ಕೇರಳದಲ್ಲಿ ಖಾತೆ ತೆರೆದ ಬಿಜೆಪಿ: ತ್ರಿಶೂರ್ ಲೋಕಸಭೆ... ... Lok Sabha Election Results 2024 Live: ಇಂಡಿಯಾ ಬ್ಲಾಕ್ (200) ಚೇತರಿಕೆ; ಎನ್‌ಡಿಎ (290) ಮುನ್ನಡೆ

ಕೇರಳದಲ್ಲಿ ಖಾತೆ ತೆರೆದ ಬಿಜೆಪಿ: ತ್ರಿಶೂರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ನಟ ಸುರೇಶ್ ಗೋಪಿ 74,686 ಗಮನಾರ್ಹ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಕೇರಳದಲ್ಲಿ ತನ್ನ ಖಾತೆಯನ್ನು ತೆರೆದಿದೆ.

ಸುರೇಶ್‌ ಗೋಪಿ ಒಟ್ಟು 4,12,338 ಮತಗಳನ್ನು ಗಳಿಸಿದರು. ಸಿಪಿಐ ಮುಖಂಡ ವಿ.ಎಸ್.ಸುನೀಲ್‌ ಕುಮಾರ್(3,37,652 ಮತ) ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ-ಸಂಸದ ಕೆ.ಮುರಳೀಧರನ್ 3,28,124 ಮತ ಗಳಿಸಿ ಮೂರನೇ ಸ್ಥಾನಕ್ಕೆ ಪಡೆದರು.

ಗೋಪಿ ಅವರು 2019 ರ ಲೋಕಸಭೆ ಚುನಾವಣೆ ಮತ್ತು 2021 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ತ್ರಿಶೂರ್‌ನಿಂದ ಸೋತಿದ್ದರು.

Update: 2024-06-04 14:32 GMT

Linked news