ಪತ್ನಿ ಗೀತಾ ಸಂಸದೆಯಾಗುವುದನ್ನು ನೋಡುವ ಆಸೆ ಇದೆ: ನಟ ಶಿವರಾಜ್‌ ಕುಮಾರ್‌

ನನ್ನ ಪತ್ನಿ ಸಂಸದೆಯಾಗಲಿ ಎಂಬ ಆಸೆ ನನಗೆ ಇದೆ ಎಂದು ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್​ಕುಮಾರ್ ಹೇಳಿದ್ದಾರೆ.;

Update: 2024-03-02 11:56 GMT
ನನ್ನ ಪತ್ನಿ ಸಂಸದೆಯಾಗಲಿ ಎಂಬ ಆಸೆ ಇದೆ ಎಂದ ಹಾಟ್ರಿಕ್‌ ಹೀರೋ
Click the Play button to listen to article

ನನ್ನ ಪತ್ನಿ ಸಂಸದೆಯಾಗಲಿ ಎಂಬ ಆಸೆ ನನಗೆ ಇದೆ ಎಂದು ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್​ ಕುಮಾರ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹುಟ್ಟು ಹಬ್ಬ ಆಚರಣೆ ಹಿನ್ನಲೆ ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಮತ್ತಿತರರು ಭಾಗಿಯಾಗಿದ್ದರು. ಆ ಸಂದರ್ಭ ಅವರು ಮಾತನಾಡಿದ್ದಾರೆ.

ನಾನು ರಾಜಕೀಯಕ್ಕೆ ಬರುವುದಿಲ್ಲ. ರಾಜಕೀಯ ನನ್ನ ರಂಗವಲ್ಲ. ಸಮಾಜಸೇವೆಗೆ ನನಗೆ ಬೇರೆ ಆಯ್ಕೆಗಳಿವೆ. ಆದರೆ, ನನ್ನ ಪತ್ನಿ ಗೀತಾ ರಕ್ತದಲ್ಲೇ ರಾಜಕಾರಣ ಇದೆ. ಆಕೆಗೆ ಪಕ್ಷ ಟಿಕೆಟ್‌ ನೀಡಿದರೆ, ಸಂಸದೆಯಾಗಿ ಆಯ್ಕೆಯಾಗುವುದನ್ನು ನೋಡಬೇಕು ಎಂಬ ಆಸೆ ಇದೆ. ಈ ಮೂಲಕ ಆಕೆ ಮಹಿಳೆಯರಿಗೆ ಮಾದರಿಯಾಗಲಿ. ಒಬ್ಬ ಪತಿಯಾಗಿ ನಾನು‌ ಗೀತಾಳನ್ನು ಸಪೋರ್ಟ್ ಮಾಡುತ್ತೇನೆ. ಶಿವಮೊಗ್ಗದಲ್ಲಿ ಗೀತಾ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಪ್ರಚಾರದ ಕಡೆಗೆ ಗಮನ ಹರಿಸಿಲ್ಲ. ಜನರೊಂದಿಗೆ ಇದ್ದರೆ ಸಾಕು. ಜನ ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಶಿವರಾಜ್​ಕುಮಾರ್ ಹೇಳಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಗೀತಾ ಶಿವರಾಜ್‌ ಕುಮಾರ್‌ ಅವರ ಹೆಸರು ಇದೆ. ಆ ಹಿನ್ನೆಲೆಯಲ್ಲಿ ತಮ್ಮ ಸಹೋದರ, ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬವನ್ನು ಬೆಂಗಳೂರಿನಲ್ಲಿ ಮಾಡದೆ ಶಿವಮೊಗ್ಗದಲ್ಲಿ ಗೀತಾ ಮತ್ತು ಶಿವರಾಜ್‌ ಕುಮಾರ್‌ ನೇತೃತ್ವದಲ್ಲಿ ಆಚರಿಸಿರುವುದು ಗಮನಾರ್ಹ. 

Tags:    

Similar News