ಮೆಪ್ಪಾಡಿಯಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದ... ... Wayanad Landslide LIVE | ಇದು ರಾಷ್ಟ್ರೀಯ ವಿಪತ್ತು, ಸರ್ಕಾರ ಏನು ಮಾಡುತ್ತದೆ ನೋಡೋಣ: ರಾಹುಲ್

ಮೆಪ್ಪಾಡಿಯಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದ ರಾಹುಲ್‌, ಪ್ರಿಯಾಂಕಾ

ಭೂಕುಸಿತ ಪೀಡಿತ ಪುದೇಶ ಮತ್ತು ಮಪ್ಪಾಡಿಯ ಆಸ್ಪತ್ರೆ ಮತ್ತು ಇಲ್ಲಿನ ಚೂರಲ್ಮಲಾದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಂಗ್ರೆಸ್‌ ಮುಖಂಡ ಹಾಗೂ ವಯನಾಡ್ ಮಾಜಿ ಸಂಸದ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದಾ ಗುರುವಾರ ಮಧ್ಯಾಹ್ನ  ಭೇಟಿ ನೀಡಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಫೇಸ್‌ಬುಕ್ ಪೋಸ್ಟ್‌ ನಲ್ಲಿ ರಾಹುಲ್, ವಿಪತ್ತು ಮತ್ತು ದುರಂತದಿಂದ ದೃಶ್ಯಗಳನ್ನು ನೋಡಿದಾಗ ನನ್ನ ತುಂಬಾ ನೋವಾಯಿತು ಎಂದು ಹೇಳಿದ್ದಾರೆ.

"ಈ ಕಷ್ಟದ ಸಮಯದಲ್ಲಿ, ಪ್ರಿಯಾಂಕಾ ಮತ್ತು ನಾನು ವಯನಾಡ್ ಜನರೊಂದಿಗೆ ನಿಂತಿದ್ದೇವೆ. ನಾವು ಪರಿಹಾರ, ರಕ್ಷಣೆ ಮತ್ತು ಪುನರ್ವಸತಿ ಪ್ರಯತ್ನಗಳನ್ನು ಗಮನಿಸುತ್ತಿದ್ದೇವೆ, ಅಗತ್ಯವಿರುವ ಎಲ್ಲಾ ನೆರವು ಒದಗಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಯುಡಿಎಫ್ ಬದ್ಧವಾಗಿದೆ. ಪುನರಾವರ್ತಿತ ಘಟನೆಗಳು ಭೂಕುಸಿತಗಳು ಮತ್ತು ಪ್ರಾಕೃತಿಕ ವಿಕೋಪಗಳ ಬಗ್ಗೆ ತುರ್ತಾಗಿ ಸಮಗ್ರ ಕ್ರಿಯಾ ಯೋಜನೆ ಅಗತ್ಯವಿದೆʼʼ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಚೂರಲ್ಮಲಾ ತಲುಪಿದ ನಂತರ, ರಾಹುಲ್ ಮತ್ತು ಪ್ರಿಯಾಂಕಾ - ನೀಲಿ ರೇನ್‌ಕೋಟ್‌ಗಳನ್ನು ಧರಿಸಿ - ಅಲ್ಲಿ ನಿರ್ಮಿಸಲಾದ ತಾತ್ಕಾಲಿಕ ಮರದ ಕಾಲುದಾರಿಯನ್ನು ದಾಟಿ, ಬೈಲಿ ಸೇತುವೆಯ ನಿರ್ಮಾಣ ಮತ್ತು ಮಳೆ- ಕೆಸರುಮಯ ಭೂಪ್ರದೇಶದಲ್ಲಿ ಧೈರ್ಯವಾಗಿ ನಡೆದಾಡಿ ವೀಕ್ಷಿಸಿದರು.

Update: 2024-08-01 11:56 GMT

Linked news