ಗುಲ್ಮಾರ್ಗ್ ನಲ್ಲಿ ಹಿಮಪ್ರವಾಹ: ವಿದೇಶಿಯ ಸಾವು, ಮತ್ತೊಬ್ಬರು ನಾಪತ್ತೆ

Update: 2024-02-22 10:45 GMT

ಶ್ರೀನಗರ, ಫೆ. 22- ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನ ಇಳಿಜಾರುಗಳಲ್ಲಿ ಗುರುವಾರ ಹಿಮಪ್ರವಾಹ ಸಂಭವಿಸಿದ್ದು, ವಿದೇಶಿಯ ರೊಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಹಿಮಪ್ರವಾಹವು ಕಾಂಗ್‌ದೂರಿ ಇಳಿಜಾರುಗಳನ್ನು ಅಪ್ಪಳಿಸಿದ್ದು, ಹಲವಾರು ಮಂದಿ ಸಿಕ್ಕಿಬಿದ್ದಿದ್ದಾರೆ. ಐವರನ್ನು ರಕ್ಷಿಸಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ವಿದೇಶಿಗರು ಸ್ಥಳೀಯ ನಿವಾಸಿಗಳಿಲ್ಲದೆ ಹಿಮದಾಟಕ್ಕೆ ಮುಂದಾಗಿದ್ದರು ಎಂದು ಹೇಳಿದರು. ಸೇನೆಯ ಸಿಬ್ಬಂದಿ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತದ ಗಸ್ತು ತಂಡ ರಕ್ಷಣೆ ಮತ್ತು ಶೋಧ ಕಾರ್ಯಾಚರಣೆ ನಡೆಸುತ್ತಿದೆ. 

Similar News