ಸಮುದಾಯ ರೇಡಿಯೋ ಕೇಂದ್ರದಿಂದ ಬಡವರಿಗೆ ಶಿಕ್ಷಣ

ವಿಶ್ವಾಸ್ ರೇಡಿಯೋ 90.8 ಮನೆಯಲ್ಲಿ ಇಂಟರ್ನೆಟ್ ಇಲ್ಲದೆ ಇರುವ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೇರವಾಗಿ ತಲುಪಿಸುವ ಮೂಲಕ ಸಹಾಯ ಮಾಡುತ್ತಿದೆ.

Update: 2024-02-05 06:30 GMT

ಸಮುದಾಯ ರೇಡಿಯೋ ಕೇಂದ್ರದಿಂದ ಬಡವರಿಗೆ ಶಿಕ್ಷಣ


-ದ ಫೆಡರಲ್

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಮುದಾಯ ರೇಡಿಯೊ ಕೇಂದ್ರವು ಸ್ಮಾರ್ಟ್ಫೋನ್ ಇಲ್ಲದ ಅನೇಕ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ʻರೇಡಿಯೋ ವಿಶ್ವಾಸ್ 90.8ʼ ಈ ಪ್ರದೇಶದ 60,000 ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿ ದೆ.

ಪುಣೆ ಮೂಲದ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ನಾಲೆಡ್ಜ್, ಟ್ರೈನಿಂಗ್ ಆಂಡ್ ರಿಸರ್ಚ್ ನಡೆಸುವ ಸಮುದಾಯ ರೇಡಿಯೊದ ಪ್ರಾಥಮಿಕ ಉದ್ದೇಶ ಸ್ಮಾರ್ಟ್ಫೋನ್ ಹೊಂದಿಲ್ಲದ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡುವುದು. 1962ರಲ್ಲಿ ವಿನಾಯಕ್ ವಿಶ್ವನಾಥ್ ಅಲಿಯಾಸ್ ಅಪ್ಪಾ ಪೆಂಡ್ಸೆ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ʻಬೌದ್ಧಿಕ ಸಾಮರ್ಥ್ಯ ಇರುವವರಿಗೆ ಶೈಕ್ಷಣಿಕ ಪ್ರಯೋಗʼ ಎಂಬ ಹೆಸರು ಇರುವ ಈ ಸಂಸ್ಥೆಯುನಿಗ್ದಿ,ಸೋಲಾಪುರ ಮತ್ತು ಹರಲಿಯಲ್ಲಿ ಕೇಂದ್ರಗಳು, ಸಾಲುಂಬೆ, ಶಿವಪುರ ಮತ್ತು ವೆಲ್ಹೆಯಲ್ಲಿ ಉಪ ಕೇಂದ್ರಗಳು ಹಾಗೂ ಅಂಬಾಜೋಗೈ, ಡೊಂಬಿವಲಿ ಮತ್ತು ಬೊರಿವಲಿಯಲ್ಲಿ ವಿಸ್ತರಣೆ ಕೇಂದ್ರಗಳನ್ನು ಹೊಂದಿದೆ.

ವಿದ್ಯಾರ್ಥಿಗಳಿಗಾಗಿ ಪ್ರಸಾರ: ನಾಸಿಕ್ ಜಿಲ್ಲೆಯಲ್ಲಿ ಜಿಲ್ಲಾ ಪರಿಷತ್ ಶಾಲೆಗಳು ಮತ್ತು ಪುರಸಭೆ ಶಾಲೆಗಳು 3 ರಿಂದ 10ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡುತ್ತವೆ. ಈ ಶಾಲೆಗಳ ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯದಲ್ಲಿ ರೇಡಿಯೋ ಪ್ರಸಾರಗಳ ಮೂಲಕ ಕಲಿಸಲಾಗು ತ್ತದೆ. ಆಕಾಶವಾಣಿ ಕೇಂದ್ರದ ನಿರ್ದೇಶಕ ಎಚ್.ವಿ. ಕುಲಕರ್ಣಿ ಪ್ರಕಾರ, ದಿನದ 14 ಗಂಟೆಗಳ ಕಾಲ ಪಾಠಗಳನ್ನು ಹಿಂದಿ, ಇಂಗ್ಲಿಷ್, ಮರಾಠಿ ಮತ್ತು ಸಂಸ್ಕೃತದಲ್ಲಿ ಪ್ರಸಾರ ಮಾಡಲಾಗುತ್ತದೆ. ʻಸರ್ಕಾರ ನಿಗದಿಗೊಳಿಸಿದ ಪಠ್ಯಕ್ರಮದಲ್ಲಿನ ಒಂದೇ ಒಂದು ಪಾಠವನ್ನುಬಿಡದೆ ಪ್ರಸಾರ ಮಾಡಲಾಗಿದೆ. ರೇಡಿಯೋ ಇಲ್ಲದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಯುಎಸ್ಬಿ, ಬ್ಲೂಟೂತ್ ಮತ್ತು ಹೈಎಂಡ್ ಸ್ಪೀಕರ್ ಸೇರಿದಂತೆ 451 ಸಾಧನಗಳನ್ನು ವಿತರಿಸಲಾಗಿದೆʼ ಎಂದು ಕುಲಕರ್ಣಿ ಹೇಳಿದರು. ಸ್ಟುಡಿಯೋದಲ್ಲಿ ಸುಮಾರು 150 ಶಿಕ್ಷಕರಿಂದ ಪಾಠಗಳನ್ನು ರೆಕಾರ್ಡ್ ಮಾಡಿ, ಆನಂತರ ಪ್ರಸಾರ ಮಾಡಲಾಗುತ್ತದೆ. ಮನೆಗಳಲ್ಲಿ ಟಿವಿ ಇಲ್ಲದ ವಿದ್ಯಾರ್ಥಿಗಳಿಗೆ ದಿನದ ಯಾವುದೇ ಸಮಯದಲ್ಲಿ ಪಾಠ ಕೇಳಲು ಅನುಕೂಲಕರವಾಗಿದೆ.

ವೇಳಾಪಟ್ಟಿ ಪ್ರಕಾರ ಪಾಠ:

ಮನೆಗಳಿಂದ ಪಾಠ ಕೇಳುವ ಮಕ್ಕಳಿಗೆ ಸಾಮಾನ್ಯ ಶಾಲೆಗಳಲ್ಲಿ ಇರುವಂತೆ ವೇಳಾಪಟ್ಟಿಯನ್ನು ನೀಡಲಾಗುತ್ತದೆ. ಪ್ರತಿದಿನ ಪಾಠ ಕಲಿಸ ಲಾಗುತ್ತದೆ ಮತ್ತು ಮಕ್ಕಳು ಟಿಪ್ಪಣಿ ತೆಗೆದುಕೊಳ್ಳುತ್ತಾರೆ. ಡಿಜಿಟಲ್ ಸಂಪನ್ಮೂಲಗಳಿಲ್ಲದ ಮಕ್ಕಳಿಗೆ ಇದು ಉಪಯುಕ್ತವಾಗಿದೆ. ʻ ಸ್ಟುಡಿಯೋದಲ್ಲಿ ಉಪನ್ಯಾಸಗಳನ್ನು ರೆಕಾರ್ಡ್ ಮಾಡಿ, 150 ಶಿಕ್ಷಕರ ಸಹಾಯದಿಂದ ʻಎಲ್ಲರಿಗೂ ಶಿಕ್ಷಣʼ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಆನಂತರ ಪೂರ್ವನಿರ್ಧರಿತ ವೇಳಾಪಟ್ಟಿ ಪ್ರಕಾರ ಉಪನ್ಯಾಸಗಳನ್ನು ಪ್ರಸಾರ ಮಾಡಲಾಯಿತುʼ ಎಂದು ಕುಲಕರ್ಣಿ ಹೇಳಿದರು. ಜಿಲ್ಲಾ ಪರಿಷತ್ ಶಾಲೆಗಳ ಶಿಕ್ಷಕರಲ್ಲಿ ಅನೇಕರು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದವರು. ಆನಂತರ, ಹಳ್ಳಿಗಳನ್ನು ಮತ್ತು ಕೊಳೆಗೇರಿಗಳನ್ನು ತಲುಪಲಾಯಿತು. ವಿಶ್ವಾಸ್ ರೇಡಿಯೋ ಪಾಠಗಳನ್ನು ಯುಟ್ಯೂಬ್ನಲ್ಲಿ ಅಪ್ಲೋಡ್ ಮಾಡಲು ಪ್ರಾರಂಭಿಸಿತು. ಇದರಿಂದ ಶಾಲೆಗಳು ಮುಚ್ಚಿದ್ದರೂ ವಿದ್ಯಾರ್ಥಿಗಳು ಪಾಠವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಎನ್ನುತ್ತಾರೆ ರೇಡಿಯೊ ನಿರ್ವಾಹಕರು.

ಪುರಸ್ಕಾರ:

2023ರ ಜುಲೈನಲ್ಲಿ ನವದೆಹಲಿಯಲ್ಲಿ ನಡೆದ ಪ್ರಾದೇಶಿಕ ರೇಡಿಯೊ ಸಮ್ಮೇಳನದಲ್ಲಿ ವಿಶ್ವಾಸ್ ರೇಡಿಯೊ ಎರಡು ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರವಾಯಿತು. ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ವಿಶ್ವಾಸ್ ರೇಡಿಯೊದ ಹರಿ ಕುಲಕರ್ಣಿ ಮತ್ತು ಸಂಯೋಜಕಿ ರಿಚಿತಾ ಠಾಕೂರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. 

2021 ರಲ್ಲಿ ರೇಡಿಯೋ ಕೇಂದ್ರ 'ಸುಸ್ಥಿರ ಮಾದರಿ ಪುರಸ್ಕಾರʼದಲ್ಲಿ ಮೊದಲ ಬಹುಮಾನ ಮತ್ತು ಕೋವಿಡ್ ಪಿಡುಗಿನ ಸಂದರ್ಭದಲ್ಲಿ 10 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಿದ್ಡಕ್ಕೆ 'ಶಿಕ್ಷಣದಲ್ಲಿ ಶ್ರೇಷ್ಠತೆ' ವಿಭಾಗದಲ್ಲಿ ಎರಡನೇ ಬಹುಮಾನ ಪಡೆದುಕೊಂಡಿದೆ.


(ಫೋಟೋ: ಸ್ವಯಂಸೇವಕರು ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಬಗ್ಗೆ ಅರಿವು ಮೂಡಿಸುತ್ತಿರುವುದು(ಪಿಐಬಿ)

Similar News