ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ ಭೂಕಂಪ: ಬೆಚ್ಚಿಬಿದ್ದ ನಿವಾಸಿಗಳು!
ಪ್ರಾಥಮಿಕ ಮಾಹಿತಿ ಪ್ರಕಾರ, ಈ ಭೂಕಂಪನದ ಕೇಂದ್ರ ಹರಿಯಾಣದ ರೋಹ್ಟಕ್ ಆಗಿದ್ದು, ಅಲ್ಲಿ 4.1 ತೀವ್ರತೆಯ ಭೂಕಂಪ ದಾಖಲಾಗಿದೆ.;
By : The Federal
Update: 2025-07-10 04:18 GMT
ಇಂದು ಬೆಳಿಗ್ಗೆ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ರಾಷ್ಟ್ರ ರಾಜಧಾನಿ ಪ್ರದೇಶ (NCR)ದಲ್ಲಿ ಭೂಕಂಪ ಸಂಭವಿಸಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಬೆಳಗ್ಗೆ 9.04 ರ ಸುಮಾರಿಗೆ ಕಂಪನಗಳುಂಟಾಗಿದ್ದು, ಸುಮಾರು ಒಂದು ನಿಮಿಷದ ಕಾಲ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ.
ಭೂಕಂಪದ ತೀವ್ರತೆ ಲಘುವಾಗಿದ್ದರೂ, ಅನಿರೀಕ್ಷಿತ ಕಂಪನಗಳಿಂದಾಗಿ ಭಯಗೊಂಡ ಜನರು ತಮ್ಮ ಮನೆಗಳಿಂದ ಹೊರಕ್ಕೆ ಸುರಕ್ಷಿತ ಸ್ಥಳಗಳಿಗೆ ಓಡಿ ಬಂದಿದ್ದಾರೆ. ಸದ್ಯಕ್ಕೆ ಯಾವುದೇ ಸಾವು-ನೋವು ಅಥವಾ ದೊಡ್ಡ ಪ್ರಮಾಣದ ಹಾನಿಯ ಬಗ್ಗೆ ವರದಿಯಾಗಿಲ್ಲ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಈ ಭೂಕಂಪನದ ಕೇಂದ್ರ ಹರಿಯಾಣದ ರೋಹ್ಟಕ್ ಆಗಿದ್ದು, ಅಲ್ಲಿ 4.1 ತೀವ್ರತೆಯ ಭೂಕಂಪ ದಾಖಲಾಗಿದೆ. ಇದರ ಪರಿಣಾಮ ದೆಹಲಿಯ ಹಲವು ಭಾಗಗಳಲ್ಲೂ ಸ್ಪಷ್ಟವಾಗಿ ಅನುಭವಕ್ಕೆ ಬಂದಿದೆ.