Lok Sabha Election Results 2024 Live: ಇಂಡಿಯಾ ಬ್ಲಾಕ್ (200) ಚೇತರಿಕೆ; ಎನ್‌ಡಿಎ (290) ಮುನ್ನಡೆ
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 31 ಸ್ಥಾನಗಳಲ್ಲಿ ಮೇಲುಗೈ ಸಾಧಿಸಿದೆ. ಬಿಜೆಪಿ 10 ಹಾಗೂ ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುಂದೆ ಇವೆ. ಬೆಹ್ರಾಂಪುರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಅಧೀರ್ ಚೌಧರಿ, ಕೃಷ್ಣನಗರದಲ್ಲಿ ಟಿಎಂಸಿಯ ಮಹುವಾ ಮೊಯಿತ್ರಾ ಮುಂದೆ ಇದ್ದಾರೆ.
ಒಡಿಶಾ ಮತ್ತು ಜಾರ್ಖಂಡ್: ಒಡಿಶಾದಲ್ಲಿ ಬಿಜೆಪಿ 18 ಹಾಗೂ ಬಿಜೆಡಿ ಮತ್ತು ಕಾಂಗ್ರೆಸ್ ತಲಾ ಒಂದು ಸ್ಥಾನದಲ್ಲಿ ಮುಂದೆ ಇವೆ. ಜಾರ್ಖಂಡ್‌ನಲ್ಲಿ ಎನ್‌ಡಿಎ 11 ಹಾಗೂ ಇಂಡಿಯ ಒಕ್ಕೂಟ ಮೂರರಲ್ಲಿ ಮುನ್ನಡೆ ಸಾಧಿಸಿದೆ.
ಈಶಾನ್ಯ ರಾಜ್ಯಗಳು ಮತ್ತು ಸಿಕ್ಕಿಂ: ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಎನ್‌ಡಿಎ 10 ಹಾಗೂ ಇಂಡಿಯ ಒಕ್ಕೂಟ ನಾಲ್ಕರಲ್ಲಿ ಮುನ್ನಡೆ ಸಾಧಿಸಿವೆ. ಅರುಣಾಚಲ ಪ್ರದೇಶ-ತ್ರಿಪುರಾದಲ್ಲಿ ಎನ್‌ಡಿಎ ಎರಡೂ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಂಡಿಯ ಒಕ್ಕೂಟ ಮೇಘಾಲಯದ ಎರಡು ಸ್ಥಾನಗಳಲ್ಲಿ ಒಂದರಲ್ಲಿ ಮತ್ತು ನಾಗಾಲ್ಯಾಂಡ್‌ನ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಕಾಂಗ್ರೆಸ್ ಹಾಗೂ ಎನ್‌ಪಿಎಫ್ ಅಭ್ಯರ್ಥಿ ತಲಾ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಮಿಜೋರಾಂ ನ ಏಕೈಕ ಸೀಟಿನಲ್ಲಿ ಝಡ್‌ಪಿಎಂ ಮತ್ತು ಸಿಕ್ಕಿಂನಲ್ಲಿ ಎಸ್ ಕೆಎಂ ಮುಂದೆ ಇವೆ.
ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ: ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ ಎನ್‌ಡಿಎ 46 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ, ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಪವನ್ ಕಲ್ಯಾಣ್ ಅವರ ಜನ ಸೇನಾ ಪಕ್ಷ (ಜೆಎಸ್‌ಪಿ) ಮೈತ್ರಿ ಮಾಡಿಕೊಂಡಿವೆ. ಟಿಡಿಪಿ 39, ಜೆಎಸ್ಪಿ 5 ಹಾಗೂ ಬಿಜೆಪಿ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ವೈಎಸ್‌ಆರ್‌ಸಿಪಿ ಆಡಳಿತ ವಿರೋಧಿ ಅಲೆಯಿಂದ ಕೇವಲ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಮಹಾರಾಷ್ಟ್ರ: 48 ಸಂಸದರನ್ನು ಲೋಕಸಭೆಗೆ ಕಳುಹಿಸುವ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ಹಣಾಹಣಿ ನಡೆದಿದೆ.
ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ) ಮತ್ತು ಎನ್‌ಸಿಪಿ (ಶರದ್ ಪವಾರ್) ಒಳಗೊಂಡಿರುವ ಎಂವಿಎ 27 ಸ್ಥಾನ, ಬಿಜೆಪಿ, ಶಿವಸೇನೆ (ಶಿಂಧೆ ಬಣ) ಮತ್ತು ಎನ್‌ಸಿಪಿ (ಅಜಿತ್ ಪವಾರ್) ಒಳಗೊಂಡ ಮಹಾಯುತಿ 19 ಹಾಗೂ 2 ಸ್ಥಾನದಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಎಂವಿಎ ಮೂರು ಪಾಲುದಾರರು ತಲಾ 9 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮಹಾಯುತಿ ಪಾಲುದಾರರಲ್ಲಿ ಬಿಜೆಪಿ 15, ಶಿವಸೇನೆ (ಶಿಂಧೆ) 4 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಎನ್‌ಸಿಪಿ (ಅಜಿತ್ ಪವಾರ್) ಬಣ ತೀವ್ರ ಹಿನ್ನಡೆ ಅನುಭವಿಸಿದೆ.
ಎನ್ ಡಿಎ 302, ಇಂಡಿಯ 219ರಲ್ಲಿ ಮುನ್ನಡೆ
ದಿಲ್ಲಿ: ಕಾಂಗ್ರೆಸ್-ಎಎಪಿ ಮೈತ್ರಿಯ ಹೊರತಾಗಿಯೂ, ಬಿಜೆಪಿ ಆರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಮುಂದಿದೆ.
ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಂಸದ ಜೆ.ಪಿ. ಅಗರ್ವಾಲ್ ಅವರು ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಮುಂದಿದ್ದಾರೆ. ನವದೆಹಲಿ (ಬಾನ್ಸುರಿ ಸ್ವರಾಜ್), ಪಶ್ಚಿಮ ದೆಹಲಿ (ಕಮಲ್ಜೀತ್ ಸೆಹ್ರಾವತ್), ವಾಯವ್ಯ ದೆಹಲಿ (ಯೋಗಿಂದರ್ ಚಂದೋಲಿಯಾ), ಪೂರ್ವ ದೆಹಲಿ (ಹರ್ಷ್ ಮಲ್ಹೋತ್ರಾ), ಈಶಾನ್ಯ ದೆಹಲಿ (ಮನೋಜ್ ತಿವಾರಿ) ಮತ್ತು ದಕ್ಷಿಣ ದೆಹಲಿ (ರಾಮ್ವೀರ್ ಸಿಂಗ್ ಬಿಧುರಿ) ಯಲ್ಲಿ ಬಿಜೆಪಿ ಅಭ್ಯರ್ಥಿಗಳು ಮುಂದೆ ಇದ್ದಾರೆ.
ಉತ್ತರ ಪ್ರದೇಶ: ಯುಪಿಯ 80 ಸ್ಥಾನಗಳ ಪೈಕಿ ಬಿಜೆಪಿ 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಇಂಡಿಯ ಒಕ್ಕೂಟ 24ರಲ್ಲಿ ಮುನ್ನಡೆ.
ಮಹಾರಾಷ್ಟ್ರ: ನೇರ ಹಣಾಹಣಿ. 48 ಸ್ಥಾನಗಳಲ್ಲಿ ಎನ್‌ಡಿಎ 20 ಮತ್ತು ಇಂಡಿಯ 25 ಸ್ಥಾನಗಳಲ್ಲಿ ಮುನ್ನಡೆ.
ಪಶ್ಚಿಮ ಬಂಗಾಳ: 42 ಸ್ಥಾನಗಳಲ್ಲಿ ಬಿಜೆಪಿ ಮತ್ತು ಟಿಎಂಸಿ 17-18 ಸ್ಥಾನಗಳಲ್ಲಿ ಮುನ್ನಡೆ.
ಬಿಹಾರ: 40 ಸ್ಥಾನಗಳ ಎನ್‌ಡಿಎ 14, ಇಂಡಿಯ ಒಕ್ಕೂಟ 4 ಸ್ಥಾನಗಳಲ್ಲಿ ಮುನ್ನಡೆ.
ತಮಿಳುನಾಡು: 39 ಸ್ಥಾನಗಳಲ್ಲಿ ಡಿಎಂಕೆ 25, ಬಿಜೆಪಿ 1 ಮತ್ತು ಎಐಎಡಿಎಂಕೆ ಮೂರು ಸ್ಥಾನಗಳಲ್ಲಿ ಮುನ್ನಡೆ.
ಮಧ್ಯಪ್ರದೇಶ: 29 ಸ್ಥಾನಗಳ ಪೈಕಿ ಬಿಜೆಪಿ 20, ಇಂಡಿಯ ಒಕ್ಕೂಟ 1ರಲ್ಲಿ ಮುನ್ನಡೆ.
ಕರ್ನಾಟಕ: 28 ಸ್ಥಾನಗಳಲ್ಲಿ ಬಿಜೆಪಿ 22 ಹಾಗೂ ಕಾಂಗ್ರೆಸ್ 6ಸ್ಥಾನಗಳಲ್ಲಿ ಮುನ್ನಡೆ.
ಗುಜರಾತ್: ಬಿಜೆಪಿ 19 ಮತ್ತು ಇಂಡಿಯ ಒಕ್ಕೂಟ 4 ಸ್ಥಾನಗಳಲ್ಲಿ ಮುನ್ನಡೆ.
ಆಂಧ್ರಪ್ರದೇಶ: 25 ಸ್ಥಾನಗಳ ಪೈಕಿ ಎನ್‌ಡಿಎ 18 ಹಾಗೂ ಇಂಡಿಯ 1 ಹಾಗೂ ವೈಎಸ್‌ಆರ್‌ಸಿಪಿ ಮೂರು ಸ್ಥಾನದಲ್ಲಿ ಮುನ್ನಡೆ.
ರಾಜಸ್ಥಾನ: ಬಿಜೆಪಿ 13, ಇಂಡಿಯ ಒಕ್ಕೂಟ 7 ಸ್ಥಾನಗಳಲ್ಲಿ ಮುನ್ನಡೆ.
ಒಡಿಶಾ: 21 ಸ್ಥಾನಗಳ ಪೈಕಿ ಬಿಜೆಪಿ 10, ಬಿಜೆಡಿ 8ರಲ್ಲಿ ಮುನ್ನಡೆ.
ಕೇರಳ: ಯುಡಿಎಫ್ ಮತ್ತು ಎಲ್‌ಡಿಎಫ್ 8-10 ಸ್ಥಾನ, ಬಿಜೆಪಿ ಒಂದು ಸ್ಥಾನದಲ್ಲಿ ಮುನ್ನಡೆ.
ದೆಹಲಿ: ಬಿಜೆಪಿ ಮತ್ತು ಎಎಪಿ ತಲಾ ಮೂರು ಸ್ಥಾನಗಳಲ್ಲಿ ಮುನ್ನಡೆ.
ಇತರರು: ತೆಲಂಗಾಣ ಮತ್ತು ಹರಿಯಾಣದಲ್ಲಿ ಬಿಜೆಪಿ 5-6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಇಂಡಿಯ ಒಕ್ಕೂಟ 3-4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಛತ್ತೀಸ್‌ಗಢ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂ, ತ್ರಿಪುರಾ ಮತ್ತು ಮಣಿಪುರದಲ್ಲಿ ಬಿಜೆಪಿ ಹಾಗೂ ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಅರುಣಾಚಲದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ.
ಮುನ್ನಡೆ: ಎನ್ ಡಿಎ 295, ಇಂಡಿಯ 190
ಕೇರಳ:ಯುಡಿಎಫ್ 15, ಎಲ್ ಡಿಎಫ್ 4, ಎನ್ ಡಿಎ1 ಕ್ಷೇತ್ರದಲ್ಲಿ ಮುನ್ನಡೆ.
ರಾಹುಲ್ ಗಾಂಧಿ, ಶಶಿ ತರೂರ್, ಕೆ ಸಿ ವೇಣುಗೋಪಾಲ್, ಸುರೇಶ್ ಗೋಪಿ ಮುನ್ನಡೆ
ತೆಲಂಗಾಣ: ಬಿಜೆಪಿ 7,ಕಾಂಗ್ರೆಸ್ 6ಮತ್ತು ಎಂಐಎಂ1 ರಲ್ಲಿ ಮುನ್ನಡೆ
ಉತ್ತರಪ್ರದೇಶ: ಅಮೇಥಿ- ಸ್ಮೃತಿ ಇರಾನಿ ಮುನ್ನಡೆ