ಚುನಾವಣೆ 2024: ಸುನಿಲ್ ಶರ್ಮಾ ಬದಲಿಸಿದ ಕಾಂಗ್ರೆಸ್

ಬಲಪಂಥೀಯ ಡಿಜಿಟಲ್ ಪ್ಲಾಟ್‌ಫಾರ್ಮ್ ʻದಿ ಜೈಪುರ ಡೈಲಾಗ್ಸ್‌ʼ ನ ನಿರ್ದೇಶಕನೆಂಬ ಆರೋಪ

Update: 2024-03-25 11:19 GMT

ಮುಖಭಂಗದ ಬಳಿಕ ಕಾಂಗ್ರೆಸ್ ತನ್ನ ಜೈಪುರ ಅಭ್ಯರ್ಥಿ ಸುನಿಲ್ ಶರ್ಮಾ ಅವರನ್ನು ಬದಲಿಸಿದ್ದು, ಮಾಜಿ ಸಚಿವ ಪ್ರತಾಪ್ ಸಿಂಗ್ ಖಚ್ರಿಯಾವಾಸ್ ಅವರಿಗೆ ಅವಕಾಶ ನೀಡಿದೆ.

ದ್ವೇಷವನ್ನು ಹರಡುವ ಮತ್ತು ಕಾಂಗ್ರೆಸ್ ನಾಯಕರನ್ನು ವಿಶೇಷವಾಗಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡುವ ಬಲಪಂಥೀಯ ಡಿಜಿಟಲ್ ಪ್ಲಾಟ್‌ಫಾರ್ಮ್ ʻದಿ ಜೈಪುರ ಡೈಲಾಗ್ಸ್‌ʼ ನ ನಿರ್ದೇಶಕನನ್ನು ಆಯ್ಕೆ ಮಾಡಿದ್ದು ಗದ್ದಲಕ್ಕೆ ಕಾರಣವಾಯಿತು. ವಿವಾದ ಭುಗಿಲೆದ್ದ ನಂತರ ಜೈಪುರ ಡೈಲಾಗ್ಸ್‌ನೊಟ್ಟಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಶರ್ಮಾ ಹೇಳಿಕೊಂಡಿದ್ದರು. 

ʻನಾನು ಜೈಪುರ ಡೈಲಾಗ್‌ನ ಯೂಟ್ಯೂಬ್ ಚಾನೆಲ್ ಅಥವಾ ಟ್ವಿಟರ್ ಹ್ಯಾಂಡಲ್‌ನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಇದು ನಕಲಿ ಸುದ್ದಿ ಮತ್ತು ಕಾಂಗ್ರೆಸ್ ವಿರುದ್ಧ ಸುಳ್ಳು ಪ್ರಚಾರ ಮಾಡಲಾಗುತ್ತಿದೆʼ ಎಂದು ಶರ್ಮಾ ಶನಿವಾರ ಎಕ್ಸ್‌ ನಲ್ಲಿ ಬರೆದಿದ್ದರು. 

ಶರ್ಮಾ ಅವರನ್ನು ಬದಲಿಸಿದ ಕೂಡಲೇ, ʻಜೈಪುರ ಡೈಲಾಗ್ಸ್‌ ಗೆ ಹೆದರಿದ ಕಾಂಗ್ರೆಸ್ʼ ಎಂದು ಎಕ್ಸ್‌ ನಲ್ಲಿ ಗೇಲಿ ಮಾಡಿದೆ. ಮಹಾರಾಷ್ಟ್ರದ ಚಂದ್ರಾಪುರ ಕ್ಷೇತ್ರದಿಂದ ಹಾಲಿ ಶಾಸಕಿ ಪ್ರತಿಭಾ ಧನೋರ್ಕರ್ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. ಪ್ರತಿಭಾ ಅವರು 2019ರಲ್ಲಿ ಮಹಾರಾಷ್ಟ್ರದಿಂದ ಗೆದ್ದ ಏಕೈಕ ಕಾಂಗ್ರೆಸ್ ಅಭ್ಯರ್ಥಿ, ಕುಣಬಿ ನಾಯಕ ದಿವಂಗತ ಸುರೇಶ್ ಬಾಲುಭಾಯಿ ಧನೋರ್ಕರ್ ಅವರ ಪತ್ನಿ. ಮಹಾರಾಷ್ಟ್ರದ ಪ್ರತಿಪಕ್ಷ ನಾಯಕ ವಿಜಯ್ ವಡೆತ್ತಿವಾರ್ ಅವರು ಚಂದ್ರಾಪುರದಿಂದ ತಮ್ಮ ಮಗಳಿಗೆ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದರು.

ಪಕ್ಷ ರಾಜಸ್ಥಾನದ ದೌಸಾ ಕ್ಷೇತ್ರದಲ್ಲಿ ಮುರಾರಿ ಲಾಲ್ ಮೀನಾ ಅವರಿಗೆ ಟಿಕೆಟ್ ನೀಡಿದೆ. 

Tags:    

Similar News