ಬಿಹಾರದ 40 ಲೋಕಸಭೆ ಸ್ಥಾನಗಳ ಪೈಕಿ 32ರಲ್ಲಿ ಬಿಜೆಪಿ... ... Lok Sabha Election Results 2024 Live: ಇಂಡಿಯಾ ಬ್ಲಾಕ್ (200) ಚೇತರಿಕೆ; ಎನ್‌ಡಿಎ (290) ಮುನ್ನಡೆ
ಬಿಹಾರದ 40 ಲೋಕಸಭೆ ಸ್ಥಾನಗಳ ಪೈಕಿ 32ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮುನ್ನಡೆ ಸಾಧಿಸಿದೆ. ಆದರೆ, ರಾಜಕೀಯವಾಗಿ ನಿರ್ಣಾಯಕವಾದ ಉತ್ತರ ಪ್ರದೇಶದಲ್ಲಿ ಇಂಡಿಯ ಒಕ್ಕೂಟ 42 ಕ್ಷೇತ್ರಗಳಲ್ಲಿ ಮುಂದೆ ಇದೆ.
ಬಿಹಾರದಲ್ಲಿ ಬಿಜೆಪಿ ಅಭ್ಯರ್ಥಿಗಳು 12, ಮಿತ್ರಪಕ್ಷ ಜೆಡಿಯು 15 ಮತ್ತು ಎಲ್‌ಜೆಪಿಆರ್‌ವಿ 5 ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ. ಆದರೆ, ಇಂಡಿಯ ಒಕ್ಕೂಟದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕೇವಲ ನಾಲ್ಕು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ ಲೆನಿನಿಸ್ಟ್) ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.
ಆದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಥಿತಿ ಚಿಂತಾಜನಕವಾಗಿದೆ. ಸಮಾಜವಾದಿ ಪಕ್ಷ-ಕಾಂಗ್ರೆಸ್ ಒಕ್ಕೂಟ 42 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ ಹಾಗೂ ಮಿತ್ರಪಕ್ಷಗಳು 37 ರಲ್ಲಿ ಮುಂದೆ ಇವೆ.
Update: 2024-06-04 08:13 GMT