ಫೆಡರಲ್ ಸಮೀಕ್ಷೆ | ಬೆಲೆ ಏರಿಕೆ, ನಿರುದ್ಯೋಗ ಅತಿ ದೊಡ್ಡ ಚುನಾವಣೆ ವಿಷಯಗಳು!

ಕಳೆದ ಐದು ವರ್ಷದಲ್ಲಿ ಆರ್ಥಿಕ ಪರಿಸ್ಥಿತಿ ಹಾಗೆಯೇ ಇದೆ ಎಂದು ಫೆಡರಲ್-ಪುತಿಯ ತಲೈಮುರೈ-ಆಪ್ಟ್ ರಾಷ್ಟ್ರವ್ಯಾಪಿ 2024ರ ಸಮೀಕ್ಷೆ ಬಹಿರಂಗ ಪಡಿಸಿದೆ.;

Update: 2024-02-12 14:00 GMT

ಮೋದಿ ಎಂಬ ಅಂಶ ಮತದಾರರ ಮೇಲೆ ತನ್ನ ಹಿಡಿತವನ್ನು ಉಳಿಸಿಕೊಂಡಿದೆ. ಕಳೆದ ಐದು ವರ್ಷದಲ್ಲಿ ಆರ್ಥಿಕ ಪರಿಸ್ಥಿತಿ ಬದಲಾವಣೆ ಆಗಿಲ್ಲ ಎಂದು ಫೆಡರಲ್-ಪುತಿಯ ತಲೈಮುರೈ-ಆಪ್ಟ್ ನಡೆಸಿದ ರಾಷ್ಟ್ರವ್ಯಾಪಿ 2024ರ ಚುನಾವಣಾ ಸಮೀಕ್ಷೆ ಬಹಿರಂಗ ಪಡಿಸಿದೆ.

ಭಾರತೀಯ ಮತದಾರನ ಆಲೋಚನೆಗಳು ಏನು? ಮುಖ್ಯ ಚುನಾವಣಾ ವಿಷಯಗಳು ಯಾವುವು? ನರೇಂದ್ರ ಮೋದಿ ಅವರು ಒಬ್ಬ ಉತ್ತಮ ಪ್ರಧಾನ ಮಂತ್ರಿ ಎಂದು ಮತದಾರರು ಭಾವಿಸುತ್ತಿದ್ದಾರೆಯೇ? ಮತ್ತು, ಅತಿ ದೊಡ್ಡ ಪ್ರಶ್ನೆಯೆಂದರೆ, ಮತದಾರರು ಈ ಬಾರಿ ಯಾರಿಗೆ ಮತ ನೀಡುತ್ತಾರೆ?

ದ ಫೆಡರಲ್ ಮತ್ತು ಅದರ ಸೋದರ ಸಂಸ್ಥೆ ಪುತಿಯ ತಲೈಮುರೈ ದೇಶಧ ನಾಡಿಮಿಡಿತವನ್ನು ಪತ್ತೆ ಹಚ್ಚಲು ವಿಸ್ತೃತ ರಾಷ್ಟ್ರವ್ಯಾಪಿ ಸಮೀಕ್ಷೆಯೊಂದನ್ನು ಕೈಗೊಂಡಿದ್ದವು. ಈ ಸಮೀಕ್ಷೆಯು ಹಲವು ಆಶ್ಚರ್ಯಕರ ಸಂಗತಿಗಳನ್ನು ಬಿಚ್ಚಿಟ್ಟಿದೆ. ಈ ಮಾಹಿತಿಯನ್ನು ದ ಫೆಡರಲ್‌ ಕರ್ನಾಟಕ ಓದುಗರೊಂದಿಗೆ ಇಂದಿನಿಂದ(ಫೆಬ್ರವರಿ 12) ಹಂಚಿಕೊಳ್ಳುತ್ತಿದೆ.

ನೀವು ಈ ಕುರಿತ ತಜ್ಞರ ಸಂವಾದವನ್ನು ದ ಫೆಡರಲ್ ನ ಯು ಟ್ಯೂಬ್ ಚಾನೆಲ್ ನಲ್ಲಿಯೂ ವೀಕ್ಷಿಸಬಹುದು.

ಪ್ರಶ್ನೆ 1:ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆಗಳು ಆಗಿವೆಯೇ?

ಕಳೆದ 5 ವರ್ಷದಲ್ಲಿ ಆರ್ಥಿಕ ಸ್ಥಿತಿಯಲ್ಲಿನ ಬದಲಾವಣೆಯನ್ನು ಕೆಳಗಿನ ಯಾವುದು ಉತ್ತಮವಾಗಿ ವಿವರಿಸುತ್ತದೆ?

ಶೇ.44ರಷ್ಟು ಮಂದಿ 2019ರಿಂದ ತಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದಿದ್ದಾರೆ. ಶೇ.35ರಷ್ಟು ಮಂದಿ ಪರಿಸ್ಥಿತಿ ಉತ್ತಮಗೊಂಡಿದೆ ಎಂದಿದ್ದರೆ, ಶೇ.18ರಷ್ಟು ಮಂದಿ ಪರಿಸ್ಥಿತಿ ಹದಗೆಟ್ಟಿದೆ ಎಂದಿದ್ದಾರೆ.

ದೇಶಧ ಎಲ್ಲ ಪ್ರಾಂತ್ಯಗಳಲ್ಲಿ ಮತದಾರರ ಸರಾಸರಿ ಅಭಿಪ್ರಾಯ ಒಂದೇ ರೀತಿ ಇದೆ.

ಪ್ರಶ್ನೆ 2: ಪ್ರಮುಖ 10 ಉಪಕ್ರಮಗಳು

ಮೋದಿ ಸರ್ಕಾರದ 3 ಪ್ರಮುಖ ಉಪಕ್ರಮಗಳು ಯಾವುವು?

ರಾಷ್ಟ್ರೀಯ ಮಟ್ಟದಲ್ಲಿ ಯುನೈಟೆಡ್ ಪೇಮೆಂಟ್ ಸಿಸ್ಟಮ್(ಯುಪಿಐ), 80 ಕೋಟಿ ಜನರಿಗೆ ಉಚಿತ ಪಡಿತರ ಮತ್ತು ಜಲ ಜೀವನ್ ಮಿಷನ್ ಮೂಲಕ ಶುದ್ಧ ಕುಡಿಯುವ ನೀರಿನ ಪೂರೈಕೆ ಮೊದಲ ಸ್ಥಾನ ಗಳಿಸಿವೆ.

ರೈತರಿಗೆ ನೇರ ನಗದು ಪಾವತಿ ಮೂಲಕ ಸಹಾಯಧನ ವಿತರಣೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಯನ್ನು ಹೆಚ್ಚಿಸಿರುವುದು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟವನ್ನು ಹೆಚ್ಚಿಸಿರುವುದು ಮೋದಿ ಸರ್ಕಾರದ ಇನ್ನಿತರ ಜನಪ್ರಿಯ ಕಾರ್ಯಕ್ರಮಗಳಾಗಿವೆ.

ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ(ಪಿಎಂಜಿಕೆಎವೈ)ಯಡಿ ಉಚಿತ ಪಡಿತರ ನೀಡುವಿಕೆಯು ಜನಪ್ರಿಯ ಕಾರ್ಯಕ್ರಮವಾಗಿದೆ.

ಪ್ರಶ್ನೆ 3: ಫಲಾನುಭವಿ ಮತದಾರರು:

ಕೇಂದ್ರ ಸರ್ಕಾರದ ಯಾವುದೇ ಕಾರ್ಯಕ್ರಮದ ಫಲಾನುಭವಿಯೇ? .

ಶೇ.63ರಷ್ಟು ಮಂದಿ ತಾವು ಕೇಂದ್ರ ಸರ್ಕಾರದ ಯಾವುದೇ ಕಾರ್ಯಕ್ರಮದ ಫಲಾನುಭವಿಗಳಾಗಿಲ್ಲ ಎಂದು ಹೇಳಿದ್ದಾರೆ. ಈ ಕಾರ್ಯಕ್ರಮಗಳ ಶೇ.36 ಗರಿಷ್ಠ ಫಲಾನುಭವಿಗಳು ಪೂರ್ವ ವಿಭಾಗದಲ್ಲಿ ಇದ್ದಾರೆ.

ಪ್ರಶ್ನೆ 4: ನೂತನ ಸಂಸತ್ ಕಟ್ಟಡ

ಹೊಸ ಸಂಸತ್ ಕಟ್ಟಡಕ್ಕೆ ನೀವು ಯಾವ ಶ್ರೇಣಿ ನೀಡುತ್ತೀರಿ?

ಕಳೆದ ವರ್ಷ ಉದ್ಘಾಟನೆಗೊಂಡ ಸಂಸತ್ ಭವನವನ್ನು ಬಹುತೇಕರು ಸ್ವಾಗತಿಸಿದ್ದಾರೆ.

ಅತ್ಯುತ್ತಮ ಶ್ರೇಣಿ ನೀಡಿದವರು ಪಶ್ಚಿಮ ವಿಭಾಗದವರು. ಅವರು ಶೇ.23ರಷ್ಟಿದ್ದು, ಆ ಪ್ರಮಾಣದ ಮಂದಿ ಹೊಸ ಸಂಸತ್‌ ಭವನದ ನಿರ್ಮಾಣವನ್ನು ಸ್ವಾಗತಿಸಿದ್ದಾರೆ. ಎರಡನೇ ಸ್ಥಾನ ಪೂರ್ವ ವಿಭಾಗಕ್ಕೆ ಸಲ್ಲುತ್ತದೆ; ಅವರು ಶೇ.21. ಅತ್ಯುತ್ತಮ, ಅತಿ ಉತ್ತಮ, ಉತ್ತಮ ಮತ್ತು ತೃಪ್ತಿಕರ ಎಂಬ ಆಯ್ಕೆಗಳಿಗೆ ಹೆಚ್ಚು ಮತಗಳು ಬಂದಿವೆ. ಈ ಕಟ್ಟಡವನ್ನು ಇಷ್ಟಪಟ್ಟಿಲ್ಲ ಅಥವಾ ನಿರ್ಲಕ್ಷಿಸಿದವರ ಪ್ರಮಾಣ ಒಟ್ಟು ಪ್ರತಿಕ್ರಿಯಿಸಿದವರಲ್ಲಿ ಶೇ.20.

ಪ್ರಶ್ನೆ 5; ಲೋಕಸಭೆ ಚುನಾವಣೆಯಲ್ಲಿ ನೀವು ಯಾರಿಗೆ ಮತ ನೀಡುತ್ತೀರಿ ಎಂಬುದನ್ನು ನಿರ್ಧರಿಸುವ ಅಂಶಗಳು ಯಾವುವು?

ಮತ ಯಾರಿಗೆ ಎಂಬುದನ್ನು ನಿರ್ಧರಿಸುವ ಅಂಶ ಯಾವುದು ಎಂಬ ಪ್ರಶ್ನೆಗೆ ಶೇ.32ರಷ್ಟು ಮಂದಿ ನಿರುದ್ಯೋಗ ಮತ್ತು ಹಣದುಬ್ಬರ ಎಂದು ಪ್ರತಿಕ್ರಿಯಿದ್ದಾರೆ.

ಮೋದಿ ಪ್ರಧಾನಿಯಾಗಿ ಮುಂದುವರಿಯಬೇಕೇ ಎಂಬುದು ಕೂಡ ಪ್ರಮುಖ ವಿಷಯವಾಗಿದ್ದು, ಶೇ.26.5ರಷ್ಟು ಮಂದಿ ತಾವು ಈ ಬಗ್ಗೆ ಆಲೋಚಿಸುವುದಾಗಿ ಹೇಳಿದ್ದಾರೆ.

ನಿರುದ್ಯೋಗ ಎಂದು ಪ್ರತಿಕ್ರಿಯಿಸಿದ ಬಹುತೇಕರು ಪೂರ್ವ ಭಾಗದವರು. ಅವರು ಶೇ.38.ರಷ್ಟಿದ್ದಾರೆ. ಬೆಲೆ ಹೆಚ್ಚಳ ಸಮಸ್ಯೆ ಉತ್ತರ ವಲಯವನ್ನು ಪ್ರಭಾವಿಸಿದ ಅಂಶವಾಗಿದ್ದು, ಶೇ.33ರಷ್ಟು ಮಂದಿ ಅದು ಪ್ರಮುಖ ಅಂಶ ಎಂದು ಹೇಳಿದ್ದಾರೆ.

ಸಮೀಕ್ಷೆಯ ವಿಧಾನ

ಚುನಾವಣಾ ಪೂರ್ವ ಸಮೀಕ್ಷೆಯನ್ನು ನವೆಂಬರ್ 2023 ಮತ್ತು ಜನವರಿ 2024 ರ ನಡುವೆ 19 ರಾಜ್ಯಗಳಾದ್ಯಂತ 1,314 ಸ್ಥಳಗಳಲ್ಲಿ ನಡೆಸಲಾಯಿತು. ಇವುಗಳನ್ನು 82 ಪ್ರಾತಿನಿಧಿಕ ಲೋಕಸಭಾ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗಿದೆ.

ಸಮೀಕ್ಷೆಯು ದೇಶದ ವಿವಿಧ ಭಾಗಗಳಿಂದ 35,905 ಅರ್ಹ ಮತದಾರರನ್ನು ಒಳಗೊಂಡಿದೆ.

ಸಮೀಕ್ಷೆಯ ಉದ್ದೇಶಕ್ಕಾಗಿ, 19 ರಾಜ್ಯಗಳನ್ನು ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ:

 * ಉತ್ತರ ವಲಯ: ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ದೆಹಲಿ

 * ದಕ್ಷಿಣ ವಲಯ: ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳ, ತೆಲಂಗಾಣ

 * ಪೂರ್ವ ವಲಯ: ಒಡಿಶಾ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ

 * ಪಶ್ಚಿಮ ವಲಯ: ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಛತ್ತೀಸ್‌ಗಢ, ಮಧ್ಯಪ್ರದೇಶ

ಅರ್ಹ ಮತದಾರರನ್ನು ಅನಿರ್ಧಿಷ್ಟ ಕ್ರಮದಲ್ಲಿ ಸಮೀಕ್ಷಕರು ಮನೆ ಹಾಗೂ ವೈಯಕ್ತಿಕವಾಗಿ ಭೇಟಿಮಾಡಿ,  ರಚನಾತ್ಮಕ ಪ್ರಶ್ನಾವಳಿಯ ಸಹಾಯದಿಂದ ಸಂದರ್ಶನಗಳನ್ನು ನಡೆಸಲಾಯಿತು.

ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಒಡಿಯಾ ಮತ್ತು ಬಂಗಾಳಿ ಭಾಷೆಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗಿದೆ. 

ಸಂದರ್ಶನಗಳನ್ನು ಆಪ್ಟ್ ನ ಸಂದರ್ಶಕರ ತಂಡವು ಅದರ ಕ್ಷೇತ್ರ ಮೇಲ್ವಿಚಾರಕರ ಮೇಲ್ವಿಚಾರಣೆಯಲ್ಲಿ ನಡೆಸಿದೆ.

82 ಲೋಕಸಭಾ ಕ್ಷೇತ್ರಗಳಲ್ಲಿ ತಲಾ 400 ಮತದಾರರನ್ನು ಸಂದರ್ಶಿಸಲಾಗಿದೆ. ಸಮೀಕ್ಷೆಯ ಫಲಿತಾಂಶಗಳನ್ನು ತಲುಪಲು ಮತದಾರರಿಂದ ಸಂಗ್ರಹಿಸಿದ ಅಭಿಪ್ರಾಯಗಳನ್ನು ಒಟ್ಟುಗೂಡಿಸಲಾಗಿದೆ.


ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶಕ್ಕೆ ಇಲ್ಲಿ ಕ್ಲಿಕ್ ಮಾಡಿ..


Tags:    

Similar News