79ನೇ ವಸಂತಕ್ಕೆ ಕಾಲಿಟ್ಟ ಸೋನಿಯಾ ಗಾಂಧಿ: ಮೋದಿ, ಖರ್ಗೆ ಸೇರಿದಂತೆ ಗಣ್ಯರಿಂದ ಶುಭಾಶಯಗಳ ಮಹಾಪೂರ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಎಕ್ಸ್‌' (ಹಿಂದಿನ ಟ್ವಿಟರ್) ಖಾತೆಯಲ್ಲಿ, "ಸೋನಿಯಾ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ಅವರಿಗೆ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯವನ್ನು ಕರುಣಿಸಲಿ," ಎಂದು ಹಾರೈಸಿದ್ದಾರೆ.

Update: 2025-12-09 07:02 GMT
Click the Play button to listen to article

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಸಂಸದೆ ಸೋನಿಯಾ ಗಾಂಧಿ ಅವರು ಇಂದು (ಮಂಗಳವಾರ) ತಮ್ಮ 79ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ದೇಶದಾದ್ಯಂತ ರಾಜಕೀಯ ಗಣ್ಯರು ಅವರಿಗೆ ಶುಭಾಶಯ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಎಕ್ಸ್‌' (ಹಿಂದಿನ ಟ್ವಿಟರ್) ಖಾತೆಯಲ್ಲಿ, "ಸೋನಿಯಾ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ಅವರಿಗೆ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯವನ್ನು ಕರುಣಿಸಲಿ," ಎಂದು ಹಾರೈಸಿದ್ದಾರೆ.


ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿಯವರನ್ನು 'ದಮನಿತರ ದೃಢ ಚಾಂಪಿಯನ್' ಎಂದು ಬಣ್ಣಿಸಿದ್ದಾರೆ. "ಧೈರ್ಯ, ತ್ಯಾಗ, ಶಾಂತಚಿತ್ತತೆ ಮತ್ತು ನಿಸ್ವಾರ್ಥ ಸಮರ್ಪಣೆಯ ಪ್ರತೀಕವಾಗಿರುವ ಅವರು, ಪ್ರತಿಯೊಂದು ಸವಾಲನ್ನು ಧೈರ್ಯದಿಂದ ಎದುರಿಸಿದ್ದಾರೆ. ಅವರಿಗೆ ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನ ಲಭಿಸಲಿ," ಎಂದು ಖರ್ಗೆ ಶುಭ ಕೋರಿದ್ದಾರೆ.


ಕರ್ನಾಟಕದ ನಾಯಕರಿಂದ ಶುಭಾಶಯ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಕಾಂಗ್ರೆಸ್ ಪಕ್ಷದ ವರಿಷ್ಠರು ಹಾಗೂ ನಮ್ಮೆಲ್ಲರ ಮಾರ್ಗದರ್ಶಕರಾದ ಶ್ರೀಮತಿ ಸೋನಿಯಾ ಗಾಂಧಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೀರ್ಘ ಆಯಸ್ಸು ಮತ್ತು ಆರೋಗ್ಯದ ಭಾಗ್ಯ ನಿಮ್ಮದಾಗಲಿ ಎಂದು ಮನದುಂಬಿ ಹಾರೈಸುತ್ತೇನೆ," ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋನಿಯಾ ಗಾಂಧಿಯವರನ್ನು 'ನಮ್ಮ ನಿರಂತರ ಬೆಂಬಲದ ಆಧಾರಸ್ತಂಭ' ಎಂದು ಬಣ್ಣಿಸಿದ್ದಾರೆ. "ನಿಮ್ಮ ನಿಸ್ವಾರ್ಥ ಸೇವೆ ಹಾಗೂ ದೂರದೃಷ್ಟಿಯು ಕಾಂಗ್ರೆಸ್ ಪಕ್ಷವನ್ನು ರೂಪಿಸಿದೆ ಮತ್ತು ಜನರಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪವನ್ನು ದೃಢಪಡಿಸಿದೆ. ನೀವು ತೋರಿದ ಮಾರ್ಗದರ್ಶನ ಹಾಗೂ ನಂಬಿಕೆಗೆ ನಾನು ಕೃತಜ್ಞನಾಗಿದ್ದೇನೆ," ಎಂದು ತಮ್ಮ ಹುಟ್ಟುಹಬ್ಬದ ಸಂದೇಶದಲ್ಲಿ ತಿಳಿಸಿದ್ದಾರೆ. 

Tags:    

Similar News