Lok Sabha Election Results 2024 Live: ಇಂಡಿಯಾ ಬ್ಲಾಕ್ (200) ಚೇತರಿಕೆ; ಎನ್‌ಡಿಎ (290) ಮುನ್ನಡೆ

Update: 2024-06-04 01:29 GMT

ದೇಶದಾದ್ಯಂತ ಎರಡು ತಿಂಗಳ ಕಾಲ ಏಳು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ನಾಯಕರ ರಾಜಕೀಯ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇಂದು ಬೆಳಿಗ್ಗೆ 8 ರಿಂದಲೇ ಮತ ಎಣಿಕೆ ಆರಂಭವಾಗಲಿದೆ. ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ʻದ ಫೆಡರಲ್‌ ಕರ್ನಾಟಕʼ ವೆಬ್‌ ಪೋರ್ಟಲ್‌ನಲ್ಲಿ ಲಭ್ಯ.

ಮತ ಎಣಿಕೆ ಕಾರ್ಯಕ್ಕಾಗಿ ಚುನಾವಣಾ ಆಯೋಗ ವ್ಯಾಪಕ ತಯಾರಿ ಮಾಡಿಕೊಂಡಿದ್ದು, ಆಯಾ ಲೋಕಸಭಾ ಕ್ಷೇತ್ರಗಳ ಜಿಲ್ಲಾ ಕೇಂದ್ರಗಳಲ್ಲಿ ಮತಪೆಟ್ಟಿಗೆಗಳನ್ನು ಇಟ್ಟಿರುವ ಮತ ಎಣಿಕೆ ಕೇಂದ್ರಗಳಲ್ಲಿ ಬೆಳಿಗ್ಗೆ 8 ರಿಂದಲೇ ಮತ ಎಣಿಕೆ ಆರಂಭವಾಗಲಿದೆ. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠರ ನೇತೃತ್ವದಲ್ಲಿ ಮತ ಎಣಿಕೆ ಸುಸೂತ್ರವಾಗಿ ನಡೆಯಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವ್ಯಾಪಕ ಬಂದೋಬಸ್ತಿನ ಏರ್ಪಾಡು ಕೂಡ ಆಗಿದೆ.

ಕ್ಷಣಕ್ಷಣದ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ..

Lok Sabha Election Results 2024



Live Updates
2024-06-04 15:51 GMT

ಎನ್‌ ಡಿ ಎ: ಗೆಲುವು 211 , ಮುನ್ನಡೆ 79

ಇಂಡಿಯ: ಗೆಲುವು 141, ಮುನ್ನಡೆ 94

ಇತರರು: ಗೆಲುವು 14, ಮುನ್ನಡೆ 4

2024-06-04 15:22 GMT

ಎನ್‌ ಡಿಎ: 160 ವಿಜಯ, 101 ಮುನ್ನಡೆ

ಇಂಡಿಯ: 127 ವಿಜಯ, 107 ಮುನ್ನಡೆ

ಇತರರು:12 ವಿಜಯ, 6 ಮುನ್ನಡೆ

2024-06-04 14:32 GMT

ಕೇರಳದಲ್ಲಿ ಖಾತೆ ತೆರೆದ ಬಿಜೆಪಿ: ತ್ರಿಶೂರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ನಟ ಸುರೇಶ್ ಗೋಪಿ 74,686 ಗಮನಾರ್ಹ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಕೇರಳದಲ್ಲಿ ತನ್ನ ಖಾತೆಯನ್ನು ತೆರೆದಿದೆ.

ಸುರೇಶ್‌ ಗೋಪಿ ಒಟ್ಟು 4,12,338 ಮತಗಳನ್ನು ಗಳಿಸಿದರು. ಸಿಪಿಐ ಮುಖಂಡ ವಿ.ಎಸ್.ಸುನೀಲ್‌ ಕುಮಾರ್(3,37,652 ಮತ) ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ-ಸಂಸದ ಕೆ.ಮುರಳೀಧರನ್ 3,28,124 ಮತ ಗಳಿಸಿ ಮೂರನೇ ಸ್ಥಾನಕ್ಕೆ ಪಡೆದರು.

ಗೋಪಿ ಅವರು 2019 ರ ಲೋಕಸಭೆ ಚುನಾವಣೆ ಮತ್ತು 2021 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ತ್ರಿಶೂರ್‌ನಿಂದ ಸೋತಿದ್ದರು.

2024-06-04 14:02 GMT

ಎನ್‌ಡಿಎ: ಗೆಲುವು 147, ಮುನ್ನಡೆ 143

ಇಂಡಿಯ: ಗೆಲುವು 75, ಮುನ್ನಡೆ 160

ಇತರರು: ಗೆಲುವು 9, ಮುನ್ನಡೆ 9

2024-06-04 13:33 GMT

ಇಂಡಿಯಾ ಒಕ್ಕೂಟ ಸರ್ಕಾರ: ನಾಳೆ ನಿರ್ಧಾರ- ರಾಹು‌‌ಲ್‌

ಇಂಡಿಯ ಒಕ್ಕೂಟ ವಿರೋಧ ಪಕ್ಷದಲ್ಲಿ ಉಳಿಯುವುದೇ ಅಥವಾ ಸರ್ಕಾರ ರಚಿಸಲು ನಿರ್ಧರಿಸಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ರಾಹುಲ್‌ ಗಾಂಧಿ, ಜೆಡಿಯು, ಟಿಡಿಪಿಯನ್ನು ಸಂಪರ್ಕಿಸುವ ಕುರಿತು ನಾಳೆ ಇಂಡಿಯ ಒಕ್ಕೂಟದ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು. ನಾವು ನಮ್ಮ ಪಾಲುದಾರರನ್ನು ಗೌರವಿಸುತ್ತೇವೆ ಮತ್ತು ಅವರೊಂದಿಗೆ ಸಮಾಲೋಚನೆಯಿಲ್ಲದೆ ಹೇಳಿಕೆ ನೀಡಲು ಬಯಸುವುದಿಲ್ಲ. ಬಹಳ ಸೂಕ್ಷ್ಮವಾದ ಮಾರ್ಗವಿದೆ, ಮೈತ್ರಿ ಏನು ಒಪ್ಪುತ್ತದೆ ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದು ಹೇಳಿದರು.



2024-06-04 12:48 GMT

ಎನ್‌ ಡಿಎ : ಗೆಲುವು 106. ಮುನ್ನಡೆ 188

ಇಂಡಿಯ: ಗೆಲುವು 41, ಮುನ್ನಡೆ 190

ಇತರರು: ಗೆಲುವು 4. ಮುನ್ನಡೆ 14

2024-06-04 12:24 GMT

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ವಾರಣಾಸಿಯಿಂದ ಮೂರನೇ ಬಾರಿ ಆಯ್ಕೆ ಆಗಿದ್ದಾರೆ. ಆದರೆ, ವಿಜಯದ ಅಂತರ ಕುಸಿತ(1,52,513) ಆಗಿದೆ. 2019ರಲ್ಲಿ ಅವರ ವಿಜಯದ ಅಂತರ 4,79,505 ಹಾಗೂ 2014ರಲ್ಲಿ 3,71,784 ಇದ್ದಿತ್ತು.

2024-06-04 11:31 GMT

ಎನ್‌ ಡಿಎ: ಗೆಲುವು 16, ಮುನ್ನಡೆ 282

ಇಂಡಿಯ: ಗೆಲುವು 6,  ಮುನ್ನಡೆ  224

ಇತರರು: ಮುನ್ನಡೆ ೧೬

ಬಾರಾಮುಲ್ಲಾದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ನ ಒಮರ್‌ ಅಬ್ಲುಲ್ಲಾ ಹಿನ್ನಡೆ: ಅನಂತನಾಗ್-ರಜೋರಿ ಕ್ಷೇತ್ರದಲ್ಲಿ ಪಿಡಿಪಿಯ ಮೆಹಬೂಬಾ ಮುಫ್ತಿ  ಹಿನ್ನಡೆ

2024-06-04 11:15 GMT

ಕೇರಳ: ತಿರುವನಂತಪುರದಲ್ಲಿ ಕಾಂಗ್ರೆಸ್‌ ನ ಶಶಿ ತರೂರ್‌ ಅವರಿಗೆ ಜಯ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅಪಜಯ  

2024-06-04 10:50 GMT

ಎನ್‌ ಡಿಎ 293

ಇಂಡಿಯ 233

ಉತ್ತರಪ್ರದೇಶ: ಅಮೇಥಿಯಲ್ಲಿ ಕಿಶೋರಿ ಲಾಲ್(ಕಾಂಗ್ರೆಸ್)‌ ಅವರು ಸಚಿವೆ ಸ್ಮೃತಿ ಇರಾನಿ ಅವರಿಗಿಂತ 1.2

ಲಕ್ಷಕ್ಕಿಂತ ಅಧಿಕ ಮತಗಳಿಂದ ಮುನ್ನಡೆ 

Tags:    

Similar News