Wayanad Landslide LIVE | ಇದು ರಾಷ್ಟ್ರೀಯ ವಿಪತ್ತು, ಸರ್ಕಾರ ಏನು ಮಾಡುತ್ತದೆ ನೋಡೋಣ: ರಾಹುಲ್

ಸಿಎಂ ಪಿಣರಾಯಿ ವಿಜಯನ್ ಸರ್ವಪಕ್ಷ ಸಭೆ: ಮುಂಡಕ್ಕೆ, ಚೂರಲ್‌ಮಲಾ, ಅಟ್ಟಮಲ ಮತ್ತು ನೂಲ್‌ವುಳದ ಭೂಕುಸಿತ ಪೀಡಿತ ಪ್ರದೇಶಗಳಿಂದ ಇದುವರೆಗೆ 1,500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.;

Update: 2024-08-01 05:04 GMT
ಬದುಕುಳಿದವರಿಗೆ ಸಲ್ಲಬೇಕಾದ್ದು ಸಿಗುವಂತೆ ಮಾಡಲು ತಮ್ಮ ಪಕ್ಷ ಪ್ರಯತ್ನಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಫೋಟೋ: ANI/X

ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಮತ್ತು ವಿಪತ್ತಿನಲ್ಲಿ ಗಾಯಗೊಂಡ ಮತ್ತು ಮನೆ ಕಳೆದುಕೊಂಡ ಸಂತ್ರಸ್ತರನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕ ಮತ್ತು ಮಾಜಿ ವಯನಾಡ್ ಸಂಸದ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡ್‌ಗೆ ಬಂದಿದ್ದಾರೆ.

ಗುರುವಾರ (ಆಗಸ್ಟ್ 1) ಸರ್ವಪಕ್ಷ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ʻʻಭೂಕುಸಿತ ಪೀಡಿತ ಮುಂಡಕ್ಕೆ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಇನ್ನೂ ಕೆಲವು ದಿನಗಳು ಬೇಕಾಗಬಹುದು ಮತ್ತು ರಕ್ಷಣಾ ಕಾರ್ಯಗಳನ್ನು ಸಂಘಟಿಸಲು ನಾಲ್ವರು ಸಚಿವರನ್ನು ಒಳಗೊಂಡ ಸಂಪುಟ ಉಪಸಮಿತಿಯನ್ನು ನೇಮಿಸಲಾಗಿದೆ.

ನಾಲ್ವರು ಸಚಿವರು-ಕಂದಾಯ ಸಚಿವ ಕೆ.ರಾಜನ್, ಅರಣ್ಯ ಸಚಿವ ಎ.ಕೆ.ಸಸೀಂದ್ರನ್, ಪಿಡಬ್ಲ್ಯೂಡಿ ಮತ್ತು ಪ್ರವಾಸೋದ್ಯಮ ಸಚಿವ ಪಿಎ ಮೊಹಮ್ಮದ್ ರಿಯಾಸ್ ಮತ್ತು ಎಸ್‌ಸಿ/ಎಸ್‌ಟಿ ಇಲಾಖೆ ಸಚಿವ ಒಆರ್ ಕೇಲು ಅವರು ಜಿಲ್ಲೆಯಲ್ಲಿ ಶಿಬಿರ ನಡೆಸಲಿದ್ದಾರೆ.

ʻʻಈ ರಕ್ಷಣಾ ಕಾರ್ಯ ಅಲ್ಪಾವಧಿಯಲ್ಲಿ ಮುಗಿಯುವಂತದ್ದಲ್ಲ. ಸದ್ಯಕ್ಕೆ 12 ಸಚಿವರು ವಯನಾಡಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಇದೀಗ ನಾಲ್ವರು ಸಚಿವರು ಇಲ್ಲಿಯೇ ಮೊಕ್ಕಾಂ ಹೂಡಲು ಸರ್ವಪಕ್ಷ ಸಭೆ ನಿರ್ಧರಿಸಿದೆ ಎಂದು ವಿಜಯನ್ ಹೇಳಿದರು.

ಭಾರೀ ಪ್ರಮಾಣದಲ್ಲಿ ಮಣ್ಣಿನ ಶೇಖರಣೆಯಿಂದಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಆರಂಭದಲ್ಲಿ ಕಷ್ಟವಾಗಿದ್ದರೂ, ಈಗ ಸೇನೆಯು ಬೈಲಿ ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸುತ್ತಿರುವುದರಿಂದ ಕಾರ್ಯಾಚರಣೆಯು ಸುಲಭವಾಗುತ್ತದೆ ಎಂದರು.

ಭೂಕುಸಿತ ಪೀಡಿತ ಪ್ರದೇಶಗಳನ್ನು ಸಂಪರ್ಕಿಸಲು ಬೈಲಿ ಸೇತುವೆಯ ನಿರ್ಮಾಣ ಮಾಡಲಾಗಿದೆ. ಇದರಿಂದ ಸಿಕ್ಕಿಹಾಕಿಕೊಂಡಿರುವ ಸಾಕಷ್ಟು ಜನರನ್ನು ರಕ್ಷಿಸಬಹುದಾಗಿದೆ. ಜೊತೆಗೆ ಸ್ನಿಫರ್ ಡಾಗ್‌ಗಳ ನಿಯೋಜನೆ ಮತ್ತು ಕೇಂದ್ರ ಮತ್ತು ರಾಜ್ಯ ರಕ್ಷಣಾ ತಂಡಗಳಿಂದ 1,000 ಕ್ಕೂ ಹೆಚ್ಚು ರಕ್ಷಕರು ಬೃಹತ್‌ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ, ಇದು ಅತಿದೊಡ್ಡ ಕಾರ್ಯಾಚರಣೆಯಾಗಿದೆ.

ಮಂಗಳವಾರ ಮುಂಜಾನೆ ಮುಂಡಕ್ಕೆ, ಚೂರಲ್ಮಲಾ, ಅಟ್ಟಮಲ ಮತ್ತು ನೂಲುಳ ಗ್ರಾಮಗಳಲ್ಲಿ ಧಾರಾಕಾರ ಮಳೆಯಿಂದಾಗಿ ಭಾರೀ ಭೂಕುಸಿತಗಳು ಸಂಭವಿಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಸಾವನ್ನಪ್ಪಿದ್ದಾರೆ.

ಹೆಚ್ಚಿನ ಲೈವ್ ಅಪ್‌ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: https://thefederal.com/category/live/wayanad-landslides-live-bailey-bridge-may-be-built-by-10-am-rahul-priyanka-leave-for-kerala-136458?infinitescroll=1

Live Updates
2024-08-01 13:31 GMT

ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತವನ್ನು "ಘೋರ ವಿಪತ್ತು ಎಂದು ಬಣ್ಣಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಘಟನೆಯ ಬಗ್ಗೆ, ತೀವು ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

ಇಬ್ಬರು ತೃಣಮೂಲ ಕಾಂಗ್ರೆಸ್‌ ಸಂಸದರಾದ ಸಾಕೇತ್ ಗೋಖಲೆ ಮತ್ತು ಸುಶ್ಮಿತಾ ದೇವ್ ಅವರು ಸಂತ್ರಸ್ತ ಕುಟುಂಬಗಳಿಗೆ ನೆರವು ಮತ್ತು ಬೆಂಬಲವನ್ನು ನೀಡಲು ಕೇರಳದ ಪೀಡಿತ ಪ್ರದೇಶಗಳಿಗೆ ತೆರಳಲಿದ್ದಾರೆ ಎಂದು ಬ್ಯಾನರ್ಜಿ ಹೇಳಿದರು.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ʻʻಕೇರಳದ ವಯನಾಡ್ ಭೂಕುಸಿತದ ಸುದ್ದಿಯಿಂದ ನಾವು ತುಂಬಾ ವಿಚಲಿತರಾಗಿದ್ದೇವೆ. ಇದು ನಿಜವಾಗಿಯೂ ಗಂಭೀರ ದುರಂತವಾಗಿದೆ. ಮಾನವೀಯ ಆಧಾರದ ಮೇಲೆ ಪೀಡಿತ ಪುದೇಶಗಳಿಗೆ ಭೇಟಿ ನೀಡಲು ನಾವು ನಮ್ಮ ಇಬ್ಬರು ಸಂಸದರಾದ ಸಾಕೇತ್ ಗೋಖಲೆ ಮತ್ತು ಸುಶ್ಮಿತಾ ದೇವ್ ಅವರ ತಂಡವನ್ನು ಕಳುಹಿಸುತ್ತಿದ್ದೇವೆ. 

ಸಂಸದರು ಎರಡು ದಿನಗಳ ಕಾಲ ಅಲ್ಲೇ ಉಳಿದು ನೊಂದ ಕುಟುಂಬಗಳ ಶ್ರೇಯೋಭಿವೃದ್ಧಿಗೆ ಸಂಪೂರ್ಣ ನೆರವು ಮತ್ತು ಸಹಕಾರ ನೀಡಲಿದ್ದಾರೆ ಎಂದರು.

2024-08-01 13:27 GMT

ಸಾಧ್ಯವಾದಷ್ಟು ಸಾಂತ್ವನ ಮತ್ತು ಬೆಂಬಲ ನೀಡಲು ನಾವಿದ್ದೇವೆ: ಪ್ರಿಯಾಂಕಾ

2024-08-01 13:26 GMT

2024-08-01 13:25 GMT

ಇದು ರಾಷ್ಟ್ರೀಯ ವಿಪತ್ತು, ಸರ್ಕಾರ ಏನು ಹೇಳುತ್ತದೆ ಎಂದು ನೋಡೋಣ: ರಾಹುಲ್

2024-08-01 13:25 GMT

ಸದ್ಯ ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ವಯನಾಡಿನ ಜನರ ಬಗ್ಗೆ ಆಸಕ್ತಿ ಇದೆ: ರಾಹುಲ್

2024-08-01 12:49 GMT

ಕೇರಳಕ್ಕೆ 1 ಕೋಟಿ ರೂಪಾಯಿ, ಪರಿಹಾರ ಸಾಮಗ್ರಿ ಘೋಷಿಸಿದ ಎಐಎಡಿಎಂಕೆ

ತಮಿಳುನಾಡಿನ ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ ಬುಧವಾರ ಕೇರಳಕ್ಕೆ 1 ಕೋಟಿ ರೂ. ಘೋಷಿಸಿದೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು, ಭಾರೀ ಮಳೆ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಜನರನ್ನು ರಕ್ಷಿಸಲು ತಮ್ಮ ಪಕ್ಷವು ಕೇರಳಕ್ಕೆ 1 ಕೋಟಿ ರೂ. ಮತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಿದೆ ಎಂದು ಹೇಳಿದರು.

ಪಳನಿಸ್ವಾಮಿ ಅವರು ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ದುಃಖಿತರಿಗೆ ಸಂತಾಪ ಸೂಚಿಸಿದ್ದಾರೆ.

2024-08-01 12:46 GMT

ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಮತ್ತು ವಿಪತ್ತಿನಲ್ಲಿ ಗಾಯಗೊಂಡ ಮತ್ತು ಮನೆ ಕಳೆದುಕೊಂಡ ಸಂತ್ರಸ್ತರನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕ ಮತ್ತು ಮಾಜಿ ವಯನಾಡ್ ಸಂಸದ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡ್‌ಗೆ ಬಂದಿದ್ದಾರೆ.

ಗುರುವಾರ (ಆಗಸ್ಟ್ 1) ಸರ್ವಪಕ್ಷ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ʻʻಭೂಕುಸಿತ ಪೀಡಿತ ಮುಂಡಕ್ಕೆ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಇನ್ನೂ ಕೆಲವು ದಿನಗಳು ಬೇಕಾಗಬಹುದು ಮತ್ತು ರಕ್ಷಣಾ ಕಾರ್ಯಗಳನ್ನು ಸಂಘಟಿಸಲು ನಾಲ್ವರು ಸಚಿವರನ್ನು ಒಳಗೊಂಡ ಸಂಪುಟ ಉಪಸಮಿತಿಯನ್ನು ನೇಮಿಸಲಾಗಿದೆ.

ನಾಲ್ವರು ಸಚಿವರು-ಕಂದಾಯ ಸಚಿವ ಕೆ.ರಾಜನ್, ಅರಣ್ಯ ಸಚಿವ ಎ.ಕೆ.ಸಸೀಂದ್ರನ್, ಪಿಡಬ್ಲ್ಯೂಡಿ ಮತ್ತು ಪ್ರವಾಸೋದ್ಯಮ ಸಚಿವ ಪಿಎ ಮೊಹಮ್ಮದ್ ರಿಯಾಸ್ ಮತ್ತು ಎಸ್‌ಸಿ/ಎಸ್‌ಟಿ ಇಲಾಖೆ ಸಚಿವ ಒಆರ್ ಕೇಲು ಅವರು ಜಿಲ್ಲೆಯಲ್ಲಿ ಶಿಬಿರ ನಡೆಸಲಿದ್ದಾರೆ.

ʻʻಈ ರಕ್ಷಣಾ ಕಾರ್ಯ ಅಲ್ಪಾವಧಿಯಲ್ಲಿ ಮುಗಿಯುವಂತದ್ದಲ್ಲ. ಸದ್ಯಕ್ಕೆ 12 ಸಚಿವರು ವಯನಾಡಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಇದೀಗ ನಾಲ್ವರು ಸಚಿವರು ಇಲ್ಲಿಯೇ ಮೊಕ್ಕಾಂ ಹೂಡಲು ಸರ್ವಪಕ್ಷ ಸಭೆ ನಿರ್ಧರಿಸಿದೆ ಎಂದು ವಿಜಯನ್ ಹೇಳಿದರು.

ಭಾರೀ ಪ್ರಮಾಣದಲ್ಲಿ ಮಣ್ಣಿನ ಶೇಖರಣೆಯಿಂದಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಆರಂಭದಲ್ಲಿ ಕಷ್ಟವಾಗಿದ್ದರೂ, ಈಗ ಸೇನೆಯು ಬೈಲಿ ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸುತ್ತಿರುವುದರಿಂದ ಕಾರ್ಯಾಚರಣೆಯು ಸುಲಭವಾಗುತ್ತದೆ ಎಂದರು.

ಭೂಕುಸಿತ ಪೀಡಿತ ಪ್ರದೇಶಗಳನ್ನು ಸಂಪರ್ಕಿಸಲು ಬೈಲಿ ಸೇತುವೆಯ ನಿರ್ಮಾಣ ಮಾಡಲಾಗಿದೆ. ಇದರಿಂದ ಸಿಕ್ಕಿಹಾಕಿಕೊಂಡಿರುವ ಸಾಕಷ್ಟು ಜನರನ್ನು ರಕ್ಷಿಸಬಹುದಾಗಿದೆ. ಜೊತೆಗೆ ಸ್ನಿಫರ್ ಡಾಗ್‌ಗಳ ನಿಯೋಜನೆ ಮತ್ತು ಕೇಂದ್ರ ಮತ್ತು ರಾಜ್ಯ ರಕ್ಷಣಾ ತಂಡಗಳಿಂದ 1,000 ಕ್ಕೂ ಹೆಚ್ಚು ರಕ್ಷಕರು ಬೃಹತ್‌ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ, ಇದು ಅತಿದೊಡ್ಡ ಕಾರ್ಯಾಚರಣೆಯಾಗಿದೆ.

ಮಂಗಳವಾರ ಮುಂಜಾನೆ ಮುಂಡಕ್ಕೆ, ಚೂರಲ್ಮಲಾ, ಅಟ್ಟಮಲ ಮತ್ತು ನೂಲುಳ ಗ್ರಾಮಗಳಲ್ಲಿ ಧಾರಾಕಾರ ಮಳೆಯಿಂದಾಗಿ ಭಾರೀ ಭೂಕುಸಿತಗಳು ಸಂಭವಿಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಸಾವನ್ನಪ್ಪಿದ್ದಾರೆ.

2024-08-01 11:56 GMT

ಮೆಪ್ಪಾಡಿಯಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದ ರಾಹುಲ್‌, ಪ್ರಿಯಾಂಕಾ

ಭೂಕುಸಿತ ಪೀಡಿತ ಪುದೇಶ ಮತ್ತು ಮಪ್ಪಾಡಿಯ ಆಸ್ಪತ್ರೆ ಮತ್ತು ಇಲ್ಲಿನ ಚೂರಲ್ಮಲಾದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಂಗ್ರೆಸ್‌ ಮುಖಂಡ ಹಾಗೂ ವಯನಾಡ್ ಮಾಜಿ ಸಂಸದ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದಾ ಗುರುವಾರ ಮಧ್ಯಾಹ್ನ  ಭೇಟಿ ನೀಡಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಫೇಸ್‌ಬುಕ್ ಪೋಸ್ಟ್‌ ನಲ್ಲಿ ರಾಹುಲ್, ವಿಪತ್ತು ಮತ್ತು ದುರಂತದಿಂದ ದೃಶ್ಯಗಳನ್ನು ನೋಡಿದಾಗ ನನ್ನ ತುಂಬಾ ನೋವಾಯಿತು ಎಂದು ಹೇಳಿದ್ದಾರೆ.

"ಈ ಕಷ್ಟದ ಸಮಯದಲ್ಲಿ, ಪ್ರಿಯಾಂಕಾ ಮತ್ತು ನಾನು ವಯನಾಡ್ ಜನರೊಂದಿಗೆ ನಿಂತಿದ್ದೇವೆ. ನಾವು ಪರಿಹಾರ, ರಕ್ಷಣೆ ಮತ್ತು ಪುನರ್ವಸತಿ ಪ್ರಯತ್ನಗಳನ್ನು ಗಮನಿಸುತ್ತಿದ್ದೇವೆ, ಅಗತ್ಯವಿರುವ ಎಲ್ಲಾ ನೆರವು ಒದಗಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಯುಡಿಎಫ್ ಬದ್ಧವಾಗಿದೆ. ಪುನರಾವರ್ತಿತ ಘಟನೆಗಳು ಭೂಕುಸಿತಗಳು ಮತ್ತು ಪ್ರಾಕೃತಿಕ ವಿಕೋಪಗಳ ಬಗ್ಗೆ ತುರ್ತಾಗಿ ಸಮಗ್ರ ಕ್ರಿಯಾ ಯೋಜನೆ ಅಗತ್ಯವಿದೆʼʼ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಚೂರಲ್ಮಲಾ ತಲುಪಿದ ನಂತರ, ರಾಹುಲ್ ಮತ್ತು ಪ್ರಿಯಾಂಕಾ - ನೀಲಿ ರೇನ್‌ಕೋಟ್‌ಗಳನ್ನು ಧರಿಸಿ - ಅಲ್ಲಿ ನಿರ್ಮಿಸಲಾದ ತಾತ್ಕಾಲಿಕ ಮರದ ಕಾಲುದಾರಿಯನ್ನು ದಾಟಿ, ಬೈಲಿ ಸೇತುವೆಯ ನಿರ್ಮಾಣ ಮತ್ತು ಮಳೆ- ಕೆಸರುಮಯ ಭೂಪ್ರದೇಶದಲ್ಲಿ ಧೈರ್ಯವಾಗಿ ನಡೆದಾಡಿ ವೀಕ್ಷಿಸಿದರು.

2024-08-01 10:57 GMT

2024-08-01 10:53 GMT

Tags:    

Similar News