ತಿಹಾರ್ ಜೈಲಿಗೆ ಮರಳಲಿರುವ ಕೇಜ್ರಿವಾಲ್

ತೂಕ ನಷ್ಟದಿಂದ ಯಾವುದೇ ಗಂಭೀರ ಕಾಯಿಲೆಯ ಸಾಧ್ಯತೆಯನ್ನು ತಳ್ಳಿಹಾಕಲು ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಿದೆ ಎಂದು ಕೇಜ್ರಿವಾಲ್ ಹೇಳಿದರು. ಅನಾರೋಗ್ಯದಿಂದ ಬಳಲುತ್ತಿರುವ ಪೋಷಕರನ್ನು ನೋಡಿಕೊಳ್ಳುವಂತೆ ದೆಹಲಿಯ ಜನರನ್ನು ಕೋರಿದರು.

Update: 2024-05-31 11:39 GMT

ಜೂನ್ 2 ರಂದು (ಭಾನುವಾರ) ತಿಹಾರ್ ಜೈಲಿಗೆ ವಾಪಸಾಗಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ವಿವರಿಸಲಾಗದ ಮತ್ತು ಅಧಿಕ ಹೆಚ್ಚು ತೂಕ ನಷ್ಟ ಅನುಭವಿಸಿದ್ದು, ವೈದ್ಯಕೀಯ ಆರೈಕೆ ಅಗತ್ಯವಿದೆ ಎಂದು ಶುಕ್ರವಾರ ಹೇಳಿದರು.

ಆಮ್ ಆದ್ಮಿ ಪಕ್ಷದ ನಾಯಕನಿಗೆ ಸುಪ್ರೀಂ ಕೋರ್ಟ್ 21 ದಿನಗಳ ಜಾಮೀನು ನೀಡಿದೆ. ಅವರು ಏಳನೇ ಮತ್ತು ಕೊನೆಯ ಹಂತದ ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಬಹುದು ಎಂದು ಹೇಳಿತ್ತು.

ಯಾವುದೇ ಗಂಭೀರ ಕಾಯಿಲೆಯ ಸಾಧ್ಯತೆಯನ್ನು ತಳ್ಳಿಹಾಕಲು ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ಅನಾರೋಗ್ಯಪೀಡಿತ ಪೋಷಕರನ್ನು ನೋಡಿಕೊಳ್ಳುವಂತೆ ದೆಹಲಿಯ ಜನರನ್ನು ಕೋರಿದರು.ʻಚುನಾವಣೆ ಪ್ರಚಾರಕ್ಕೆ ಸುಪ್ರೀಂ ಕೋರ್ಟ್ ನನಗೆ 21 ದಿನಗಳ ಕಾಲಾವಕಾಶ ನೀಡಿತ್ತು. ನಾಡಿದ್ದು ನಾನು ತಿಹಾರ್ ಜೈಲಿಗೆ ಹಿಂತಿರುಗುತ್ತೇನೆ. ಇವರು ನನ್ನನ್ನುಎಷ್ಟು ದಿನ ಜೈಲಿನಲ್ಲಿ ಇಡುತ್ತಾರೆ ಎಂಬುದು ಗೊತ್ತಿಲ್ಲʼ ಎಂದು ಹೇಳಿದರು. ʻಆದರೆ ನನ್ನ ಉತ್ಸಾಹ ಹೆಚ್ಚಾಗಿದೆ. ಅವರು ನನ್ನನ್ನು ಹಲವು ರೀತಿಯಲ್ಲಿ ಸೋಲಿಸಲು, ಬಾಯಿ ಮುಚ್ಚಿಸಲು ಪ್ರಯತ್ನಿಸಿದರು. ಆದರೆ ಅವರು ಯಶಸ್ವಿಯಾಗಲಿಲ್ಲ. ಸೆರೆಮನೆಯಲೂ ಚಿತ್ರಹಿಂಸೆ ನೀಡಿದರು. ಔಷಧಗಳನ್ನು ನಿಲ್ಲಿಸಿದರು. ಅವರಿಗೆ ಏನು ಬೇಕು ಎಂದು ನನಗೆ ತಿಳಿದಿಲ್ಲ. ಅವರು ಇದನ್ನು ಏಕೆ ಮಾಡಿದರು?,ʼ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. 

ತೂಕ ಇಳಿಕೆ: ʻಜೈಲಿಗೆ ಹೋದಾಗಿನಿಂದ ಶೇ.10 ತೂಕ ಕಳೆದುಕೊಂಡಿದ್ದೇನೆ. ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದ ನಂತರವೂ ದೇಹದ ತೂಕ ಹೆಚ್ಚಿಲ್ಲ. ಯಾವುದೋ ಗಂಭೀರ ಕಾಯಿಲೆ ಇರಬಹುದೆಂದು ವೈದ್ಯರು ಹೇಳುತ್ತಿದ್ದಾರೆ. ಹಲವು ಪರೀಕ್ಷೆಗಳನ್ನು ಮಾಡಬೇಕಿದೆ,’ ಎಂದು ಮುಖ್ಯಮಂತ್ರಿ ಹೇಳಿದರು.

ʻನನ್ನನ್ನು ಹೆಚ್ಚು ಹಿಂಸಿಸುವ ಸಾಧ್ಯತೆಯಿದೆ. ಆದರೆ, ನಾನು ತಲೆಬಾಗುವುದಿಲ್ಲ. ಎಲ್ಲೇ ಇರಲಿ, ದೆಹಲಿಯ ಕೆಲಸವನ್ನು ನಿಲ್ಲಿಸುವುದಿಲ್ಲ,ʼ ಎಂದು ಹೇಳಿದರು.

ಈ ವಾರದ ಆರಂಭದಲ್ಲಿ, ಮಧ್ಯಂತರ ಜಾಮೀನು ವಿಸ್ತರಣೆಯನ್ನು ಕೋರಿ ಅವರು ಸಲ್ಲಿಸಿದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಲು ಅವರಿಗೆ ಸ್ವಾತಂತ್ರ್ಯವಿದೆ ಎಂದು ಹೇಳಿತು.

Tags:    

Similar News