Lok Sabha Election Results 2024 Live: ಇಂಡಿಯಾ ಬ್ಲಾಕ್ (200) ಚೇತರಿಕೆ; ಎನ್‌ಡಿಎ (290) ಮುನ್ನಡೆ

Update: 2024-06-04 01:29 GMT
Live Updates - Page 2
2024-06-04 10:40 GMT

ಮಹಾರಾಷ್ಟ್ರ: ಬಾರಾಮತಿಯಿಂದ ಎನ್‌ಸಿಪಿಯ ಸುಪ್ರಿಯಾ ಸುಳೆ ಜಯ. ಎನ್‌ ಸಿಪಿ(ಅಜಿತ್‌ ಪವಾರ್)‌ ಬಣದ ನಾಯಕ ಅಜಿತ್‌ ಪವಾರ್‌ ಅವರ ಪತ್ನಿ ಸುನೇತ್ರಾ ಪವಾರ್‌ ಅವರಿಗೆ ಸೋಲು 

2024-06-04 10:23 GMT

ನಾಯ್ಡು, ನಿತೀಶ್, ನವೀನ್ ಸಂಪರ್ಕಿಸಿದ ಶರದ್ ಪವಾರ್: ಚುನಾವಣೆ ಫಲಿತಾಂಶ ಅಚ್ಚರಿಯನ್ನು ಹುಟ್ಟುಹಾಕಿದ್ದು,ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದ್ದರೂ, ಬಹುಮತಕ್ಕಿಂತ ಕಡಿಮೆ ಸಾಧನೆ ಮಾಡಿದೆ. ಕೆಲವು ಎನ್‌ಡಿಎ ಪಕ್ಷಗಳು ಇಂಡಿಯ ಒಕ್ಕೂಟವನ್ನು ಬೆಂಬಲಿಸುವ ಸಾಧ್ಯತೆಯನ್ನು ಚರ್ಚಿಸಲಾಗುತ್ತಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮಂಗಳವಾರ ಮಧ್ಯಾಹ್ನ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ.

2024-06-04 10:19 GMT

ಶರ್ಮಾ ಅವರಿಗೆ ಪ್ರಿಯಾಂಕಾ ಅಭಿನಂದನೆ:  ಗಾಂಧಿ ಕುಟುಂಬದ ಭದ್ರಕೋಟೆಯಾದ ಅಮೇಥಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಅವರು 90,000ಕ್ಕೂ ಅಧಿಕ ಮತಗಳಿಂದ ಮುನ್ನಡೆ ಸಾಧಿಸಿರುವುದಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಭಿನಂದಿಸಿದ್ದಾರೆ. ʻಕಿಶೋರಿ ಭಯ್ಯಾ, ನನಗೆ ಅನುಮಾನವಿರಲಿಲ್ಲ. ನೀವು ಗೆಲ್ಲುತ್ತೀರಿ ಎಂದು ನನಗೆ ಖಚಿತವಾಗಿತ್ತು. ನಿಮಗೆ ಮತ್ತು ಪ್ರೀತಿಯ ಅಮೇಥಿಯ ಸಹೋದರ- ಸಹೋದರಿಯರಿಗೆ ಹೃತ್ಪೂರ್ವಕ ಅಭಿನಂದನೆಗಳು!,ʼ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

ಶರ್ಮಾ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸಿದ್ದರು. ಕುಟುಂಬದ ಭದ್ರಕೋಟೆಗಳಾದ ರಾಯ್ ಬರೇಲಿ ಮತ್ತು ಅಮೇಠಿಯಲ್ಲಿ ಪ್ರಿಯಾಂಕಾ ಅವರು ಎರಡು ವಾರ ಕಾಲ ಬೀಡುಬಿಟ್ಟು, ವ್ಯಾಪಕ ಪ್ರಚಾರ ನಡೆಸಿದ್ದರು.

2024-06-04 08:56 GMT

ಹಿಮಾಚಲ ಪ್ರದೇಶ: ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. ಮಂಡಿಯಲ್ಲಿ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರಣಾವತ್ 54,042 ಮತ, ಸಚಿವ ಅನುರಾಗ್ ಠಾಕೂರ್ ಅವರು ಹಮೀರ್‌ಪುರ ಕ್ಷೇತ್ರದಿಂದ 1,30,696 ಮತ ಹಾಗೂ ಸಂಸದ ಸುರೇಶ್ ಕಶ್ಯಪ್ ಶಿಮ್ಲಾ ಕ್ಷೇತ್ರದಿಂದ 70,171 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಶರ್ಮಾ ಅವರು ಬಿಜೆಪಿಯ ರಾಜೀವ್ ಭಾರದ್ವಾಜ್ ವಿರುದ್ಧ ಸೋಲುಂಡಿದ್ದಾರೆ.

2024-06-04 08:48 GMT

ಗುಜರಾತ್:‌ ರಾಜ್ಯದ  25 ಲೋಕಸಭೆ ಸ್ಥಾನಗಳ ಪೈಕಿ ಬಿಜೆಪಿ 23 ರಲ್ಲಿ ಮುನ್ನಡೆ ಸಾಧಿಸಿದೆ. ಬನಸ್ಕಾಂತ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆನಿಬೆನ್ ಠಾಕೂರ್ 155 ಮತ ಹಾಗೂ ಪಟಾನ್ ಕ್ಷೇತ್ರದಲ್ಲಿ ಚಂದನ್‌ಜಿ ಠಾಕೂರ್ ಅವರು 5,046 ಮತಗಳ ಮುನ್ನಡೆ ಸಾಧಿಸಿದ್ದಾರೆ.

2024-06-04 08:13 GMT

ಬಿಹಾರದ 40 ಲೋಕಸಭೆ ಸ್ಥಾನಗಳ ಪೈಕಿ 32ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮುನ್ನಡೆ ಸಾಧಿಸಿದೆ. ಆದರೆ, ರಾಜಕೀಯವಾಗಿ ನಿರ್ಣಾಯಕವಾದ ಉತ್ತರ ಪ್ರದೇಶದಲ್ಲಿ ಇಂಡಿಯ ಒಕ್ಕೂಟ 42 ಕ್ಷೇತ್ರಗಳಲ್ಲಿ ಮುಂದೆ ಇದೆ.

ಬಿಹಾರದಲ್ಲಿ ಬಿಜೆಪಿ ಅಭ್ಯರ್ಥಿಗಳು 12, ಮಿತ್ರಪಕ್ಷ ಜೆಡಿಯು 15 ಮತ್ತು ಎಲ್‌ಜೆಪಿಆರ್‌ವಿ 5 ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ. ಆದರೆ, ಇಂಡಿಯ ಒಕ್ಕೂಟದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕೇವಲ ನಾಲ್ಕು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ ಲೆನಿನಿಸ್ಟ್) ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ಆದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಥಿತಿ ಚಿಂತಾಜನಕವಾಗಿದೆ. ಸಮಾಜವಾದಿ ಪಕ್ಷ-ಕಾಂಗ್ರೆಸ್ ಒಕ್ಕೂಟ 42 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ ಹಾಗೂ ಮಿತ್ರಪಕ್ಷಗಳು 37 ರಲ್ಲಿ ಮುಂದೆ ಇವೆ.

2024-06-04 08:01 GMT

ಎನ್‌ ಡಿಎ: ಗೆಲುವು 5. ಮುನ್ನಡೆ 289

ಇಂಡಿಯ:ಗೆಲುವು 2.ಮುನ್ನಡೆ 228

ಇತರರು: ಮುನ್ನಡೆ 19

2024-06-04 07:17 GMT

ತಮಿಳುನಾಡು: ರಾಜ್ಯದ 39 ಸ್ಥಾನಗಳಲ್ಲಿ ಇಂಡಿಯ ಒಕ್ಕೂಟ 35 ಸ್ಥಾನ, ಎನ್‌ಡಿಎ 2 ಮತ್ತು ಎಐಎಡಿಎಂಕೆ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ.ಎನ್‌ಡಿಎ ಮಿತ್ರ ಪಕ್ಷವಾದ ಪಿಎಂಕೆ ಧರ್ಮಪುರಿಯಲ್ಲಿ ಮುನ್ನಡೆ ಸಾಧಿಸಿದೆ. ವಿರುದನಗರ ದಲ್ಲಿ ವಿಜಯಕಾಂತ್ ಪುತ್ರ ವಿಜಯ ಪ್ರಭಾಕರನ್ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ 19 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) 10 ಸ್ಥಾನ, ತಮಿಳ್ ಮನಿಲ ಕಾಂಗ್ರೆಸ್ (ಮೂಪನಾರ್) ಮತ್ತು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಜೊತೆಗೆ ಮೈತ್ರಿ ಮಾಡಿಕೊಂಡಿದೆ. ನಾಮ್ ತಮಿಳರ್ ಕಚ್ಚಿ (ಎನ್ಟಿಕೆ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ ) ಎಲ್ಲ 39 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

2024-06-04 06:48 GMT

ಉತ್ತರಪ್ರದೇಶ: 12 ಗಂಟೆ ಸುಮಾರಿಗೆ ಉತ್ತರ ಪ್ರದೇಶದ 80 ಲೋಕಸಭೆ ಸ್ಥಾನಗಳ ಪೈಕಿ 42 ರಲ್ಲಿ ಇಂಡಿಯ ಒಕ್ಕೂಟ ಮುನ್ನಡೆಯಲ್ಲಿದೆ. ಬಿಜೆಪಿಯ ಭದ್ರಕೋಟೆ ಎನ್ನಲಾದ ರಾಜ್ಯದಲ್ಲಿ ಪಕ್ಷ 35 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಸಮಾಜವಾದಿ ಪಕ್ಷ (ಎಸ್‌ಪಿ) 34 ಮತ್ತು ಕಾಂಗ್ರೆಸ್ ಎಂಟು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಬಿಜೆಪಿಯ ಮಿತ್ರಪಕ್ಷ ಆರ್‌ಎಲ್‌ಡಿ ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಜಾದ್ ಸಮಾಜ ಪಕ್ಷ (ಕಾನ್ಶಿರಾಮ್) ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. 

2019 ರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಕೇವಲ ಒಂದು ಸ್ಥಾನ, ರಾಯ್ ಬರೇಲಿಯಲ್ಲಿ ಜಯ ಗಳಿಸಿತ್ತು.

2024-06-04 06:09 GMT

ಒಡಿಶಾ ವಿಧಾನಸಭೆ ಚುನಾವಣೆ: ಒಡಿಶಾ ವಿಧಾನಸಭೆಯ 147 ಕ್ಷೇತ್ರಗಳಲ್ಲಿ ಬಿಜೆಪಿ 74 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಡಿ 46 ಮತ್ತು ಕಾಂಗ್ರೆಸ್ 13 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಬಿಜೆಡಿ ಮತ್ತು ಬಿಜೆಪಿ ಎಲ್ಲ ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ 145 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ.

Tags:    

Similar News