Election 2024: ಕಡಪದಲ್ಲಿ ಶರ್ಮಿಳಾ ವಿರುದ್ಧ ಸೋದರ ಸಂಬಂಧಿ ಕಣಕ್ಕೆ

Update: 2024-04-02 12:06 GMT

ಅಮರಾವತಿ (ಆಂಧ್ರಪ್ರದೇಶ), ಎ.2 - ಕಡಪ ಲೋಕಸಭೆ ಕ್ಷೇತ್ರದಲ್ಲಿ ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥೆ ವೈ.ಎಸ್. ಶರ್ಮಿಳಾ ಅವರ ವಿರುದ್ಧ ಸೋದರ ಸಂಬಂಧಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಸಂಸದ ವೈ.ಎಸ್.ಅವಿನಾಶ್ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿದೆ. ಮಾಜಿ ಕೇಂದ್ರ ಸಚಿವರಾದ ಎಂ.ಎಂ. ಪಲ್ಲಮ ರಾಜು ಅವರು ಕಾಕಿನಾಡ ಮತ್ತು ಜೆ.ಡಿ. ಸೀಲಂ ಅವರು ಬಾಪಟ್ಲ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 

ಇಡುಪುಲಪಾಯದಲ್ಲಿರುವ ತಂದೆಯ ಸಮಾಧಿ ಬಳಿ ಪ್ರಾರ್ಥನೆ ಸಲ್ಲಿಸಿದ ನಂತರ ಶರ್ಮಿಳಾ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದರು. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ, ಗಿಡುಗು ರುದ್ರರಾಜು ಅವರು ರಾಜಮಂಡ್ರಿ ಮತ್ತು ಕರ್ನೂಲ್‌ನಿಂದ ಪಿ.ಜಿ. ರಾಮಪುಲ್ಲಯ್ಯ ಯಾದವ್ ಸ್ಪರ್ಧಿಸುವರು. 

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 114 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಕಾಂಗ್ರೆಸ್ ಮತ್ತು ಸಿಪಿಐ (ಎಂ) ಇಂಡಿಯ ಒಕ್ಕೂಟದ ಪಾಲುದಾರರಾಗಿದ್ದಾರೆ. ಆಂಧ್ರಪ್ರದೇಶದ 175 ಸದಸ್ಯ ಬಲದ ವಿಧಾನಸಭೆ ಮತ್ತು 25 ಲೋಕಸಭೆ ಸ್ಥಾನಗಳಿಗೆ ಮೇ 13 ರಂದು ಚುನಾವಣೆ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

Tags:    

Similar News