ಉತ್ತರ ಪ್ರದೇಶ: ಯುಪಿಯ 80 ಸ್ಥಾನಗಳ ಪೈಕಿ ಬಿಜೆಪಿ 50ಕ್ಕೂ... ... Lok Sabha Election Results 2024 Live: ಇಂಡಿಯಾ ಬ್ಲಾಕ್ (200) ಚೇತರಿಕೆ; ಎನ್‌ಡಿಎ (290) ಮುನ್ನಡೆ
ಉತ್ತರ ಪ್ರದೇಶ: ಯುಪಿಯ 80 ಸ್ಥಾನಗಳ ಪೈಕಿ ಬಿಜೆಪಿ 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಇಂಡಿಯ ಒಕ್ಕೂಟ 24ರಲ್ಲಿ ಮುನ್ನಡೆ.
ಮಹಾರಾಷ್ಟ್ರ: ನೇರ ಹಣಾಹಣಿ. 48 ಸ್ಥಾನಗಳಲ್ಲಿ ಎನ್‌ಡಿಎ 20 ಮತ್ತು ಇಂಡಿಯ 25 ಸ್ಥಾನಗಳಲ್ಲಿ ಮುನ್ನಡೆ.
ಪಶ್ಚಿಮ ಬಂಗಾಳ: 42 ಸ್ಥಾನಗಳಲ್ಲಿ ಬಿಜೆಪಿ ಮತ್ತು ಟಿಎಂಸಿ 17-18 ಸ್ಥಾನಗಳಲ್ಲಿ ಮುನ್ನಡೆ.
ಬಿಹಾರ: 40 ಸ್ಥಾನಗಳ ಎನ್‌ಡಿಎ 14, ಇಂಡಿಯ ಒಕ್ಕೂಟ 4 ಸ್ಥಾನಗಳಲ್ಲಿ ಮುನ್ನಡೆ.
ತಮಿಳುನಾಡು: 39 ಸ್ಥಾನಗಳಲ್ಲಿ ಡಿಎಂಕೆ 25, ಬಿಜೆಪಿ 1 ಮತ್ತು ಎಐಎಡಿಎಂಕೆ ಮೂರು ಸ್ಥಾನಗಳಲ್ಲಿ ಮುನ್ನಡೆ.
ಮಧ್ಯಪ್ರದೇಶ: 29 ಸ್ಥಾನಗಳ ಪೈಕಿ ಬಿಜೆಪಿ 20, ಇಂಡಿಯ ಒಕ್ಕೂಟ 1ರಲ್ಲಿ ಮುನ್ನಡೆ.
ಕರ್ನಾಟಕ: 28 ಸ್ಥಾನಗಳಲ್ಲಿ ಬಿಜೆಪಿ 22 ಹಾಗೂ ಕಾಂಗ್ರೆಸ್ 6ಸ್ಥಾನಗಳಲ್ಲಿ ಮುನ್ನಡೆ.
ಗುಜರಾತ್: ಬಿಜೆಪಿ 19 ಮತ್ತು ಇಂಡಿಯ ಒಕ್ಕೂಟ 4 ಸ್ಥಾನಗಳಲ್ಲಿ ಮುನ್ನಡೆ.
ಆಂಧ್ರಪ್ರದೇಶ: 25 ಸ್ಥಾನಗಳ ಪೈಕಿ ಎನ್‌ಡಿಎ 18 ಹಾಗೂ ಇಂಡಿಯ 1 ಹಾಗೂ ವೈಎಸ್‌ಆರ್‌ಸಿಪಿ ಮೂರು ಸ್ಥಾನದಲ್ಲಿ ಮುನ್ನಡೆ.
ರಾಜಸ್ಥಾನ: ಬಿಜೆಪಿ 13, ಇಂಡಿಯ ಒಕ್ಕೂಟ 7 ಸ್ಥಾನಗಳಲ್ಲಿ ಮುನ್ನಡೆ.
ಒಡಿಶಾ: 21 ಸ್ಥಾನಗಳ ಪೈಕಿ ಬಿಜೆಪಿ 10, ಬಿಜೆಡಿ 8ರಲ್ಲಿ ಮುನ್ನಡೆ.
ಕೇರಳ: ಯುಡಿಎಫ್ ಮತ್ತು ಎಲ್‌ಡಿಎಫ್ 8-10 ಸ್ಥಾನ, ಬಿಜೆಪಿ ಒಂದು ಸ್ಥಾನದಲ್ಲಿ ಮುನ್ನಡೆ.
ದೆಹಲಿ: ಬಿಜೆಪಿ ಮತ್ತು ಎಎಪಿ ತಲಾ ಮೂರು ಸ್ಥಾನಗಳಲ್ಲಿ ಮುನ್ನಡೆ.
ಇತರರು: ತೆಲಂಗಾಣ ಮತ್ತು ಹರಿಯಾಣದಲ್ಲಿ ಬಿಜೆಪಿ 5-6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಇಂಡಿಯ ಒಕ್ಕೂಟ 3-4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಛತ್ತೀಸ್‌ಗಢ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂ, ತ್ರಿಪುರಾ ಮತ್ತು ಮಣಿಪುರದಲ್ಲಿ ಬಿಜೆಪಿ ಹಾಗೂ ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಅರುಣಾಚಲದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ.