ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿಕೇರಳದ... ... Wayanad Landslide LIVE | ಇದು ರಾಷ್ಟ್ರೀಯ ವಿಪತ್ತು, ಸರ್ಕಾರ ಏನು ಮಾಡುತ್ತದೆ ನೋಡೋಣ: ರಾಹುಲ್
ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತವನ್ನು "ಘೋರ ವಿಪತ್ತು ಎಂದು ಬಣ್ಣಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಘಟನೆಯ ಬಗ್ಗೆ, ತೀವು ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಇಬ್ಬರು ತೃಣಮೂಲ ಕಾಂಗ್ರೆಸ್ ಸಂಸದರಾದ ಸಾಕೇತ್ ಗೋಖಲೆ ಮತ್ತು ಸುಶ್ಮಿತಾ ದೇವ್ ಅವರು ಸಂತ್ರಸ್ತ ಕುಟುಂಬಗಳಿಗೆ ನೆರವು ಮತ್ತು ಬೆಂಬಲವನ್ನು ನೀಡಲು ಕೇರಳದ ಪೀಡಿತ ಪ್ರದೇಶಗಳಿಗೆ ತೆರಳಲಿದ್ದಾರೆ ಎಂದು ಬ್ಯಾನರ್ಜಿ ಹೇಳಿದರು.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ʻʻಕೇರಳದ ವಯನಾಡ್ ಭೂಕುಸಿತದ ಸುದ್ದಿಯಿಂದ ನಾವು ತುಂಬಾ ವಿಚಲಿತರಾಗಿದ್ದೇವೆ. ಇದು ನಿಜವಾಗಿಯೂ ಗಂಭೀರ ದುರಂತವಾಗಿದೆ. ಮಾನವೀಯ ಆಧಾರದ ಮೇಲೆ ಪೀಡಿತ ಪುದೇಶಗಳಿಗೆ ಭೇಟಿ ನೀಡಲು ನಾವು ನಮ್ಮ ಇಬ್ಬರು ಸಂಸದರಾದ ಸಾಕೇತ್ ಗೋಖಲೆ ಮತ್ತು ಸುಶ್ಮಿತಾ ದೇವ್ ಅವರ ತಂಡವನ್ನು ಕಳುಹಿಸುತ್ತಿದ್ದೇವೆ.
ಸಂಸದರು ಎರಡು ದಿನಗಳ ಕಾಲ ಅಲ್ಲೇ ಉಳಿದು ನೊಂದ ಕುಟುಂಬಗಳ ಶ್ರೇಯೋಭಿವೃದ್ಧಿಗೆ ಸಂಪೂರ್ಣ ನೆರವು ಮತ್ತು ಸಹಕಾರ ನೀಡಲಿದ್ದಾರೆ ಎಂದರು.