ಮದುವೆ ಬಗ್ಗೆ ಮೌನ ಮುರಿದ ರಶ್ಮಿಕಾ; ತಾಳ್ಮೆಯಿಂದ ಕಾಯುವಂತೆ ಮನವಿ
ಸಮಂತಾ ಮತ್ತು ರಾಜ್ ನಿಡಿಮೋರು ಅವರ ವಿವಾಹದ ನಂತರ, ರಶ್ಮಿಕಾ ಮತ್ತು ವಿಜಯ್ ಅವರೇ ಮುಂದಿನ ದೊಡ್ಡ ಸೆಲೆಬ್ರಿಟಿ ವಿವಾಹವಾಗಲಿದ್ದಾರೆ ಎಂದು ಅಭಿಮಾನಿಗಳು ಭರವಸೆ ಇಟ್ಟುಕೊಂಡಿದ್ದು, ಈ ಮದುವೆ ಈ ವರ್ಷದ ಯಾವುದೋ ಒಂದು ಹಂತದಲ್ಲಿ ನಡೆಯುವುದು ಬಹುತೇಕ ಖಚಿತ ಎಂಬ ಭಾವನೆ ಸದ್ಯಕ್ಕೆ ಮನೆಮಾಡಿದೆ.
ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಸಂಬಂಧದ ಕುರಿತು ಕಳೆದ ಕೆಲವು ವರ್ಷಗಳಿಂದ ಕೇಳಿಬರುತ್ತಿರುವ ಮಾತುಗಳು ಮತ್ತೊಮ್ಮೆ ಭಾರೀ ಸದ್ದು ಮಾಡಿವೆ. ಉಂಗುರ ವಿನಿಮಯ ಮತ್ತು ಆಗಾಗ ಬಹಿರಂಗವಾಗುತ್ತಿದ್ದ ಸಣ್ಣ ಸುಳಿವುಗಳ ಹೊರತಾಗಿಯೂ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ನೇರವಾಗಿ ಹೇಳಿಕೊಂಡಿರಲಿಲ್ಲ. ಹೀಗಾಗಿ, ಈ ತಾರಾ ದಂಪತಿಯ ಮದುವೆ ವಿಚಾರ ಅಭಿಮಾನಿಗಳಿಗೆ 'ಬಗೆಹರಿಯದ ರಹಸ್ಯ'ದಂತಾಗಿತ್ತು.
೨೦೨೬ ಫೆಬ್ರವರಿಯಲ್ಲಿ ರಾಜಸ್ಥಾನದಲ್ಲಿ ತಾರಾ ಜೋಡಿ ಹಸೆಮಣೆ ಏರಲಿದೆ ಎಂಬ ವದಂತಿಗಳು ಹರಡಿವೆ. ಈ ಕುರಿತು ಎರಡೂ ಕುಟುಂಬಗಳಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲವಾದರೂ, ಗಾಸಿಪ್‌ಗಳು ಹೆಚ್ಚಾದ ಹಿನ್ನೆಲೆಯಲ್ಲಿ ರಶ್ಮಿಕಾ ಮಂದಣ್ಣ ಅವರು ʼದ ಹಾಲಿವುಡ್ ರಿಪೋರ್ಟರ್ ಇಂಡಿಯಾʼಗೆ ನೀಡಿದ ಸಂದರ್ಶನದಲ್ಲಿ ಇಂತಹ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಆದರೆ, ಇಲ್ಲಿ ಮದುವೆ ಸುದ್ದಿಯನ್ನು ಖಚಿತಪಡಿಸಲೂ ಇಲ್ಲ, ಅಲ್ಲಗಳೆಯಲೂ ಇಲ್ಲ. ಬದಲಾಗಿ, ತಾಳ್ಮೆಯಿಂದ ಕಾಯುವಂತೆ ಕೇಳಿಕೊಂಡಿದ್ದಾರೆ.
"ಮದುವೆಯ ವಿಚಾರವನ್ನು ನಾನು ಖಚಿತಪಡಿಸಲು ಅಥವಾ ನಿರಾಕರಿಸಲು ಬಯಸುವುದಿಲ್ಲ. ಇದರ ಬಗ್ಗೆ ಮಾತನಾಡಲು ಸಮಯ ಬಂದಾಗ, ನಾವೇ ಹೇಳುತ್ತೇವೆ" ಎಂದು ರಶ್ಮಿಕಾ ಹೇಳಿದ್ದಾರೆ. ಅವರ ಈ ಒಂದೇ ವಾಕ್ಯ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಕೆಲವರು ಇದನ್ನು ಮದುವೆ ಖಚಿತ ಎಂದು ವ್ಯಾಖ್ಯಾನಿಸಿದರೆ, ಇನ್ನು ಕೆಲವರು ಇದು ಕುಚೇಷ್ಟೆ ಎಂದು ಭಾವಿಸಿದ್ದಾರೆ. ಒಟ್ಟಿನಲ್ಲಿ, ಈ ಸಂಗತಿಯು ಬಿರುಸಿನ ಚರ್ಚೆಯನ್ನು ಜೀವಂತವಾಗಿರಿಸಿದೆ.
ಸಮಂತಾ ಮತ್ತು ರಾಜ್ ನಿಡಿಮೋರು ವಿವಾಹದ ನಂತರ, ರಶ್ಮಿಕಾ ಮತ್ತು ವಿಜಯ್ ಅವರೇ ಮುಂದಿನ ದೊಡ್ಡ ಸೆಲೆಬ್ರಿಟಿ ವಿವಾಹವಾಗಲಿದ್ದಾರೆ ಎಂದು ಅಭಿಮಾನಿಗಳು ಭರವಸೆ ಇಟ್ಟುಕೊಂಡಿದ್ದು, ಈ ವರ್ಷ ಮದುವೆ ನಡೆಯುವುದು ಬಹುತೇಕ ಖಚಿತ ಎಂಬ ಭಾವನೆ ಮೂಡಿದೆ.
ಇತ್ತ, ವೃತ್ತಿಪರ ಬದುಕಿನಲ್ಲಿ ರಶ್ಮಿಕಾ ಮಂದಣ್ಣ ಅವರು ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ಅವರೊಂದಿಗೆ ಕಾಕ್‌ಟೇಲ್ -2 ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಅದೇ ರೀತಿ, ವಿಜಯ್ ದೇವರಕೊಂಡ ಅವರು ಕೀರ್ತಿ ಸುರೇಶ್ ಅವರೊಂದಿಗೆ ರೌಡಿ ಜನಾರ್ಧನ್ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.