Tirupati Laddu Row | ಸಿಬಿಐ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ: ಸುಪ್ರೀಂ ಆದೇಶ

ಇಬ್ಬರು ಸಿಬಿಐ ಅಧಿಕಾರಿಗಳು, ಇಬ್ಬರು ಆಂಧ್ರಪ್ರದೇಶ ಪೊಲೀಸ್‌ ಅಧಿಕಾರಿಗಳು ಮತ್ತು ಎಫ್‌ಎಸ್‌ಎಸ್‌ಎಐನ ಒಬ್ಬರನ್ನು ಒಳಗೊಂಡ ಎಸ್‌ಐಟಿ, ತಿರುಪತಿ ಲಡ್ಡು ಕಲಬೆರಕೆ ಕುರಿತು ತನಿಖೆ ನಡೆಸಲಿದೆ.

Update: 2024-10-04 08:08 GMT

ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಇತರ ಕಲಬೆರಕೆ ಅಂಶಗಳಿವೆ ಎಂಬ ಆರೋಪ ಕುರಿತು ತನಿಖೆ ನಡೆಸುವಂತೆ ಆದೇಶಿಸಿರುವ ಸುಪ್ರೀಂ ಕೋರ್ಟ್, ಐವರು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಿದೆ. 

ಎಸ್‌ಐಟಿಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ), ಇಬ್ಬರು ಆಂಧ್ರಪ್ರದೇಶ ಪೊಲೀಸ್‌ ಅಧಿಕಾರಿಗಳನ್ನು ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದ ಒಬ್ಬರು ಇರಲಿದ್ದು, ಸಿಬಿಐ ನಿರ್ದೇಶಕರು ತನಿಖೆಯ ಮೇಲ್ವಿಚಾರಣೆ ಮಾಡುತ್ತಾರೆ ಎಂದು ಸುಪ್ರೀಂ ಹೇಳಿದೆ.

ರಾಜಕೀಯ ನಾಟಕ ಬೇಡ

ಸುಪ್ರೀಂ- ನ್ಯಾಯಾಲಯವನ್ನು ರಾಜಕೀಯ ಯುದ್ಧಭೂಮಿಯಾಗಿ ಬಳಸಲು ತಾನು ಅನುಮತಿ ನೀಡುವುದಿಲ್ಲ. ಇದು ರಾಜಕೀಯ ನಾಟಕವಾಗಿ ಬದಲಾಗುವುದನ್ನು ನಾವು ಬಯಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠ ಹೇಳಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಆರೋಪದಲ್ಲಿ ಸತ್ಯಾಂಶವಿದ್ದರೆ, ಅದು ಸ್ವೀಕಾರಾರ್ಹವಲ್ಲ. ಎಸ್‌ಐಟಿ ತನಿಖೆಯ ಮೇಲ್ವಿಚಾರಣೆಯ ನ್ನು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಮಾಡಬಹುದು ಎಂದು ಸಲಹೆ ನೀಡಿದರು.

ರಾಜ್ಯ ನೇಮಿಸಿದ ಎಸ್‌ಐಟಿ ತನಿಖೆಯನ್ನು ಮುಂದುವರಿಸಬೇಕೇ ಅಥವಾ ಸ್ವತಂತ್ರ ಏಜೆನ್ಸಿಯಿಂದ ತನಿಖೆ ನಡೆಸಬೇಕೇ ಎಂದು ನಿರ್ಧರಿಸಲು ಸಹಾಯ ಮಾಡುವಂತೆ ಮೆಹ್ತಾ ಅವರನ್ನು ಸೆಪ್ಟೆಂಬರ್ 30 ರಂದು ಸುಪ್ರೀಂ ಕೇಳಿತ್ತು.

Tags:    

Similar News