ವಿಪಿಎಫ್‌ ವಿವಾದ | ಮಲಯಾಳಂ ಚಲನಚಿತ್ರ ಪ್ರದರ್ಶನ ನಿಲ್ಲಿಸಿದ ಪಿವಿಆರ್‌-ಐನೆಕ್ಸ್

ಮಲ್ಟಿಪ್ಲೆಕ್ಸ್ ಕಂಪನಿ ವಿಧಿಸುವ ವರ್ಚುವಲ್ ಪ್ರಿಂಟ್ ಶುಲ್ಕ (ವಿಪಿಎಫ್) ವಿಚಾರದಲ್ಲಿ ಪಿವಿಆರ್ ಮತ್ತು ಚಲನಚಿತ್ರ ನಿರ್ಮಾಪಕರ ಸಂಘದ ನಡುವೆ ವಾಗ್ವಾದ ನಡೆಯುತ್ತಿದೆ.;

Update: 2024-04-14 14:58 GMT
ಪಿವಿಆರ್ ಮಾಲೀಕತ್ವದ ಸ್ಕ್ರೀನ್ ಅಥವಾ ಥಿಯೇಟರ್‌ಗೆ ಯಾವುದೇ ಮಲಯಾಳಂ ಚಲನಚಿತ್ರವನ್ನು ನೀಡಲಾಗುವುದಿಲ್ಲ .
Click the Play button to listen to article

ಕೊಚ್ಚಿ: ದಕ್ಷಿಣ ರಾಜ್ಯದ ನಿರ್ಮಾಪಕರಿಗೆ ಆಗಿರುವ ನಷ್ಟವನ್ನು ಸರಿದೂಗಿಸುವವರೆಗೆ ಪಿವಿಆರ್ ಮಾಲೀಕತ್ವದ ಸ್ಕ್ರೀನ್ ಅಥವಾ ಥಿಯೇಟರ್‌ಗೆ ಯಾವುದೇ ಮಲಯಾಳಂ ಚಲನಚಿತ್ರವನ್ನು ನೀಡಲಾಗುವುದಿಲ್ಲ ಎಂದು ಕೇರಳದ ಚಲನಚಿತ್ರ ನೌಕರರ ಒಕ್ಕೂಟ (ಫೆಫ್ಕಾ) ಶನಿವಾರ ( ಏ.13) ಹೇಳಿದೆ.

ಫೆಫ್ಕಾ ಪ್ರಧಾನ ಕಾರ್ಯದರ್ಶಿ ಉನ್ನಿಕೃಷ್ಣನ್ ಬಿ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ಧಾರವನ್ನು ಪ್ರಕಟಿಸಿದರು. ಖ್ಯಾತ ನಿರ್ಮಾಪಕ ಬ್ಲೆಸ್ಸಿ ಐಪ್ ಥಾಮಸ್ ಮತ್ತು ವಿನೀತ್  ಶ್ರೀನಿವಾಸನ್ ಸಹ ಉಪಸ್ಥಿತರಿದ್ದರು.

ಮಲ್ಟಿಪ್ಲೆಕ್ಸ್ ಕಂಪನಿ ವಿಧಿಸುವ ವರ್ಚುವಲ್ ಪ್ರಿಂಟ್ ಶುಲ್ಕ (ವಿಪಿಎಫ್) ವಿಚಾರದಲ್ಲಿ ಪಿವಿಆರ್ ಮತ್ತು ಚಲನಚಿತ್ರ ನಿರ್ಮಾಪಕರ ಸಂಘದ ನಡುವೆ ಜಗಳ ನಡೆಯುತ್ತಿದೆ. ವಿವಾದ ಬಗೆಹರಿಯುವವರೆಗೆ ಫೋರಂ ಮಾಲ್‌ನಲ್ಲಿರುವ ಪಿವಿಆರ್‌ನ ಹೊಸ ಪರದೆಗೆ ಯಾವುದೇ ಚಲನಚಿತ್ರಗಳನ್ನು ನೀಡದಿರಲು ನಿರ್ಮಾಪಕರ ಸಂಘ ನಿರ್ಧರಿಸಿದೆ ಎಂದು ಉನ್ನಿಕೃಷ್ಣನ್ ಹೇಳಿದ್ದಾರೆ.

ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ಪಿವಿಆರ್‌ಗೆ ಅಂತಹ ನಿಲುವು ತೆಗೆದುಕೊಳ್ಳುವ ಧೈರ್ಯವಿಲ್ಲ, ಆದರೆ, ಸಮಸ್ಯೆಗಳನ್ನು ಪ್ರಜಾಸತ್ತಾತ್ಮಕವಾಗಿ ಪರಿಹರಿಸುವ ಮಲಯಾಳಂ ಚಿತ್ರರಂಗದ ದೃಷ್ಟಿಕೋನದಿಂದ ಅನ್ಯಾಯದ ಲಾಭವನ್ನು ಪಡೆಯುತ್ತಿದೆ ಎಂದು ಅವರು ಹೇಳಿದರು.

''ಇದು ಕೇವಲ ಚಿತ್ರ ನಿರ್ಮಾಪಕರ ಸಮಸ್ಯೆಯ ಪ್ರಶ್ನೆಯಲ್ಲ, ಇದು ಮಲಯಾಳಂ ಚಿತ್ರರಂಗ ಮತ್ತು ಒಟ್ಟಾರೆ ಮಲಯಾಳಿಗಳ ಹೆಮ್ಮೆಯ ಪ್ರಶ್ನೆಯೂ ಹೌದು. ಹಾಗಾಗಿ ನಿರ್ಮಾಪಕರು ತಮ್ಮ ಚಿತ್ರಗಳು ಪ್ರದರ್ಶನವಾಗದೇ ಇದ್ದಷ್ಟು ದಿನಗಳ ನಷ್ಟಕ್ಕೆ ಪರಿಹಾರ ನೀಡದ ಹೊರತು, ಯಾವುದೇ ಮಲಯಾಳಂ ಸಿನಿಮಾವನ್ನು ಯಾವುದೇ ಪಿವಿಆರ್  ಥಿಯೇಟರ್  ಅಥವಾ ಸ್ಕ್ರೀನ್‌ಗೆ ಎಲ್ಲಿಯೂ ನೀಡುವುದಿಲ್ಲ ಎಂದು ನಾವು ನಿರ್ಧರಿಸಿದ್ದೇವೆ. ನಿರ್ಮಾಪಕರ ಸಂಘವೂ ಭರವಸೆ ನೀಡಿದೆ. ಅವರ ಬೆಂಬಲ ನಮಗೆ ಇದೆ ಎಂದು ಉನ್ನಿಕೃಷ್ಣನ್ ಹೇಳಿದ್ದಾರೆ.

ಚಿತ್ರವೊಂದು ನಿರ್ಮಾಣವಾಗಿ, ಬಿಡುಗಡೆಗೆ ಸಿದ್ಧವಾದ ನಂತರ ಯುಎಫ್​ಒ ಅಥವಾ ಕ್ಯೂಬ್​ಗೆ ಅಪ್​ಲೋಡ್ ಮಾಡಬೇಕು. ಇಲ್ಲಿ ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಮ್​ಗೆ ಬೇಕಾದ ರೀತಿಯಲ್ಲಿ ಸಿನಿಮಾದ ಫಾರ್ಮ್ಯಾಟ್  ​ಬದಲಾಗುತ್ತೆ. ಆ ನಂತರ ಸಿನಿಮಾ ಥಿಯೇಟರ್​ನಲ್ಲಿ ಪ್ರಸಾರ ಕಾಣುತ್ತೆ. ಈ ಪ್ರಕ್ರಿಯೆಗಾಗಿ ಅನೇಕ ವರ್ಷಗಳಿಂದ ನಿರ್ಮಾಪಕರ ಬಳಿ ಹಣ ದೋಚುವ ವ್ಯವಸ್ಥಿತ ಕೆಲಸ ನಡೆಯುತ್ತಲೇ ಇದೆ. ಇದೇ ವಿಚಾರಕ್ಕೆ ಅನೇಕ ಬಾರಿ ಅನೇಕರು ಧ್ವನಿ ಎತ್ತಿದ್ದೂ ಇದೆ. ಆ ಪೈಕಿ ಮಲಯಾಳಂ ಚಿತ್ರರಂಗ ಮೊದಲಿಂದ ಮುಂಚೂಣಿಯಲ್ಲಿಯೇ ಇದೆ. ವರ್ಚುವಲ್ ಪ್ರಿಂಟ್ ಫೀ (VPF) ನಿಂದ ನಿರ್ಮಾಪಕರಿಗೆ ಹಾಗೂ ಚಿತ್ರಮಂದಿರದ ಮಾಲೀಕರಿಗೆ ಲಾಭ ಅನ್ನುವುದು ಮರಿಚೀಕೆಯಾಗಿದೆ ಎಂಬ ಕೂಗು ಹಿಂದಿನಿಂದ ಕೇಳಿ ಬರುತ್ತಿದೆ. ಈ ಕಾರಣಕ್ಕೆ ಕೆರಳಿ ಕೆಂಡವಾಗಿರುವ ಮಲಯಾಳಂ ಚಿತ್ರರಂಗ ತಮ್ಮ ಮನವಿಯನ್ನು ಪುರಸ್ಕರಿಸುವವರೆಗೆ ಪಿವಿಆರ್ ಜೊತೆ ನಾವು ಸಹಕರಿಸುವುದಿಲ್ಲ ಎಂದು ಹೇಳಿದೆ. ನಿರ್ಮಾಪಕರ ಜೊತೆ ಹಂಚಿಕೆದಾರರು ಧ್ವನಿಗೂಡಿಸಿರುವ ಕಾರಣ ಸಮಸ್ಯೆ ಇನ್ನೂ ಜಟಿಲವಾಗಿದೆ.

Tags:    

Similar News