ಕೇಂದ್ರದಿಂದ ಸಮಾಜದ ಅಂಚಿನ ಶೇ.73 ಜನರ ನಿರ್ಲಕ್ಷ್ಯ: ರಾಹುಲ್

Update: 2024-03-03 12:22 GMT
ಮಧ್ಯಪ್ರದೇಶದಲ್ಲಿ ಶನಿವಾರ ನಡೆದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯಲ್ಲಿ ರಾಜ್ಯಾಧ್ಯಕ್ಷ ಜಿತೇಂದ್ರ ಪಟ್ವಾರಿ, ಪಕ್ಷದ ನಾಯಕ ಕಮಲ್ ನಾಥ್ ಮತ್ತು ಇತರರೊಂದಿಗೆ ರಾಹುಲ್ ಗಾಂಧಿ

ಮಧ್ಯಪ್ರದೇಶ,ಮಾ.3- ನರೇಂದ್ರ ಮೋದಿ ಸರ್ಕಾರವು ದೇಶದ ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಸೇರಿರುವ ಶೇ. 73 ಜನರನ್ನು ನಿರ್ಲಕ್ಷಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. 

ಮಧ್ಯಪ್ರದೇಶದಲ್ಲಿ ಆರ್‌ಜೆಡಿ ಆಯೋಜಿಸಿದ್ದ 'ಜನ್ ವಿಶ್ವಾಸ್ ಯಾತ್ರೆʼಯಲ್ಲಿ ಮಾತನಾಡಿ, ʻದೇಶದಲ್ಲಿ ರೈತರು, ಯುವಕರು ಮತ್ತು ದೀನದಲಿತರಿಗೆ ಅನ್ಯಾಯವಾಗುತ್ತಿದೆ. ಒಂದು ಪಕ್ಷ ಜನರ ನಡುವೆ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಆದರೆ, ನಾವು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯನ್ನು ನೀಡುತ್ತಿದ್ದೇವೆ.ʼ ಎಂದರು. 

ಅಗ್ನಿವೀರ್ ನೇಮಕ ವಿರೋಧಿಸಿ ಬಿಹಾರದಲ್ಲಿ ನಡೆದ ಪ್ರತಿಭಟನೆಗಳನ್ನುಉಲ್ಲೇಖಿಸಿ, ಈ ಉಪಕ್ರಮ ದೇಶದ ಯುವಜನರ ವಿರುದ್ಧವಾಗಿದೆ ಎಂದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಇಂಡಿಯ ಒಕ್ಕೂಟ ಗರಿಷ್ಠ ಸ್ಥಾನ ಗೆಲ್ಲಲಿದೆ. ಕೇಂದ್ರೀಯ ಸಂಸ್ಥೆಗಳಾದ ಇಡಿ, ಸಿಬಿಐ ಮತ್ತು ಐಟಿಗಳನ್ನು ಕೇಂದ್ರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು,ಇದಕ್ಕೆ ವಿರೋಧ ಪಕ್ಷದ ನಾಯಕರು ಹೆದರುವುದಿಲ್ಲಎಂದು ಹೇಳಿದರು. 

ದೇಶದ ಅಭ್ಯುದಯಕ್ಕಾಗಿ ಮತ್ತು ಸಂವಿಧಾನವನ್ನು ರಕ್ಷಿಸಲು ಮೋದಿ ಸರ್ಕಾರ ಕಿತ್ತೊಗೆಯಬೇಕು ಎಂದು ಹೇಳಿದರು.

Tags:    

Similar News