ಫೆಡರಲ್ ಸಮೀಕ್ಷೆ: ಛತ್ತೀಸ್ ಗಢ, ಮಧ್ಯ ಪ್ರದೇಶ ರಾಜಸ್ಥಾನ್ ಗೆ ಕೇಸರಿ ರಂಗು

ಛತ್ತೀಸ್ ಗಢ, ಮಧ್ಯ ಪ್ರದೇಶ ರಾಜಸ್ಥಾನ್ ಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಮೇಲುಗೈ ಸಾಧಿಸಲಿದೆ. ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಗೆ ಆಘಾತ ಕಾದಿರುವಂತಿದೆ ಎಂದು ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶ ಸೂಚಿಸುತ್ತಿದೆ.;

Update: 2024-02-16 13:31 GMT

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳು 'ಹಿಂದಿ ಪ್ರದೇಶ' ಎಂದು ಗುರುತಿಸಿ ಸಮೀಕ್ಷೆ ನಡೆಸಲಾಗಿದೆ. 2019 ರ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಹೋಲಿಸಿದರೆ. ಬಿಜೆಪಿ ತನ್ನ ನೆಲೆಯನ್ನು ವಿಸ್ತರಿಸಿಕೊಂಡಂತೆ ಕಾಣುತ್ತಿದೆ. . 2023 ರ ಅಂತ್ಯದ ವೇಳೆಗೆ, ಈ ಮೂರು ರಾಜ್ಯಗಳಿಗೆ ಚುನಾವಣೆ ನಡೆದ ಚುನಾವಣೆಯ ಹಿನ್ನೆಲೆಯಲ್ಲಿಯೇ ಈ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶವನ್ನು ಅರ್ಥೈಸಬೇಕಾಗಿದೆ ಅಷ್ಟೆ.

ಛತ್ತೀಸ್ ಗಢ ಮತ್ತು ರಾಜಸ್ಥಾನಗಳ ಮತದಾರರು ಕಳೆದ ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಮತದಾರರು ಮಧ್ಯ ಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷವನ್ನೇ ಆಯ್ಕೆ ಮಾಡಿಕೊಂಡರು. ಆದರೆ ಮಧ್ಯ ಪ್ರದೇಶದಲ್ಲಿ ನಾಯಕತ್ವದ ಬದಲಾವಣೆಯಾಯಿತು. ಅನುಭವಿ ರಾಜಕಾರಣಿ, ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಹಿಂದಕ್ಕೆ ತಳ್ಳಿ ಅಷ್ಟೇನೂ ಪರಿಚಿತರಲ್ಲದ ಮೋಹನ್ ಯಾದವ್ ಅವರನ್ನು ಬಿಜೆಪಿ ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿ ಗಾದಿಯಲ್ಲಿ ಕೂಡಿಸಿತು.

ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆಯು ಈ ಮೂರೂ ರಾಜ್ಯಗಳಲ್ಲಿ ಕೇಸರಿ ನೆಚ್ಚಿನ ಬಣ್ಣ ಎಂಬುದನ್ನು ಸೂಚಿಸಿದೆ. ಮೂರು ರಾಜ್ಯಗಳಲ್ಲಿ, ಮತ ಹಂಚಿಕೆ ಮತ್ತು ಸೀಟು ಹಂಚಿಕೆಗೆ ಸಂಬಂಧಿಸಿದಂತೆ. 2024 ರ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಗಳು ಎಷ್ಟು ಸ್ಥಾನಗಳನ್ನು ಗಳಿಸುತ್ತವೆ? ಎಂಬುದು ಸಮೀಕ್ಷೆಯಿಂದ ತಿಳಿದುಬರುತ್ತದೆ.






ಮಧ್ಯಪ್ರದೇಶ: ಹೆಚ್ಚು ಕಡಿಮೆ ಯಥಾಸ್ಥಿತಿ

ಮಧ್ಯ ಭಾರತದ ರಾಜ್ಯವು ಈ ಬಾರಿ ಬಿಜೆಪಿಗೆ ಶೇಕಡಾ 63 ಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. 2019ಕ್ಕೆ ಹೋಲಿಸಿದರೆ ಮತಗಳಿಕೆಯಲ್ಲಿ ಶೇ 59ರಷ್ಟು ಕುಸಿತಕಂಡಿದರೂ ಈ ಬಾರಿ ಕಾಂಗ್ರೆಸ್ ಗಳಿಕೆಯ ನಿರೀಕ್ಷೆ ಇರುವ ಶೇ. ೨೩ಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.


ಮಧ್ಯಪ್ರದೇಶದ 29 ಲೋಕಸಭಾ ಸ್ಥಾನಗಳ ಪೈಕಿ, ಬಿಜೆಪಿ 28 ಸ್ಥಾನಗಳನ್ನು ಗಳಿಸಲಿದ್ದು, ಕಾಂಗ್ರೆಸ್ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ ಎನ್ನುತ್ತದೆ ದ ಫೆಡರಲ್ ಸಮೀಕ್ಷೆ.


ರಾಜಸ್ಥಾನ: ಬಿಜೆಪಿ ಬಲಿಷ್ಠ

2019ರಲ್ಲಿ ಬಿಜೆಪಿಗೆ ಶೇ.59ರಷ್ಟು ಮತಗಳನ್ನು ನೀಡಿದ ರಾಜಸ್ಥಾನ, ಈ ಬಾರಿ ಅದನ್ನು ಶೇ.61ಕ್ಕೆ ಹೆಚ್ಚಿಸುವ ಸಾಧ್ಯತೆ ಕಂಡುಬಂದಿದೆ . 2019 ಕ್ಕೆ ಹೋಲಿಸಿದರೆ ಕಾಂಗ್ರೆಸ್ ಮತ ಹಂಚಿಕೆಯನ್ನು ಶೇ 35 ರಿಂದ ಸುಮಾರು ಶೇ 27 ಕ್ಕೆ ಕುಸಿಯುವ ಸಾಧ್ಯತೆ ಇರುವುದಾಗಿ ಸಮೀಕ್ಷೆ ಸೂಚಿಸುತ್ತದೆ.


ರಾಜಸ್ಥಾನದ 25 ಲೋಕಸಭಾ ಸ್ಥಾನಗಳಲ್ಲಿ 24 ಸ್ಥಾನಗಳು ಬಿಜೆಪಿಗೆ ದಕ್ಕುವ ಸಾಧ್ಯತೆ ಇರುವುದಾಗಿ ಸಮೀಕ್ಷೆ ಹೇಳುತ್ತದೆ. ಕಾಂಗ್ರೆಸ್ ಒಂದು ಸ್ಥಾನವನ್ನು ತನ್ನದಾಗಿಸಿಕೊಳ್ಳುವ ಸಾಧ್ಯತೆ ಇರುವುದು ಸಮೀಕ್ಷೆಯಿಂದ ಮನದಟ್ಟಾಗುತ್ತದೆ.


ಛತ್ತೀಸ್ ಗಢ: ಬಿಜೆಪಿ ಲಾಭ

ಡಿಸೆಂಬರ್ 2023 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬದಲಿಸಿ, ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದ ಛತ್ತೀಸ್ ಗಢದ ಮತದಾರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದತ್ತ ವಾಲಿರುವುದು ಸಮೀಕ್ಷೆಯಿಂದ ಸ್ಪಷ್ಟವಾಗುತ್ತದೆ.


2019ರ ಲೋಕಸಭಾ ಚುನಾವಣೆಯ ಮತಗಳಿಕೆಗೆ ಹೋಲಿಸಿದರೆ, ಈ ಬಾರಿ ಮತಗಳಿಕೆಯ ಪ್ರಮಾಣ ಶೇ 51 ರಿಂದ ಶೇಕಡಾ 55 ಕ್ಕೆ ಹೆಚ್ಚು ಸಾಧ್ಯತೆ ಇದೆ. ಇನ್ನೊಂದೆಡೆ ಕಾಂಗ್ರೆಸ್ ನ ಮತಗಳಿಕೆ ಪ್ರಮಾಣ ಶೇ.41.5 ರಿಂದ ಶೇ.36ಕ್ಕೆ ಕುಸಿಯುವ ಸಾಧ್ಯತೆ ಇದೆ.


ಛತ್ತೀಸ್ ಗಢದ 11 ಲೋಕಸಭಾ ಸ್ಥಾನಗಳಲ್ಲಿ 10 ಸ್ಥಾನಗಳನ್ನು ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಳ್ಳುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಸೂಚಿಸುತ್ತದೆ.

ಹಿಂದಿನ ಸಮೀಕ್ಷೆ-ಸಂಬಂಧಿತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Tags:    

Similar News