Manipur violence | ಮಣಿಪುರ ಗಲಭೆಯಲ್ಲಿ ಹತ್ತು ತಿಂಗಳಲ್ಲಿ ಮೃತಪಟ್ಟವರ ಸಂಖ್ಯೆ 258
ವಿಧ್ವಂಸಕ ಕೃತ್ಯ ಮತ್ತು ಸಚಿವರು ಮತ್ತು ಶಾಸಕರ ಆಸ್ತಿಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 32 ಜನರನ್ನು ಬಂಧಿಸಲಾಗಿದ್ದು, ಸುಮಾರು 3,000 ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಸಲಹೆಗಾರ ತಿಳಿಸಿದ್ದಾರೆ.;
ಮಣಿಪುರದ ಮೈತಿ ಮತ್ತು ಕುಕಿ ಸಮುದಾಯಗಳ ನಡುವೆ ಕಳೆದ ವರ್ಷ ಮೇ ತಿಂಗಳಿನಿಂದೀಚೆಗೆ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ 258 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಶುಕ್ರವಾರ ಮಾಹಿತಿ ನೀಡಿದ್ದಾರೆ.
ಮಣಿಪುರದಲ್ಲಿ ಈಗಾಗಲೇ ಇರುವ 198 ತುಕಡಿಗಳ ಜೊತೆಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (ಸಿಎಪಿಎಫ್) ಸುಮಾರು 90 ತುಕಡಿಗಳು ಬರಲಿವೆ ಎಂದು ಅವರು ಹೇಳಿದ್ದಾರೆ. ಭದ್ರತಾ ಪರಿಶೀಲನಾ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ಭಯೋತ್ಪಾದಕರು ಸೇರಿದಂತೆ ಒಟ್ಟು ಸತ್ತವರ ಸಂಖ್ಯೆ 258ಕ್ಕೇ ಏರಿದೆ " ಎಂದು ಹೇಳಿದರು.
ವಿಧ್ವಂಸಕ ಕೃತ್ಯ ಮತ್ತು ಸಚಿವರು ಮತ್ತು ಶಾಸಕರ ಆಸ್ತಿಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 32 ಜನರನ್ನು ಬಂಧಿಸಲಾಗಿದ್ದು, ಸುಮಾರು 3,000 ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಸಲಹೆಗಾರ ತಿಳಿಸಿದ್ದಾರೆ.
"ಸುಮಾರು 90 ಸಿಎಪಿಎಫ್ ತುಕಡಿಗಳನ್ನು ರಕ್ಷಣೆಗಾಗಿ ಪಡೆಯುತ್ತಿದ್ದೇವೆ. ಅವರಲ್ಲಿ ಗಣನೀಯ ಸಂಖ್ಯೆಯ ಜನರು ಈಗಾಗಲೇ ಇಂಫಾಲ್ ತಲುಪಿದ್ದಾರೆ. ನಾಗರಿಕರು ಜೀವ ಮತ್ತು ಆಸ್ತಿಗಳನ್ನು ರಕ್ಷಿಸಲು ನಾವು ಪಡೆಗಳನ್ನು ವಿತರಿಸುತ್ತಿದ್ದೇವೆ" ಎಂದು ಸಿಂಗ್ ಹೇಳಿದರು.
ಭದ್ರತೆಗೆ ಯೋಜನೆ
ಸೇನೆ, ಬಿಎಸ್ಎಫ್, ಸಿಆರ್‌ಪಿಎಫ್ , ಅಸ್ಸಾಂ ರೈಫಲ್ಸ್, ಎಸ್ಎಸ್‌ಬಿ, ಐಟಿಬಿಪಿ ಮತ್ತು ಮಣಿಪುರ ಪೊಲೀಸರ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯ ನಂತರ ಅಧಿಕಾರಿಗಳು ಪ್ರತಿ ಜಿಲ್ಲೆಯಲ್ಲಿ ಸಮನ್ವಯ ಕೇಂದ್ರ ಮತ್ತು ಜಂಟಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಿದ್ದಾರೆ ಎಂದು ಅವರು ಹೇಳಿದರು.
"ಸಮನ್ವಯಕ್ಕಾಗಿ ಮತ್ತು ಗಡೆಯಂಚಿನ ಪ್ರದೇಶದ ಭದ್ರತೆಗಾಗಿ, ರಾಷ್ಟ್ರೀಯ ಹೆದ್ದಾರಿಗಳ ಭದ್ರತೆಗಾಗಿ ಮತ್ತು ಕಾಳಜಿ ವಹಿಸಬೇಕಾದ ಇತರ ಯಾವುದೇ ಪ್ರಮುಖ ಅಂಶಗಳಿಗಾಗಿ ಪಡೆಗಳನ್ನು ನಿಯೋಜಿಸಲು ಹಲವಾರು ಕಾರ್ಯಸೂಚಿಗಳನ್ನು ಸಿದ್ಧಪಡಿಸಿದ್ದೇವೆ ಎಂದು ಸಿಂಗ್ ಹೇಳಿದರು.
ಇದೇ ರೀತಿಯ ಎಲ್ಲಾ ಪ್ರಕರಣಗಳಲ್ಲಿ ಮಾಡಿದಂತೆ ಸಭೆಯ ಫಲಿತಾಂಶದ ಬಗ್ಗೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರಿಗೆ ವಿವರಿಸಲಾಗುವುದು ಎಂದು ಅವರು ಹೇಳಿದರು.
ಅಪಹರಣ ಪ್ರಕರಣದ ಬಗ್ಗೆ ನಿಗಾ
ಜಿರಿಬಾಮ್‌ನಲ್ಲಿ ಅಪಹರಣಕ್ಕೊಳಗಾಗಿ ಹತ್ಯೆ ಮಾಡಿರುವ ಆರು ಮಂದಿಯ ಮೃತದೇಹ ಸೇರಿದಂತೆ ಒಂಬತ್ತು ಶವಗಳನ್ನು ಬಿಗಿ ಭದ್ರತೆಯಲ್ಲಿ ಸಮಾಧಿ ಮಾಡಲಾಗಿದೆ ಎಂದು ಅವರು ಹೇಳಿದರು. ನವೆಂಬರ್ 11 ರಂದು ಜಿರಿಬಾಮ್‌ನ ಬೊರೊಬೆಕ್ರಾ ಪ್ರದೇಶ ಪರಿಹಾರ ಶಿಬಿರದಿಂದ ಆರು ಮಂದಿಯನ್ನು ಕುಕಿ ಉಗ್ರರು ಅಪಹರಿಸಿದ್ದಾರೆ ಎಂದು ಹೇಳಲಾಗಿದೆ. ಅವರಲ್ಲಿ ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳಿದ್ದರು.
ಸಿಆರ್‌ಪಿಎಫ್ ಪೋಸ್ಟ್ ಮೇಲೆ ದಾಳಿ ನಡೆಸಿ 10 ಉಗ್ರರನ್ನು ಹೊಡೆದುರುಳಿಸಲಾಗಿದೆ. ಇದಾದ ಕೆಲವೇ ದಿನಗಳಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಅಪಹರಿಸಲಾಗಿದೆ ಎಂಬುದು ಬೆಳಕಿಗೆ ಬಂದಿದೆ ಎಂದು ಸಿಂಗ್ ಹೇಳಿದ್ದಾರೆ.
ಭದ್ರತಾ ಪಡೆಗಳ ಸಮ್ಮುಖದಲ್ಲಿ ಅಪಹರಣ ನಡೆದಿದೆಯೇ ಎಂದು ಅವರು ಹೇಳಿದರು.
ಸಾವಿರಾರು ಮಂದಿ ನಿರಾಶ್ರಿತ
ಇಂಫಾಲ್ ಕಣಿವೆ ಮೂಲದ ಮೈತಿ ಮತ್ತು ಪಕ್ಕದ ಬೆಟ್ಟಗಳ ಮೂಲದ ಕುಕಿ-ಝೋ ಗುಂಪುಗಳ ನಡುವಿನ ಹಿಂಸಾಚಾರವು ಭಾರಿ ಸಾವುನೋವುಗಳನ್ನು ಉಂಟುಮಾಡುವುದರ ಜೊತೆಗೆ ಕಳೆದ ವರ್ಷ ಮೇ ತಿಂಗಳಿನಿಂದ ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ.
ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನಕ್ಕಾಗಿ ಮೈತಿ ಸಮುದಾಯ ಇಟ್ಟಿರುವ ಬೇಡಿಕೆಯನ್ನು ವಿರೋಧಿಸಲು ಗುಡ್ಡಗಾಡು ಜಿಲ್ಲೆಗಳಲ್ಲಿ 'ಬುಡಕಟ್ಟು ಐಕ್ಯತಾ ಮೆರವಣಿಗೆ' ಆಯೋಜಿಸಿದ ನಂತರ ಗಲಭೆ ಶುರುವಾಗಿತ್ತು.
ಮಣಿಪುರದ ಜನಸಂಖ್ಯೆಯ ಸುಮಾರು 53 ಪ್ರತಿಶತದಷ್ಟು ಮೈತಿಗಳು ಇದ್ದಾರೆ ಮತ್ತು ಹೆಚ್ಚಾಗಿ ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ನಾಗಾಗಳು ಮತ್ತು ಕುಕಿಗಳು ಎಂಬ ಬುಡಕಟ್ಟು ಜನಾಂಗದವರು ಶೇಕಡಾ 40 ಕ್ಕಿಂತ ಸ್ವಲ್ಪ ಹೆಚ್ಚು ಮತ್ತು ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.