ಘರ್ಷಣೆಗಳು, ರಾಜಕೀಯ ಬಿಕ್ಕಟ್ಟಿನ ನಡುವೆ ಮಣಿಪುರ ಹಿಂಸಾಚಾರ ಉಲ್ಬಣ

ನಾಗಾ ಪ್ರಾಬಲ್ಯದ ಪ್ರದೇಶಗಳಲ್ಲಿನ ದಿಗ್ಬಂಧನಗಳು ಮತ್ತು ಶಾಂತಿಯುತ ಪ್ರದೇಶಗಳ ಮೇಲಿನ ದಾಳಿ ವರದಿಗಳಾಗುತ್ತಿವೆ. ಇದು ಅಲ್ಲಿನ ಆಡಳಿತ, ಉತ್ತರದಾಯಿತ್ವ ಮತ್ತು ಶಾಂತಿಯ ಸಾಧ್ಯತೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ;

Update: 2024-11-15 02:30 GMT
Click the Play button to listen to article

ಈಗಾಗಲೇ ದೀರ್ಘಕಾಲದ ಜನಾಂಗೀಯ ಕಲಹದಿಂದ ತತ್ತರಿಸುತ್ತಿರುವ ಈಶಾನ್ಯ ಭಾರತದ ರಾಜ್ಯ ಮಣಿಪುರವು ಹಿಂಸಾಚಾರದ ಮತ್ತೊಂದು ಉಲ್ಬಣಕ್ಕೆ ಸಾಕ್ಷಿಯಾಗುತ್ತಿದೆ. ಜಿರಿಬಾಮ್ ಜಿಲ್ಲೆಯಲ್ಲಿ ಇತ್ತೀಚೆಗೆ ಭದ್ರತಾ ಪಡೆಗಳೊಂದಿಗಿನ ನಡೆದ ಘರ್ಷಣೆಯಲ್ಲಿ 10 ಗ್ರಾಮ ಸ್ವಯಂಸೇವಕರು ಸಾವನ್ನಪ್ಪಿದ್ದಾರೆ. ಗುಂಡಿನ ಚಕಮಕಿಯಲ್ಲಿ ಸಿಆರ್‌ಪಿಎಫ್‌ ಯೋಧರೊಬ್ಬರು ಗಾಯಗೊಂಡಿದ್ದಾರೆ. ಏತನ್ಮಧ್ಯೆ ನಾಗಾ ಪ್ರಾಬಲ್ಯದ ಪ್ರದೇಶಗಳಲ್ಲಿನ ದಿಗ್ಬಂಧನಗಳು ಮತ್ತು ಸಾಂಪ್ರದಾಯಿಕವಾಗಿ ಶಾಂತಿಯುತ ಪ್ರದೇಶಗಳ ಮೇಲೆ ದಾಳಿ ನಡೆದಿರುವ ಬಗ್ಗೆ ವರದಿಗಳಾಗುತ್ತಿವೆ. ಇದು ಅಲ್ಲಿನ ಆಡಳಿತ, ಉತ್ತರದಾಯಿತ್ವ ಮತ್ತು ಶಾಂತಿಯ ಸಾಧ್ಯತೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಜಿರಿಬಾಮ್ ಜಿಲ್ಲೆಯಲ್ಲಿ ಹೊಸ ಆತಂಕ

ಅರಂಬೈ ತೆಂಗೋಲ್ ಮಿಲಿಟಿಯಾ ಗುಂಪು ಹಳ್ಳಿಯೊಂದನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ, ಮನೆಗಳಿಗೆ ಬೆಂಕಿ ಹಚ್ಚಿ ಮಹಿಳೆಯನ್ನು ಕೊಂದಿದೆ ಎಂದು ಆರೋಪಿಸಲಾಗಿದೆ. ಕುಕಿ-ಸಂಯೋಜಿತ ಗ್ರಾಮ ಸ್ವಯಂಸೇವಕರು ಸಿಆರ್‌ಪಿಎಫ್‌ ಪೋಸ್ಟ್ ಒಂದ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದ್ದು, ಇದು ಅಸಾಮಾನ್ಯ ಘರ್ಷಣೆಯಂತೆ ತೋರುತ್ತದೆ. , ರಾಜ್ಯ ಪೊಲೀಸರು ತಮ್ಮ ಬಗ್ಗೆ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ ಎಂದು ಕುಕಿ ಗುಂಪುಗಳು ಆರೋಪಿಸಿವೆ. ಕೇಂದ್ರ ಪಡೆಗಳ ಬಗ್ಗೆ ಒಲವು ಹೊಂದಿದೆ.

ಹಿರಿಯ ಪತ್ರಕರ್ತ ಸಮೀರ್ ಪುರ್ಕಾಯಸ್ಥ ಅವರ ಪ್ರಕಾರ, ಈ ಘರ್ಷಣೆಗಳು ಕೇಂದ್ರ ಗೃಹ ಸಚಿವಾಲಯದ ನೇತೃತ್ವದಲ್ಲಿ ಕುಕಿ ಮತ್ತು ಮೈತಿ ಪ್ರತಿನಿಧಿಗಳ ನಡುವಿನ ಮಾತುಕತೆಗಳ ಬಳಿಕ ನಡೆದಿದಿದೆ. ಹೀಗಾಗಿ ಶಾಂತಿ ಪ್ರಕ್ರಿಯೆಯನ್ನು ಹಳಿ ತಪ್ಪಿಸಲು ಪಟ್ಟಭದ್ರ ಹಿತಾಸಕ್ತಿಗಳು ಈ ಹಿಂಸಾತ್ಮಕ ಘಟನೆಗಳನ್ನು ಸಂಘಟಿಸುತ್ತಿದ್ದಾರೆ ಎಂದು ಪುರ್ಕಾಯಸ್ಥ ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಈ ಹಿಂದೆ ಇದೇ ರೀತಿಯ ಮಾತುಕತೆಯ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ.

ರಾಜಕೀಯ ಗೊಂದಲ

ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ಮೇಲೆ ಹೆಚ್ಚುತ್ತಿರುವ ರಾಜಕೀಯ ಒತ್ತಡದ ಜತೆಗೆ ಹಿಂಸೆಯೂ ಹೆಚ್ಚುತ್ತಿದೆ ಎಂಬುದನ್ನು ವಿಮರ್ಶಕರು ಗುರುತಿಸಿದ್ದಾರೆ. ಸಿಂಗ್ ಅವರನ್ನು ಸಂಘರ್ಷದಲ್ಲಿ ಸಿಲುಕಿಸುವ ಸೋರಿಕೆಯಾದ ಆಡಿಯೊ ಟೇಪ್‌ಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಆಲಿಸಲು ಸುಪ್ರೀಂ ಕೋರ್ಟ್ ಸಿದ್ಧವಾಗುತ್ತಿರುವ ನಡುವೆ ಹೊಸ ಘರ್ಷಣೆಗಳು ಸಂಭವಿಸಿವೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಡಾ.ಥೊಂಗ್ಖೋಲಾಲ್ ಹಾವೊಕಿಪ್ ಅವರ ಪ್ರಕಾರ, ಸಿಂಗ್ ಅವರ ರಾಜೀನಾಮೆ ಮತ್ತು ಕಾನೂನು ಕ್ರಮದ ವಿಷಯಗಳಿಂದ ಗಮನ ಬೇರೆಡೆಗೆ ಸೆಳೆಯಲು ಹಿಂಸಾಚಾರ ಎಬ್ಬಿಸುವ ತಂತ್ರ ಪ್ರಯೋಗಿಸಲಾಗುತ್ತಿದೆ.

ಇದು ಸ್ಪಷ್ಟ ಮಾದರಿ. ಎಂದು ಡಾ. ಹಾವೊಕಿಪ್ ಹೇಳುತ್ತಾರೆ. "ಜವಾಬ್ದಾರಿ ಹೆಚ್ಚಾದಾಗಲೆಲ್ಲಾ, ಸಮಸ್ಯೆಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಹಿಂಸಾಚಾರವು ಮರುಕಳಿಸುತ್ತದೆ." ಈ ಪುನರಾವರ್ತಿತ ಘಟನೆಗಳು ಶಾಂತಿ ಪ್ರಕ್ರಿಯೆಯನ್ನು ದುರ್ಬಲಗೊಳಿಸುವುದಲ್ಲದೆ ಮಣಿಪುರದ ಜನಾಂಗೀಯ ಸಮುದಾಯಗಳಲ್ಲಿ ಅಪನಂಬಿಕೆ ಹೆಚ್ಚಿಸುತ್ತಿದೆ.

ಹಿಂಸಾಚಾರ ಹರಡುವುದು, ಸಂಘರ್ಷ ಹೆಚ್ಚಿಸುವುದು

ಮಣಿಪುರದ ಜನಾಂಗೀಯ ಕಲಹವೀಗ, ಕುಕಿ ಮತ್ತು ಮೈತಿ ಸಮುದಾಯಗಳಿಂದ ನಾಗಾ ಸಮುದಾಯಕ್ಕೆ ವ್ಯಾಪಿಸಿದೆ. ಇದು ಬಿಕ್ಕಟ್ಟನ್ನು ಮತ್ತಷ್ಟು ಜಟಿಲಗೊಳಿಸುತ್ತದೆ. ಜಿರಿಬಾಮ್ ನಂತಹ ಶಾಂತಿಯುತ ಪ್ರದೇಶಗಳು ನಿಗಿನಿಗಿ ಕೆಂಡದಂತಾಗಿವೆ. ಇದು ಸಂಘರ್ಷದ ವಿಸ್ತರಣೆಗೆ ಉದಾಹರಣೆ .

ಪುರ್ಕಾಯಸ್ಥ ಅವರ ಪ್ರಕಾರ, ಶಾಂತಿಯುತ ಸಹಬಾಳ್ವೆ ನಡೆಸುತ್ತಿದ್ದ ಸಮುದಾಯಗಳನ್ನು ಈಗ ಹಿಂಸಾಚಾರಕ್ಕೆ ಸೆಳೆಯಲಾಗುತ್ತಿದೆ, ಪ್ರಚೋದಕರು ಉದ್ದೇಶಪೂರ್ವಕವಾಗಿ ಸಂಘರ್ಷವನ್ನು ವಿಸ್ತರಿಸುತ್ತಿದ್ದಾರೆ. ಈ ಉದ್ದೇಶಪೂರ್ವಕ ಅಸ್ಥಿರತೆ ಮಣಿಪುರವನ್ನು ಇನ್ನಷ್ಟು ಹದಗಡಿಸಿದೆ.

ಈಶಾನ್ಯ ಹಿಲ್ ವಿಶ್ವವಿದ್ಯಾಲಯದ ಪ್ರೊಫೆಸರ್ ಪ್ರಸೇನ್ಜಿತ್ ಬಿಸ್ವಾಸ್ ಅವರು ಹಿಂಸಾಚಾರವು ಹೊಸ ಪ್ರದೇಶಗಳಿಗೆ ಹರಡಿರುವುದು ಆಡಳಿತದ ವೈಫಲ್ಯ ಎಂದಿದ್ದಾರೆ. ಇದು ಈಗಾಗಲೇ ದುರ್ಬಲವಾಗಿರುವ ರಾಜ್ಯದ ಸಾಮಾಜಿಕ-ರಾಜಕೀಯ ರಚನೆಯ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರಬಹುದು ಎಂದು ಅವರು ಎಚ್ಚರಿಸಿದ್ದಾರೆ.

ನಿಷ್ಕ್ರಿಯ ಸರ್ಕಾರ ಮತ್ತು ಟೀಕೆಗಳು

ಬಿಕ್ಕಟ್ಟನ್ನು ನಿಭಾಯಿಸಿದ ರೀತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೀವ್ರ ಟೀಕೆಗಳನ್ನು ಎದುರಿಸಿವೆ. ಭದ್ರತಾ ಪಡೆಗಳ ನಿಯೋಜನೆಯ ಹೊರತಾಗಿಯೂ, ಸೇನಾಪಡೆಗಳನ್ನು ನಿಶ್ಯಸ್ತ್ರಗೊಳಿಸಲಾಗಿದೆ. ಮುಖ್ಯಮಂತ್ರಿಗಳು ಗೃಹ ಸಚಿವರಾಗಿ ಮುಂದುವರಿಯುವುದನ್ನು ಟೀಕಾಕಾರರು ಒಪ್ಪುತ್ತಿಲ್ಲ. ಅವರ ದ್ವಿಪಾತ್ರವು ರಾಜ್ಯದ ನಾಯಕತ್ವದ ಮೇಲಿನ ವಿಶ್ವಾಸ ಕಳೆಯುವಂತೆ ಮಾಡಿದೆ.

ಕೇಂದ್ರ ಸರ್ಕಾರ ಕೂಡ ನಿಷ್ಕ್ರಿಯ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಒಂದು ವರ್ಷದ ಹಿಂದೆ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ ಪ್ರಧಾನಿ ನರೇಂದ್ರ ಮೋದಿ ಇನ್ನೂ ಮಣಿಪುರಕ್ಕೆ ಭೇಟಿ ನೀಡಿರಲಿಲ್ಲ. ಕಳೆದ ತಿಂಗಳು ನವದೆಹಲಿಯಲ್ಲಿ ಕುಕಿ ಮತ್ತು ಮೈತಿ ಶಾಸಕರ ನಡುವೆ ನಡೆದ ಶಾಂತಿ ಸಂಧಾನ ಕೆಲಸ ಮಾಡುತ್ತಿಲ್ಲ.

ಆರ್ಥಿಕ ಹಿತಾಸಕ್ತಿಗಳ ಪಾತ್ರ

ಜನಾಂಗೀಯ ಮತ್ತು ರಾಜಕೀಯ ಉದ್ವಿಗ್ನತೆಗಳನ್ನು ಮೀರಿ, ಆರ್ಥಿಕ ಅಂಶಗಳು ಸಹ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಕೆಲವು ತಜ್ಞರು ಸೂಚಿಸುತ್ತಾರೆ. ಒಂದು ಕಾಲದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ನಿಗದಿಯಾಗಿದ್ದ ಬರಾಕ್ ಕಣಿವೆಯಂತಹ ಸಂಪನ್ಮೂಲ ಸಮೃದ್ಧ ಪ್ರದೇಶಗಳು ಈಗ ಘರ್ಷಣೆಗಳ ತಾಣಗಳಾಗಿವೆ. ಭೂಸ್ವಾಧೀನ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ಬಗೆಗಿನ ಊಹಾಪೋಹಗಳು ಹಿಂಸಾಚಾರವಾಗಿದೆ.

ಶಾಂತಿಯ ಮಾರ್ಗ

ಮಣಿಪುರದಲ್ಲಿ ಶಾಂತಿ ಕಾಪಾಡಲು ತಕ್ಷಣ ಮತ್ತು ನಿರಂತರ ಪ್ರಯತ್ನಗಳು ಅಗತ್ಯ. ಮಿಲೀಷಾ ಗುಂಪುಗಳನ್ನು ಸಮಾಧಾನ ಮಾಡಲು, ಸಮುದಾಯಗಳ ನಡುವಿನ ಬಾಂಧವ್ಯಕ್ಕೆ ಪ್ರೋತ್ಸಾಹಿಸಲು ಮತ್ತು ಸಂಘರ್ಷದ ಮೂಲಗಳನ್ನು ಪರಿಹರಿಸಲು ತಜ್ಞರು ಒತ್ತಾಯಿಸುತ್ತಾರೆ.

ಡಾ. ಹಾಓಕಿಪ್ ರಾಜಕೀಯ ವಿಕೇಂದ್ರೀಕರಣವನ್ನು ದೀರ್ಘಕಾಲಿಕ ಪರಿಹಾರವೆಂದು ಪ್ರಸ್ತಾಪಿಸುತ್ತಾರೆ. 6ನೇ ಅನುಸೂಚಿಯಡಿ ಪರ್ವತ ಪ್ರದೇಶಗಳಿಗೆ ಹೆಚ್ಚು ಸ್ವಾಯತ್ತತೆ ನೀಡಬೇಕೆಂಬ ಬೇಡಿಕೆಯನ್ನು ನಿರ್ಲಕ್ಷಿಸಿದ ಪರಿಣಾಮ ಈ ಸಮಸ್ಯೆ ಉಲ್ಬಣಗೊಂಡಿದೆ ಎಂದು ಅವರು ಹೇಳುತ್ತಾರೆ .

ಪ್ರೊಫೆಸರ್ ಬಿಸ್ವಾಸ್, ಭದ್ರತಾ ಪಡೆಗಳು ಮತ್ತು ಮಿಲೀಷಾ ಗುಂಪುಗಳ ನಡುವಿನ ಸಂಬಂಧವನ್ನು ಪರಿಶೀಲಿಸಬೇಕು ಎನ್ನುತ್ತಾರೆ. ಪ್ರಜಾಪ್ರಭುತ್ವದಲ್ಲಿ ಸತ್ಯದ ಬಹಿರಂಗ ಮತ್ತು ಜವಾಬ್ದಾರಿತನ ಅಗತ್ಯ ಎಂದು ಹೇಳಿದ್ದಾರೆ.

Tags:    

Similar News