ಇಡಿ ಅಧಿಕಾರಿಗಳ ಮೇಲೆ ದಾಳಿ: ಶಾಜಹಾನ್ ಶೇಖ್ ನಿವಾಸ, ಕಚೇರಿಯಲ್ಲಿ ಸಿಬಿಐ ಶೋಧ
ಕೋಲ್ಕತ್ತಾ, ಮಾ 8 - ಇಡಿ ತಂಡದ ಮೇಲೆ ದಾಳಿಗೆ ಸಂಬಂಧಿಸಿದಂತೆ ಸಂದೇಶಖಲಿ ಯಲ್ಲಿರುವ ಟಿಎಂಸಿ ಶಾಸಕ ಶಾಜಹಾನ್ ಶೇಖ್ ಅವರ ನಿವಾಸ ಮತ್ತು ಕಚೇರಿಯನ್ನು ಸಿಬಿಐ ಅಧಿಕಾರಿಗಳು ಶುಕ್ರವಾರ ಶೋಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಅಧಿಕಾರಿಗಳು ಸರ್ಬೇರಿಯಾದ ಅಕುಂಚಿಪಾರಾ ಪ್ರದೇಶದ ಶೇಖ್ ಅವರ ಮನೆ ಸಮೀಪದ ಪ್ರದೇಶಗಳಿಗೂ ಭೇಟಿ ನೀಡಿತು.ಆನಂತರ ಕಚೇರಿಯಲ್ಲಿ ಶೋಧನೆ ನಡೆಯಿತು.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಶೇಖ್ ಅವರನ್ನು ಸಂದೇಶ್‌ಖಲಿಯಲ್ಲಿ ಇಡಿ ಅಧಿಕಾರಿಗಳ ಮೇಲೆ ಗುಂಪು ದಾಳಿ ನಡೆಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ.
ಆರು ಸಿಬಿಐ ಅಧಿಕಾರಿಗಳು, ಆರು ಕೇಂದ್ರೀಯ ಫಾರೆನ್ಸಿಕ್ ಅಧಿಕಾರಿಗಳು, ಇಬ್ಬರು ಸಿಬಿಐ ಪತ್ತೆದಾರರಿದ್ದ 14 ಸದಸ್ಯರ ತಂಡದ ಮೇಲೆ ದಾಳಿ ನಡೆಸಲಾಗಿತ್ತು. ಸಿಬಿಐ ಅಧಿಕಾರಿಗಳ ರಕ್ಷಣೆಗೆ ಕೇಂದ್ರೀಯ ಪಡೆಗಳ ದೊಡ್ಡ ತುಕಡಿಯನ್ನು ನಿಯೋಜಿಸಲಾಗಿತ್ತು.
ದೂರದರ್ಶನ ಚಾನೆಲ್‌ನೊಂದಿಗೆ ಮಾತನಾಡಿದ ಟಿಎಂಸಿಯ ಸಂದೇಶಖಲಿ ಶಾಸಕ ಸುಕುಮಾರ್ ಮಹತಾ, ಜನವರಿ 5 ರಂದು ಗುಂಪನ್ನು ನಿಯಂತ್ರಿಸಲು ಸಹಾಯ ಕೋರಲು ಶೇಖ್‌ಗೆ ಕರೆ ಮಾಡಿದ್ದೆ. ಆದರೆ ʻತಾನು ಪ್ರದೇಶದಲ್ಲಿ ಇಲ್ಲʼ ಎಂದು ಶೇಖ್ ಹೇಳಿದ್ದರು.