ಹೈದರಾಬಾದ್‌ನಲ್ಲಿ ಉಚಿತ ಕೋಳಿ ಮತ್ತು ಮೊಟ್ಟೆ ಮೇಳ; ಎಲ್ಲೆಡೆ ಜನಸ್ತೋಮ

70 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚು ತಾಪಮಾನದಲ್ಲಿ ಕೋಳಿ ಮತ್ತು ಮೊಟ್ಟೆ ಬೇಯಿಸಿದರೆ ಯಾವುದೇ ರೀತಿಯ ಬ್ಯಾಕ್ಟೀರಿಯಾ ಅಥವಾ ವೈರಸ್ ನಾಶವಾಗುತ್ತದೆ ಎಂದು ಇದೇ ವೇಳೆ ತಿಳಿ ಹೇಳಲಾಯಿತು.;

Update: 2025-02-23 05:47 GMT
ಚಿಕನ್​ ಮೇಳದಲ್ಲಿ ಜನಸ್ತೋಮ.

ಕೋಳಿ ಮತ್ತು ಮೊಟ್ಟೆ ತಿನ್ನುವುದರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ಉದ್ದೇಶದಿಂದ ವೆಂಕೋಬ್​​ ಚಿಕನ್ ಮತ್ತು ಎನ್‌ಇಸಿಸಿ (NECC) ಶುಕ್ರವಾರ ಹೈದರಾಬಾದ್​ನಲ್ಲಿ ಕೋಳಿ ಮತ್ತು ಮೊಟ್ಟೆ ಮೇಳವನ್ನು ಆಯೋಜಿಸಿತ್ತು. ಈ ಮೇಳಗಳಲ್ಲಿ ಕೋಳಿ ಮತ್ತು ಮೊಟ್ಟೆಯಿಂದ ತಯಾರಿಸಿದ ಉಚಿತ ಭೋಜನ ವಿತರಿಸಲಾಗಿತ್ತು. ಅದನ್ನು ತಿನ್ನಲೆಂದು ಸಾವಿರಾರು ಜನರು ಜಯಾಯಿಸಿದ್ದರು.

ಆಯೋಜಕರು ಕೋಳಿಯಿಂದ ರೋಗಗಳು ಹರಡುತ್ತವೆ ಎಂಬ ಊಹಾಪೋಹಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಮೇಳ ಆಯೋಜಸಿದ್ದರು. 70 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚು ತಾಪಮಾನದಲ್ಲಿ ಕೋಳಿ ಮತ್ತು ಮೊಟ್ಟೆ ಬೇಯಿಸಿದರೆ ಯಾವುದೇ ರೀತಿಯ ಬ್ಯಾಕ್ಟೀರಿಯಾ ಅಥವಾ ವೈರಸ್ ನಾಶವಾಗುತ್ತದೆ ಎಂದು ಇದೇ ವೇಳೆ ತಿಳಿ ಹೇಳಲಾಯಿತು. ಭಾರತೀಯ ಶೈಲಿಯ ಅಡುಗೆಗಳನ್ನು ಸಾಮಾನ್ಯವಾಗಿ 100 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಮಾಡಲಾಗುತ್ತದೆ. ಆದ್ದರಿಂದ, ಭಾರತೀಯ ಆಹಾರ ಪದ್ಧತಿಯಲ್ಲಿ ಕೋಳಿ ಮತ್ತು ಮೊಟ್ಟೆಗಳನ್ನು ತಿನ್ನುವುದು ಸಂಪೂರ್ಣ ಸುರಕ್ಷಿತ ಎಂದು ಮೇಳದಲ್ಲಿ ಅರಿವು ಮೂಡಿಸಲಾಯಿತು. 


Full View


ನೂರಾರು ಉತ್ಸಾಹಿ ಜನರು ಕೋಳಿ ಮತ್ತು ಮೊಟ್ಟೆ ಮೇಳದಲ್ಲಿ ಪಾಲ್ಗೊಂಡು ವಿವಿಧ ರುಚಿಕರ ಖಾದ್ಯಗಳನ್ನು ಸವಿದರು. ಆಯೋಜಕರು ''ಕೋಳಿ ಮತ್ತು ಮೊಟ್ಟೆಗಳು ಹೆಚ್ಚು ಪ್ರೋಟೀನ್ ದೇಹಕ್ಕೆ ನೀಡುತ್ತದೆ. ಇವು ಕಡಿಮೆ ಬೆಲೆಗೆ ಲಭ್ಯವಿರುವ ಆಹಾರಗಳು ಎಂದು ಹೇಳಿದರು. ಕೋಳಿ ಮತ್ತು ಮೊಟ್ಟೆ ಸೇವನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ತಪ್ಪು ಪ್ರಚಾರವನ್ನು ಖಂಡಿಸಿದರು. ಜನರಿಗೆ ನಿಜವಾದ ಮಾಹಿತಿ ನೀಡಲು ಈ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. 

Tags:    

Similar News