ಭೀಮಾ ತೀರದಲ್ಲಿ ಮತ್ತೊಂದು ಕೊಲೆ: ಬಾಗಪ್ಪ ಹರಿಜನನ ಶಿಷ್ಯ ಸುಶೀಲ್ ಕಾಳೆ ಹತ್ಯೆ

ಸುಶೀಲ್ ಕಾಳೆ ನಿನ್ನೆ ವಿಜಯಪುರದ ಎಸ್.ಎಸ್. ರಸ್ತೆ ಬಳಿಯ ಅಮರವರ್ಷಿಣಿ ಸಹಕಾರಿ ಬ್ಯಾಂಕ್‌ಗೆ ಬಂದಿದ್ದಾಗ, ಆರೋಪಿಗಳು ಆತನ ಮೇಲೆ ಗುಂಡು ಹಾರಿಸಿ, ನಂತರ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿದ್ದಾರೆ.;

Update: 2025-07-16 05:10 GMT

ಕೊಲೆಯಾದ ಸುಶೀಲ್ ಕಾಳೆ

ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದ್ದು, ಈ ಬಾರಿ ಗ್ಯಾಂಗ್‌ಸ್ಟರ್ ಬಾಗಪ್ಪ ಹರಿಜನನ ಹಳೆಯ ಶಿಷ್ಯ ಸುಶೀಲ್ ಕಾಳೆ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಘಟನೆ ವಿಜಯಪುರದಲ್ಲಿ ನಡೆದಿದ್ದು, ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಸುಶೀಲ್ ಕಾಳೆ ನಿನ್ನೆ ವಿಜಯಪುರದ ಎಸ್.ಎಸ್. ರಸ್ತೆ ಬಳಿಯ ಅಮರವರ್ಷಿಣಿ ಸಹಕಾರಿ ಬ್ಯಾಂಕ್‌ಗೆ ಬಂದಿದ್ದಾಗ, ಆರೋಪಿಗಳು ಆತನ ಮೇಲೆ ಗುಂಡು ಹಾರಿಸಿ, ನಂತರ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿದ್ದಾರೆ. ಈ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಕೂಡಲೇ ಪೊಲೀಸರು ತನಿಖೆ ಆರಂಭಿಸಿದ್ದರು. ತಡರಾತ್ರಿಯಿಂದ ಕಾರ್ಯಾಚರಣೆಗೆ ಇಳಿದ ಪೊಲೀಸರು, ಇಂದು ಬೆಳಗ್ಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಪೊಲೀಸರ ಮೇಲೆ ದಾಳಿಗೆ ಯತ್ನಿಸಿದಾಗ ಸಿಪಿಐ ಪ್ರದೀಪ್ ತಳಕೇರಿ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಈ ಗುಂಡೇಟಿನಿಂದ ಆರೋಪಿಗಳಾದ ಆಕಾಶ ಕಲ್ಲವ್ವಗೋಳ ಮತ್ತು ಸುದೀಪ್ ಅಲಿಯಾಸ್ ಸುಭಾಷ್ ಅವರ ಕಾಲುಗಳಿಗೆ ಗಾಯಗಳಾಗಿವೆ. ಘಟನಾ ಸ್ಥಳದಲ್ಲಿ ಆರೋಪಿಗಳ ಕಂಟ್ರಿ ಪಿಸ್ತೂಲ್ ಮತ್ತು ನಂಬರ್ ಪ್ಲೇಟ್ ಇಲ್ಲದ ಸ್ಪ್ಲೆಂಡರ್ ಬೈಕ್ ಪತ್ತೆಯಾಗಿವೆ. ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ ಆರೋಪಿಗಳು ಪೊಲೀಸರ ಮೇಲೆ ಫೈರಿಂಗ್‌ಗೆ ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿದಾಳಿ ನಡೆಸಿ ಗುಂಡು ಹಾರಿಸಿದ್ದಾರೆ. ಬಂಧಿತ ಆರೋಪಿ ಆಕಾಶ ಕಲ್ಲವ್ವಗೋಳನ ವಿರುದ್ಧ ಈಗಾಗಲೇ ಏಳು ಪ್ರಕರಣಗಳು ದಾಖಲಾಗಿದ್ದವು. ಫೈರಿಂಗ್ ನಡೆದ ಇಟ್ಟಂಗಿಹಾಳದ ಘಟನಾ ಸ್ಥಳಕ್ಕೆ ಎಸ್.ಪಿ. ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:    

Similar News