ʻಡೆವಿಲ್‌ʼ ಬಂದಾಯ್ತು ಚಿನ್ನ! ಫಸ್ಟ್‌ ಡೇ ಫಸ್ಟ್‌ ಶೋ ನೋಡಿದ ದರ್ಶನ್‌ ಪತ್ನಿ, ಪುತ್ರ

ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್‌ ಇಂದು ʻಡೆವಿಲ್‌ʼ ಫಸ್ಟ್‌ ಡೇ ಫಸ್ಟ್‌ ಶೋ ನೋಡಲು ಆಗಮಿಸಿದ್ದು ದರ್ಶನ್‌ ಅಭಿಮಾನಿಗಳ ಸಂಭ್ರಮವನ್ನು ದುಪ್ಪಟ್ಟುಗೊಳಿಸಿತು.

Update: 2025-12-11 04:47 GMT
ಡೆವಿಲ್‌ ವೀಕ್ಷಿಸಿದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ
Click the Play button to listen to article

ಡಿ ಬಾಸ್‌ ಫ್ಯಾನ್ಸ್‌ ಬಹಳ ಕಾತರದಿಂದ ಕಾಯುತ್ತಿದ್ದ ಡೆವಿಲ್‌ ಕೊನೆಗೂ ಇಂದು ತೆರೆ ಕಂಡಿದೆ. ಬರೋಬ್ಬರಿ ಎರಡು ವರ್ಷಗಳ ನಂತರ ತಮ್ಮ ನೆಚ್ಚಿನ ನಟನನ್ನು ಬೆಳ್ಳಿ ಪರದೆಯಲ್ಲಿ ಕಂಡ ಅಭಿಮಾನಿಗಳ ಸಂಭ್ರಮಕ್ಕೆ ಎಲ್ಲೆಯೇ ಇಲ್ಲದಂತಾಗಿದೆ. ದರ್ಶನ್‌ ಅವರ ಅನುಪಸ್ಥಿತಿಯಲ್ಲೇ ಇಂದು ರಾಜ್ಯಾದ್ಯಂತ ತೆರೆಕಂಡಿರುವ ʻಡೆವಿಲ್‌ʼಗೆ ನಿರೀಕ್ಷೆಯಂತೆ ಬಿಗ್‌ ರೆಸ್ಪಾನ್ಸ್‌ ಸಿಕ್ಕಿದೆ.

ಮುಗಿಲು ಮುಟ್ಟಿದ ʻಸೆಲೆಬ್ರಿಟಿʼಗಳ ಸಂಭ್ರಮ

ಇಂದು ರಾಜ್ಯಾದ್ಯಂತ 500ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ 'ಡೆವಿಲ್' ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದಾನೆ. ಕೆ ಜಿ ರಸ್ತೆಯ ನರ್ತಕಿ, ಮಾಗಡಿ ರಸ್ತೆಯ ಪ್ರಸನ್ನ ಜೆಸಿ ರಸ್ತೆಯ ಊರ್ವಶಿ, ಜೆಪಿ ನಗರದ ಸಿದ್ದೇಶ್ವರ , ನವರಂಗ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಡೆವಿಲ್ ತೆರೆಗೆ ಬಂದಿದ್ದು, ಥಿಯೇಟರ್ ಮುಂದೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಫಸ್ಟ್‌ ಡೇ ಫಸ್ಟ್‌ ಶೋಗೆ ವಿಜಯಲಕ್ಷ್ಮಿ, ವಿನೀಶ್‌

ಇನ್ನು ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್‌ ಇಂದು ಫಸ್ಟ್‌ ಡೇ ಫಸ್ಟ್‌ ಶೋ ನೋಡಲು ಆಗಮಿಸಿದ್ದು ದರ್ಶನ್‌ ಅಭಿಮಾನಿಗಳ ಸಂಭ್ರಮವನ್ನು ದುಪ್ಪಟ್ಟುಗೊಳಿಸಿತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲುಪಾಲಾಗಿರುವ ಹಿನ್ನೆಲೆಯಲ್ಲಿ ಅವರ ಅನುಪಸ್ಥಿತಿಯಲ್ಲಿ ಡೆವಿಲ್ ಪ್ರಚಾರದ ಹೊಣೆ ಇದೀಗ ವಿಜಯಲಕ್ಷ್ಮಿ ಮೇಲಿದೆ. ಡೆವಿಲ್‌ ತಂಡದ ಜೊತೆ ದರ್ಶನ್ ಪತ್ನಿ ನಿಂತಿದ್ದು, ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ಇಲ್ಲಿವರೆಗೆ ದರ್ಶನ್ ಸಿನಿಮಾವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಲು ಬಾರದ ಪತ್ನಿ ವಿಜಯಲಕ್ಷ್ಮಿ ಈ ಬಾರಿ ಅಭಿಮಾನಿಗಳ ಜೊತೆ ಸಿನಿಮಾ ನೋಡಿದ್ದಾರೆ. ಅವರಿಗೆ ಅವರ ಪುತ್ರ ವಿನೀಶ್‌ ಮತ್ತುಡೆವಿಲ್‌ ಸಿನಿಮಾ ನಾಯಕಿ ರಚನಾ ಕೂಡ ಸಾಥ್‌ ಕೊಟ್ಟಿದ್ದಾರೆ. ಇನ್ನು ಅಪ್ಪ ತೆರೆ ಮೇಲೆ ಕಾಣುತ್ತಿದ್ದಂತೆ ವಿನೀಶ್, ಥಿಯೇಟರ್ ಒಳಗಡೆ ಮೊಬೈಲ್ ನಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡಿದ್ದಾರೆ.

ನಟ ಧನ್ವೀರ್ ಗೌಡ ಕೂಡ ಎಂಟ್ರಿ

ಮತ್ತೊಂದು ಕಡೆ ನಟ ಧನ್ವೀರ್ ಗೌಡ ಕೂಡ ಡೆವಿಲ್ ಚಿತ್ರ ನೋಡಲು ಬಂದಿದ್ದಾರೆ. ನೀಲಿ ಬಣ್ಣದ ಟೀ ಶರ್ಟ್ ಧರಿಸಿಕೊಂಡೇ ಧನ್ವೀರ್ ನರ್ತಕಿ ಥಿಯೇಟರ್‌ಗೆ ಬಂದಿದ್ದಾರೆ. ನರ್ತಕಿ ಚಿತ್ರಮಂದಿರದಲ್ಲಿ ಧನ್ವೀರ್ ಆಗಮನಕ್ಕೆ ಭವ್ಯವಾದ ಸ್ವಾಗತವೇ ಸಿಕ್ಕಂತಾಗಿದೆ. ಧರ್ನೀರ್‌ ಅವರನ್ನು ಕಂಡು ಅಭಿಮಾನಿಗಳು ಡಿ ಬಾಸ್‌ ಎಂದು ಕೂಗಿದ್ದಾರೆ.


ಕುಣಿದು ಕುಪ್ಪಳಿಸಿದ ಅಭಿಮಾನಿಗಳು

ಇನ್ನು ಅಭಿಮಾನಿ ತೆರೆ ಮೇಲೆ ಇದ್ರ ನೆಮ್ದಿಯಾಗ್‌ ಇರ್ಬೇಕ್‌ ಹಾಡು ಬರುತ್ತಿದ್ದಂತೆ ಸೀಟ್‌ನಿಂದ ಎಂದ ಫ್ಯಾನ್ಸ್‌ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೇ ಕನ್ನಡದ ಧ್ವಜವನ್ನು ಹಾರಿಸಿ ಸಂಭ್ರಮಿಸಿದ್ದಾರೆ.

Tags:    

Similar News