ವಿಮಾ ಯೋಜನೆ ಘೋಷಣೆ
ಇಲಾಖೆವಾರು ಅನುದಾನ
ಗ್ರಾಮೀಣಾಭಿವೃದ್ಧಿ- 26,735 ಕೋಟಿ ರೂ.
ಲೋಕೋಪಯೋಗಿ- 11,841 ಕೋಟಿ ರೂ.
ಶಿಕ್ಷಣ- 45,286 ಕೋಟಿ ರೂ.
ಮಹಿಳಾ ಯೋಜನೆಗಳು- 82 ಸಾವಿರ ಕೋಟಿ ರೂ
ಸರ್ಕಾರಿ ಶಾಲೆಗಳ ಉನ್ನತೀಕರಣ
ವಾರದಲ್ಲಿ 2 ದಿನ ಮೊಟ್ಟೆ, ಬಾಳೆಹಣ್ಣು, 100 ಸರ್ಕಾರಿ ಶಾಲೆಗಳ ಉನ್ನತೀಕರಣ, 50 ಪ್ರೌಢಶಾಲೆಗಳ ಉನ್ನತೀಕರಣ, 500 ನೂತನ ಶಾಲೆಗಳ ನಿರ್ಮಾಣ
ಗ್ಯಾರಂಟಿ ಯೋಜನೆಗಳಿಗೆ ಬಂಪರ್ ಕೊಡುಗೆ. 5 ಯೋಜನೆ ಜಾರಿಗೆ 51 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟ ಸಿಎಂ. ಮತ್ತೊಂದು ವರ್ಷ ಗ್ಯಾರಂಟಿ ವಿಸ್ತರಣೆ.
ನೀರಾವರಿ ಯೋಜನೆಗಳಿಗೆ ಆದ್ಯತೆ
ಎತ್ತಿನಹೊಳೆ ಯೋಜನೆಗೆ 553 ಕೋಟಿ ರೂ. ಅನುದಾನ, ವವೃಷಭಾವತಿ ವ್ಯಾಲಿಗೆ 1,080 ಕೋಟಿ ರೂಪಾಯಿ ಘೋಷಣೆ.
ಸಿನಿಮಾ ಟಿಕೆಟ್ ಗೆ ದರ ನಿಗದಿ
200 ರೂ. ದರ ನಿಗದಿ ಮಾಡಿದ ಸಿಎಂ ಸಿದ್ದರಾಮಯ್ಯ, ಇದಕ್ಕಿಂತ ಹೆಚ್ಚಿನ ಮೊತ್ತ ಸ್ವೀಕರಿಸುವಂತಿಲ್ಲ. ಸಿನಿಪ್ರಿಯರಿಗೆ ಇದು ಶುಭ ಸುದ್ದಿ. ಮಲ್ಟಿಪ್ಲೆಕ್ಸ್ ಗಳಿಗೆ ಕಡಿವಾಣ ಹಾಕಿದ ಸರ್ಕಾರ.
ಕುಳಿತುಕೊಂಡೇ ಬಜೆಟ್ ಭಾಷಣ ಮಂಡಿಸಿದ ಸಿಎಂ ಸಿದ್ದರಾಮಯ್ಯ
ಮಂಡಿ ನೋವಿನ ಸಮಸ್ಯೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 16ನೇ ಬಜೆಟ್ ಅನ್ನು ಕುಳಿತುಕೊಂಡೇ ಮಂಡಿಸಿದರು. ಆದರೆ, ಹಿಂದಿನ ಉತ್ಸಾಹದಿಂದಲೇ ಬಜೆಟ್ ಮಂಡನೆ ಮಾಡಿದರು.