ಆರ್‌ಸಿಬಿ ವಿ/ಎ‌ಸ್‌ ಸಿಎಸ್‌ಕೆ ಪಂದ್ಯ: ಟೀಕೆಗೆ ಪ್ರತಿಕ್ರಿಯಿಸಬೇಕಿಲ್ಲ- ವಿರಾಟ್‌ ಕೊಹ್ಲಿ

ʻ20 ಓವರ್‌ ಅಥವಾ 50 ಓವರ್‌ಗಳ ಪಂದ್ಯವಾಗಲಿ, ಅವರು ಪಂದ್ಯವನ್ನು ಕೊನೆಯ ಓವರ್‌ವರೆಗೆ ಕೊಂಡೊಯ್ಯುತ್ತಾರೆ ಎಂದು ಜನರು ಮಹಿ ಭಾಯ್ (ಎಂ.ಎಸ್. ಧೋನಿ) ಬಗ್ಗೆ ಮಾತನಾಡುತ್ತಾರೆʼ ಎಂದು ಕೊಹ್ಲಿ ಹೇಳಿದರು. ʻಬಾಲ್ಯದಿಂದಲೂ ನನಗೆ ಇಂಥ ವಿಷಯಗಳಲ್ಲಿ ಆಸಕ್ತಿ ಇಲ್ಲ... ನನ್ನ ಕರೆನ್ಸಿ ಒಂದೇ: ಅದು ಕಾರ್ಯಕ್ಷಮತೆʼ ಎಂದು ಕೊಹ್ಲಿ ಹೇಳಿದರು.

Update: 2024-05-18 11:17 GMT

ʻಇತರರ ಟೀಕೆಗೆ ಪ್ರತಿಕ್ರಿಯಿಸಬೇಕಿಲ್ಲʼ ಎಂದು ತಮ್ಮ ಟೀಕಾಕಾರರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟರ್ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ.

ಐಪಿಎಲ್ 2024 ರ ಸಮಯದಲ್ಲಿ ಕೊಹ್ಲಿಯ ಸ್ಟ್ರೈಕ್ ರೇಟ್ ಬಗ್ಗೆ ಪ್ರಶ್ನೆಗಳಿವೆ. ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಅವರು ಕೊಹ್ಲಿಯನ್ನು ಪ್ರಶ್ನಿಸಿದ್ದವರಲ್ಲಿ ಒಬ್ಬರು. ಕೊಹ್ಲಿ ಹೇಳಿಕೆಯನ್ನು ಪದೇಪದೇ ತೋರಿಸಿದ್ದಕ್ಕೆ ಆತಿಥೇಯ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ನ್ನು ಅವರು ದೂಷಿಸಿದ್ದರು. 

ಜಿಯೋಸಿನೆಮಾದಲ್ಲಿ,ʻಬಾಹ್ಯ ವಾತಾವರಣದಿಂದ ಶಬ್ದ ಬರುತ್ತಿದೆ. ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?ʼ ಎಂದು ಅವರನ್ನು ಕೇಳಲಾಯಿತು. ಪ್ರತಿಕ್ರಿಯಿಸಿದ ಕೊಹ್ಲಿ,ʻನಾನು ಯಾವುದೇ ಪ್ರತಿಕ್ರಿಯೆ ನೀಡಬೇಕಿಲ್ಲ. ಅಂಕಣದಲ್ಲಿ ಏನು ಮಾಡಬಹುದೆಂದು ನನಗೆ ಗೊತ್ತಿದೆ. ನಾನು ಎಂಥ ಆಟಗಾರ, ನನ್ನ ಸಾಮರ್ಥ್ಯ ಏನು ಎಂದು ನಾನು ಯಾರಿಗೂ ಹೇಳಬೇಕಿಲ್ಲ. ಪಂದ್ಯವನ್ನು ಹೇಗೆ ಗೆಲ್ಲಬೇಕೆಂದು ನಾನು ಯಾರನ್ನೂ ಕೇಳಿಲ್ಲ. ಬೇರೆ ಬೇರೆ ಸನ್ನಿವೇಶಗಳಲ್ಲಿ ವೈಫಲ್ಯದ ಮೂಲಕ ನಾನೇ ಕಲಿತಿದ್ದೇನೆ. ಇದು ಆಕಸ್ಮಿಕವಾಗಿ ಸಂಭವಿಸುವುದಿಲ್ಲ. ಸರಿ, ನೀವು ತಂಡಕ್ಕಾಗಿ ಒಂದು ಇಲ್ಲವೇ ಎರಡು ಪಂದ್ಯವನ್ನು ಗೆದ್ದಿದ್ದೀರಿ ಎಂದುಕೊಳ್ಳಿ. ಆದರೆ, ನೀವು ಪದೇಪದೇ ಗೆಲ್ಲುತ್ತಿದ್ದರೆ, ಅದು ಆಕಸ್ಮಿಕವಾಗಿ ಸಂಭವಿಸು ವುದಿಲ್ಲʼ ಎಂದರು. 

ʻಪಂದ್ಯವನ್ನು ಹೊರಗಿನಿಂದ ನೋಡುವುದು ಮತ್ತು ಆಟಗಾರನಾಗಿ ಆ ಕ್ಷಣದಲ್ಲಿ ಆಡುವುದು ಸಂಪೂರ್ಣವಾಗಿ ವಿಭಿನ್ನ,ʼ ಎಂದು ಕೊಹ್ಲಿ ಹೇಳಿದರು. ʻ20 ಓವರ್‌ ಅಥವಾ 50 ಓವರ್‌ಗಳ ಪಂದ್ಯವಾಗಲಿ. ಅವರು ಪಂದ್ಯವನ್ನು ಕೊನೆಯ ಓವರ್‌ವರೆಗೆ ಏಕೆ ಕೊಂಡೊಯ್ಯುತ್ತಿದ್ದರು ಎಂದು ಜನರು ಮಹಿ ಭಾಯ್ (ಎಂ.ಎಸ್. ಧೋನಿ) ಬಗ್ಗೆ ಮಾತನಾಡುತ್ತಾರೆʼ ಎಂದು ಹೇಳಿದರು. ʻಅವರು (ಧೋನಿ) ಎಷ್ಟು ಪಂದ್ಯಗಳನ್ನು ಗೆದ್ದಿದ್ದಾರೆ? ಏನು ಮಾಡುತ್ತಿದ್ದೇನೆ ಎಂದು ಗೊತ್ತಿದ್ದ ಏಕೈಕ ವ್ಯಕ್ತಿ ಅವರೇ. ಅದನ್ನು ತಿಳಿವಳಿಕೆ ಎನ್ನಲಾಗುತ್ತದೆ; ನನಗೆ ಅದು ನೆನಪುʼ ಎಂದು ಕೊಹ್ಲಿ ಹೇಳಿದರು. 

ʻಕೊನೆಯ ಓವರ್‌ಗೆ ಕೊಂಡೊಯ್ದರೆ ಪಂದ್ಯವನ್ನು ಮುಗಿಸಬಹುದು ಎಂದು ಅವರಿಗೆ ತಿಳಿದಿತ್ತು. ಆದರೆ, ನನ್ನ ಮನಸ್ಥಿತಿ ಬೇರೆ. ನಾನು ಯಾವಾಗಲೂ ಹೇಳುತ್ತಿದ್ದೆ- 19ನೇ ಓವರ್ ಅಥವಾ 49ನೇ ಓವರ್‌ನಲ್ಲಿ ಆಟ ಮುಗಿಸೋಣ. ಅವರು (ಧೋನಿ) ನನ್ನೊಂದಿಗೆ ಬ್ಯಾಟ್‌ ಮಾಡುತ್ತಿದ್ದರೆ, ಅದು ಬೇರೆ ಕತೆ. ಆದರೆ, ಅವರು ಒಬ್ಬಂಟಿಯಾಗಿದ್ದರೆ ಪಂದ್ಯವನ್ನು ಕೊನೆಯ ಓವರ್‌ಗೆ ಕೊಂಡೊಯ್ಯುತ್ತಿದ್ದರುʼ ಎಂದು ಹೇಳಿದರು. ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರ ಪಕ್ಕದಲ್ಲಿ ನಿಂತಿದ್ದರು. 

ʻಅಂಕಣದಲ್ಲಿ ನಾನು ಏನು ಮಾಡಬಲ್ಲೆ ಎಂದು ನನಗೆ ತಿಳಿದಿದೆ. ನೀವು ತುಂಬಾ ಚೆನ್ನಾಗಿ ಆಡಿದ್ದೀರಿ ಎಂಬ ಅನುಮೋದನೆ ಅಥವಾ ಶ್ಲಾಘನೆ ಅಗತ್ಯವಿಲ್ಲ.ಬಾಲ್ಯದಿಂದಲೂ ನನಗೆ ಇಂಥ ವಿಷಯಗಳಲ್ಲಿ ಆಸಕ್ತಿ ಇಲ್ಲ... ನನ್ನ ಕರೆನ್ಸಿ ಒಂದೇ: ಅದು ಕಾರ್ಯಕ್ಷಮತೆʼ.

Tags:    

Similar News