The Federal: ಒಂದೇ ತಿಂಗಳಲ್ಲಿ 1 ಕೋಟಿ ಪುಟಗಳ ವೀಕ್ಷಣೆ ಪಡೆದ ‌ʼದ ಫೆಡರಲ್ʼ

ಗೂಗಲ್ ಅನಾಲಿಟಿಕ್ಸ್ ಅಂಕಿ ಅಂಶಗಳ ಹೇಳುವಂತೆ ʼದ ಫೆಡರಲ್ʼ ತನ್ನ ನಾಲ್ಕು ರಾಜ್ಯಗಳ ಭಾರತೀಯ ಭಾಷೆಗಳ ಆವೃತ್ತಿಯೊಂದಿಗೆ ಅಕ್ಟೋಬರ್ 2024ರಲ್ಲಿ ಈ ವಿಶೇಷ ಮೈಲುಗಲ್ಲು ಸಾಧಿಸಿದೆ.;

Update: 2024-11-05 15:09 GMT

ಜನಪ್ರಿಯ ಸುದ್ದಿ ವೆಬ್‌ಸೈಟ್‌ ʼದ ಫೆಡರಲ್‌ʼ ಕೇವಲ ಒಂದು ತಿಂಗಳಲ್ಲಿ 1 ಕೋಟಿ ಪುಟಗಳ ವೀಕ್ಷಣೆಗಳ ಮತ್ತರದ ಸಾಧನೆಯೊಂದನ್ನು ದಾಖಲಿಸಿದೆ. ʼಗೂಗಲ್‌ ಅನಾಲಿಟಿಕ್ಸ್‌ʼ ಅಂಕಿ ಅಂಶವು ಈ ಸಾಧನೆಯನ್ನು ಖಾತರಿಪಡಿಸಿದೆ. ಈ ಡಿಜಿಟಲ್ ಸುದ್ದಿ ವೇದಿಕೆಯು 2024 ಅಕ್ಟೋಬರ್‌ನಲ್ಲಿ ಈ ವಿನೂತನ ಮೈಲುಗಲ್ಲು ಸ್ಥಾಪಿಸಿದೆ.

ಡಿಜಿಟಲ್ ಸುದ್ದಿ ಮಾಧ್ಯಮಗಳು ಹೆಚ್ಚು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ನಡುವೆ ಸ್ಪರ್ಧೆಯೂ ಹೆಚ್ಚಾಗುತ್ತದೆ. ಇಂಥ ಕಾಲಘಟ್ಟದಲ್ಲಿ ಒಂದೇ ತಿಂಗಳ ಅವಧಿಯಲ್ಲಿ 1 ಕೋಟಿ ಪೇಜ್‌ಗಳ ವೀಕ್ಷಣೆಯ ಸಾಧನೆ ಮಾಡುವುದು ಸುಲಭವಲ್ಲ. ಇದಕ್ಕಾಗಿ ನಾವು ಧನ್ಯವಾದ ಹೇಳಬೇಕಾಗಿರುವ ಒಂದು ವರ್ಗವಿದ್ದರೆ, ಅವರು ನಮ್ಮ ಓದುಗರು, ವೀಕ್ಷಕರು ಮತ್ತು ಕೇಳುಗರು" ಎಂದು ʼದ ಫೆಡರಲ್‌ʼ ತನ್ನ ಹೇಳಿಕೆಯಲ್ಲಿ ಹರ್ಷ ವ್ಯಕ್ತಪಡಿಸಿದೆ.

ಐದು ಭಾಷೆಗಳಲ್ಲಿ ʼದ ಫೆಡರಲ್‌ʼ ಲಭ್ಯ

ಮಾರ್ಚ್ 2019ರಲ್ಲಿ ʼದ ಫೆಡರಲ್‌ʼನ ಇಂಗ್ಲಿಷ್ ಆವೃತ್ತಿ ಪ್ರಾರಂಭವಾಗಿತ್ತು. ನಂತರ ಈ , ಡಿಜಿಟಲ್ ಸುದ್ದಿ ವೇದಿಕೆಯು ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ ಮತ್ತು ದೆಹಲಿ ವಿಸ್ತರಿಸಿತು. ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಗುಣಮಟ್ಟದ ಸುದ್ದಿಗಳನ್ನು ನೀಡಲಾರಂಭಿಸಿತು.

ನಾವು 11 ತಿಂಗಳ ಹಿಂದೆ ಹೊಸ ಪ್ರಯಾಣ ಶುರುಮಾಡಿಕೊಂಡಿದ್ದೆವು. ಮೇ ತಿಂಗಳಲ್ಲಿ ರಾಜ್ಯವಾರು ಆವೃತ್ತಿಗಳನ್ನು ಒಂದೊಂದಾಗಿ ಪ್ರಾರಂಭಿಸಿದೆವು. ಹಿಂದಿಯ ʼದ ಫೆಡರಲ್ ದೇಶ್ʼ ಇತ್ತೀಚಿನ ಹೊಸ ಸೇರ್ಪಡೆ ಎಂದು ʼದ ಫೆಡರಲ್‌ʼನ ಪ್ರಕಾಶಕರು ಮತ್ತು ʼನ್ಯೂ ಜೆನರೇಷನ್‌ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನʼ ಕಾರ್ಯನಿರ್ವಹಣಾಧಿಕಾರಿ ಎನ್‌.ಸಿ ರಾಜಮಣಿ ಮಾಹಿತಿ ನೀಡಿದರು.

ಅಭೂತಪೂರ್ವ ಪ್ರತಿಕ್ರಿಯೆ

"ನಮ್ಮ ಓದುಗರು ಹಾಗೂ ವೀಕ್ಷಕರ ಪ್ರತಿಕ್ರಿಯೆ ನಿಜವಾಗಿಯೂ ಅಮೋಘವಾಗಿದೆ" ಎಂದು ʼದ ಫೆಡರಲ್‌ʼನ ಪ್ರಧಾನ ಸಂಪಾದಕ ಎಸ್ ಶ್ರೀನಿವಾಸನ್ ಅವರು ಹೇಳಿದ್ದಾರೆ. ʼʼಧ್ರುವೀಕರಣದ ನಿರೂಪಣೆಗಳಿಗೆ ಬಲಿಯಾಗುವುದು ಸರಳ ಎಂದು ಅಂದುಕೊಂಡಿರುವ ಈ ಸಮಯದಲ್ಲಿ ನಿಷ್ಪಕ್ಷಪಾತವಾಗಿ ಉಳಿಯುವ ನಮ್ಮ ನಿರಂತರ ಬದ್ಧತೆ ಹಾಗೂ ವಿಶ್ವಾಸಾರ್ಹತೆಗೆ ಲಭಿಸಿದ ಗೌರವ ಎಂಬುದಾಗಿ ಇದನ್ನು ನಾವು ಪರಿಗಣಿಸುತ್ತೇವೆ" ಎಂದು ಅವರು ಹೇಳಿದರು.

ಇನ್ನೂ ಅನೇಕ ಯೋಜನೆಗಳು ಜಾರಿಯಲ್ಲಿವೆ. ವಿನೂತನ ತಂತ್ರಜ್ಞಾನಗಳೊಂದಿಗೆ ಅನೇಕ ರಾಜ್ಯಗಳಲ್ಲಿ ʼದ ಫೆಡರಲ್‌ ʼ ಇನ್ನಷ್ಟು ಭಾಷಾ ಆವೃತ್ತಿಗಳೊಂದಿಗೆ ಉದಯಿಸಲಿವೆ. ಅದು ನಮ್ಮ ಓದುಗರಿಗೆ, ಕೇಳುಗರಿಗ ಹಾಗೂ ವೀಕ್ಷಕರಿಗೆ ಹೆಚ್ಚಿನ ಕೊಡುಗೆಗಳನ್ನು ನೀಡಲಿವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಳಮಟ್ಟದಿಂದಲೇ ವರದಿಗಾರಿಕೆ ಮಾಡುವುದು ಹಾಗೂ ದೀರ್ಘ ಸ್ವರೂಪದ ಸುದ್ದಿ ರಚನೆಯ ಮೂಲಕ ಅತ್ಯುತ್ತಮ ಗುಣಮಟ್ಟದ ಸುದ್ದಿಗಳನ್ನು ಪ್ರಕಟಿಸುವುದೇ ನಮ್ಮ ಅಸ್ತಿತ್ವದ ಮೂಲ. ಈ ಕಾರಣಕ್ಕೆ ನಮ್ಮ ಓದುಗರು ಹಾಗೂ ವೀಕ್ಷಕರು ನಮ್ಮೊಂದಿಗೆ ಇರುತ್ತಾರೆ ಹಾಗೂ ಕಳೆದ ಐದು ವರ್ಷಗಳಲ್ಲಿ ಜತೆಗಿದ್ದಾರೆ ಎಂದು ಭಾವಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 

ನಮ್ಮ ಎಲ್ಲ ವೆಬ್‌ಸೈಟ್‌ಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ

The Federal

The Federal Telangana

The Federal Karnataka

The Federal Andhra Pradesh

The Federal Desh

Tags:    

Similar News