Federal Karnataka Live: ತಿರುಪತಿಯಲ್ಲಿ ಕಾಲ್ತುಳಿತ ; ಮೃತಪಟ್ಟವರಿಗೆ 25 ಲಕ್ಷ ರೂಪಾಯಿ ಪರಿಹಾರ

ವಿಶೇಷ ದರ್ಶನಕ್ಕಾಗಿ ಟೋಕನ್ ಪಡೆಯಲು 4,000 ಕ್ಕೂ ಹೆಚ್ಚು ಭಕ್ತರ ಗುಂಪು ಸಾಲುಗಟ್ಟಿ ನಿಂತಿದ್ದರಿಂದ ಭಾರಿ ಗೊಂದಲ ಮತ್ತು ಕೋಲಾಹಲಕ್ಕೆ ಕಾರಣವಾಯಿತು. ಜನದಟ್ಟಣೆ ಮತ್ತು ಆಡಳಿತದ ಲೋಪದಿಂದಾಗಿ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.;

Update: 2025-01-09 04:54 GMT
ತಿರುಪತಿ ದೇವಸ್ಥಾನ.

ವಿಶ್ವ ವಿಖ್ಯಾತ ತಿರುಪತಿಯ ತಿರುಮಲ ದೇವಸ್ಥಾನದಲ್ಲಿ ಬುಧವಾರ ರಾತ್ರಿ ‘ವೈಕುಂಠ ದ್ವಾರ ದರ್ಶನ’ದ ಟೋಕನ್ ಪಡೆದುಕೊಳ್ಳುವ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದ್ದು, ಆರು ಮಂದಿ ಭಕ್ತರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಂಪಿನಲ್ಲಿ ಸಿಲುಕಿದ್ದ ಮಳೆಯೊಬ್ಬರನ್ನು ರಕ್ಷಿಸಲು ಗೇಟ್‌ ತೆರೆದಿದ್ದೇ ಘಟನೆಗೆ ಕಾರಣ ಎಂದು ಮೂಲಗಳು ತಿಳಿಸಿವೆ. ನೂಕುನುಗ್ಗಲಿನಿಂದ ‌150ಕ್ಕೂ ಅಧಿಕ ಭಕ್ತರು ಗಾಯಗೊಂಡಿದ್ದಾರೆ.

ವಿಶೇಷ ದರ್ಶನಕ್ಕಾಗಿ ಟೋಕನ್ ಪಡೆಯಲು 4,000 ಕ್ಕೂ ಹೆಚ್ಚು ಭಕ್ತರ ಗುಂಪು ಸಾಲುಗಟ್ಟಿ ನಿಂತಿದ್ದರಿಂದ ಭಾರಿ ಗೊಂದಲ ಮತ್ತು ಕೋಲಾಹಲಕ್ಕೆ ಕಾರಣವಾಯಿತು. ಜನದಟ್ಟಣೆ ಮತ್ತು ಆಡಳಿತದ ಲೋಪದಿಂದಾಗಿ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಮಾಹಿತಿಯ ಪ್ರಕಾರ, ಬೈರಾಗಿ ಪಟ್ಟಿಡಾ ಪಾರ್ಕ್‌ನ ಟೋಕನ್ ಕೌಂಟರ್‌ಗಳಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿದ್ದ ಆರು ಬಲಿಪಶುಗಳಲ್ಲಿ ಒಬ್ಬರಾದ ಮಲ್ಲಿಕಾ ಎಂಬುವರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದರು. ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲು ಗೇಟ್ ಗಳನ್ನು ತೆರೆಯಲಾಗಿತ್ತು. ಈ ವೇಳೆ ಏಕಾಏಕಿ ಸಾವಿರಾರು ಮಂದಿ ನುಗ್ಗಿದ್ದ ಕಾರಣ ದುರ್ಘಟನೆ ಸಂಭವಿಸಿದೆ.

Live Updates
2025-01-09 09:35 GMT

ತಿರುಪತಿ ಕಾಲ್ತುಳಿತ: ಟಿಟಿಡಿ ಇತಿಹಾಸದಲ್ಲೇ ಕರಾಳ ದಿನ ಎಂದ ಆಂಧ್ರದ ಮಾಜಿ ಸಚಿವ

ತಿರುಪತಿಯಲ್ಲಿ ಕಾಲ್ತುಳಿತದಲ್ಲಿ ಉಂಟಾದ ಜೀವಹಾನಿಗೆ ಟಿಡಿಪಿ ಸರ್ಕಾರವೇ ಹೊಣೆ ಎಂದು ಆಂಧ್ರಪ್ರದೇಶದ ಮಾಜಿ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಗುಡಿವಾಡ ಅಮರನಾಥ್ ಆರೋಪಿಸಿದ್ದಾರೆ. "ಕಾಲ್ತುಳಿತದ ಘಟನೆಗಳು ಹಿಂದೆಂದೂ ಸಂಭವಿಸಿಲ್ಲ. ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ತಕ್ಷಣ ರಾಜಕೀಯ ಭಾಷಣಗಳನ್ನು ಮಾಡಲು ಪ್ರಾರಂಭಿಸಿದರು, ಎಂದು ಅವರು ಆರೋಪಿಸಿದ್ದಾರೆ. 

2025-01-09 09:34 GMT

ತಮಿಳುನಾಡು ಮೂಲದ ಸಂತ್ರಸ್ತರಿಗೆ ಆರ್ಥಿಕ ನೆರವು ಘೋಷಿಸಿದ ಅಲ್ಲಿನ ಸಿಎಂ ಎಂ .ಕೆ.ಸ್ಟಾಲಿನ್

2025-01-09 07:30 GMT

ವೈಕುಂಠ ಏಕಾದಶಿ ದರ್ಶನದ ವಿಶೇಷ ಟಿಕೆಟ್‌ ಪಡೆಯಲು ನಿಂತಿದ್ದ ಗುಂಪಿನಲ್ಲಿ ಗಲಾಟೆ ನಡೆದ ಕಾರಣ ಅನೇಕ ಭಕ್ತರು ಗಾಯಗೊಂಡು ಆರು ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ತಿರುಪತಿ ಪೂರ್ವ ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.  ಮೃತಪಟ್ಟವರ ಎರಡು ಕುಟುಂಬಗಳು ನೀಡಿದ ದೂರುಗಳನ್ನು ಆಧರಿಸಿ ಎಫ್‌ಐಆರ್‌ ದಾಖಲಾಗಿದೆ. 

2025-01-09 06:46 GMT

ಸಮ್ಮಿಶ್ರ ಸರ್ಕಾರದವಿರುದ್ಧ ಮಾಜಿ ಅಧ್ಯಕ್ಷ

ತಿರುಪತಿಯ ವಿಷ್ಣು ನಿವಾಸದಲ್ಲಿ ಸಂಭವಿಸಿದ ದುರಂತ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಟಿಟಿಡಿ ಮಾಜಿ ಅಧ್ಯಕ್ಷ ಭೂಮಾ ಕರುಣಾಕರ ರೆಡ್ಡಿ ಅವರು ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಆಡಳಿತ ವೈಫಲ್ಯ ಎಂದು ಹೇಳಿದ್ದಾರೆ. 

2025-01-09 06:09 GMT

ವೆಂಕಟೇಶ್ವರ ದ್ವಾರ ಪ್ರವೇಶಕ್ಕೆ ಸಕಲ ವ್ಯವಸ್ಥೆ

ಶುಕ್ರವಾರ ಆರಂಭವಾಗಲಿರುವ ವೈಕುಂಠ ಏಕಾದಶಿಗೆ ಮುಂಚಿತವಾಗಿ ಸಾಕಷ್ಟು ವ್ಯವಸ್ಥೆಗಳು ಮಾಡಲಾಗಿದೆ ಎಂದು ತಿರುಪತಿ ಜಿಲ್ಲಾಧಿಕಾರಿ ಎಸ್ ವೆಂಕಟೇಶ್ವರ್ ಮಾಹಿತಿ ನೀಡಿದರು. ಜನವರಿ 10 ರಿಂದ 19 ರವರೆಗೆ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನ ನಡೆಯಲಿದೆ. ಭಗವಾನ್ ವೆಂಕಟೇಶ್ವರನ ಆಶೀರ್ವಾದವನ್ನು ಪಡೆಯಲು ಭಕ್ತರಿಗೆ ದ್ವಾರದ ಮೂಲಕ ಹಾದುಹೋಗಲು ಅವಕಾಶ ಇದೆ ಎಂದು ಹೇಳಿದ್ದಾರೆ. 

2025-01-09 05:22 GMT

ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಗುರುವಾರ ಮುಂಜಾನೆ ತಿರುಪತಿಯ ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಾ ಸರ್ಕಾರಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ  ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದರು. 

2025-01-09 05:03 GMT

ತಿರುಪತಿ ಕಾಲ್ತುಳಿತ ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗುರುವಾರ ಪರಿಶೀಲನಾ ಸಭೆ ಕರೆದಿದ್ದಾರೆ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ವಕ್ತಾರರು ತಿಳಿಸಿದ್ದಾರೆ.

2025-01-09 04:59 GMT

ತಿರುಪತಿಯಲ್ಲಿ ಕಾಲ್ತುಳಿತದಿಂದಾಗಿ ಭಕ್ತರು ಪ್ರಾಣ ಕಳೆದುಕೊಂಡಿರುವುದನ್ನು ತಿಳಿದು ದುಃಖಿತನಾಗಿದ್ದೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಹೇಳಿದ್ದಾರೆ ಮತ್ತು ದುಃಖಿತ ಕುಟುಂಬಗಳಿಗೆ ತಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸಿದರು.

Tags:    

Similar News