
ರಶ್ಮಿಕಾ ಕೈಗೆ ಮುತ್ತಿಟ್ಟ ದೇವರಕೊಂಡ
ವಿಜಯ್-ರಶ್ಮಿಕಾ ಪ್ರೀತಿ ಅಧಿಕೃತ : 'ದ ಗರ್ಲ್‌ಫ್ರೆಂಡ್' ಸಮಾರಂಭದಲ್ಲಿ ರಶ್ಮಿಕಾಗೆ ಮುತ್ತಿಟ್ಟ ವಿಜಯ್ ದೇವರಕೊಂಡ
ಸಮಾರಂಭಕ್ಕೂ ಮುನ್ನವೇ ಅಂದರೆ ಅಕ್ಟೋಬರ್ 3, ರಂದು ವಿಜಯ್ ದೇವರಕೊಂಡ ಅವರ ಹೈದರಾಬಾದ್ ನಿವಾಸದಲ್ಲಿ ಅತ್ಯಂತ ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದ್ದು, ಈ ಸುದ್ದಿಗಳಿಗೆ ವಿಜಯ್ ದೇವರಕೊಂಡ ಅವರ ತಂಡವೇ ದೃಢೀಕರಣ ನೀಡಿದೆ.
ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಅವರ ವರ್ಷಗಳ ಪ್ರೇಮ ಪಯಣಕ್ಕೆ ಈಗ ಅಧಿಕೃತ ಮುದ್ರೆ ಬಿದ್ದಿದೆ.
ಕಳೆದ ಹಲವು ವರ್ಷಗಳಿಂದ ಗಾಸಿಪ್‌ಗೆ ಕಾರಣವಾಗಿದ್ದ ಈ ಜೋಡಿ, ಹೈದರಾಬಾದ್‌ನಲ್ಲಿ ನಡೆದ ರಶ್ಮಿಕಾ ಅವರ ಇತ್ತೀಚಿನ ಚಿತ್ರ 'ದ ಗರ್ಲ್‌ಫ್ರೆಂಡ್' ಯಶಸ್ಸಿನ ಸಮಾರಂಭದಲ್ಲಿ ತಮ್ಮ ಪ್ರೀತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
ಸಮಾರಂಭಕ್ಕೂ ಮುನ್ನವೇ ಅಂದರೆ ಅಕ್ಟೋಬರ್ 3 ರಂದು ವಿಜಯ್ ದೇವರಕೊಂಡ ಅವರ ಹೈದರಾಬಾದ್ ನಿವಾಸದಲ್ಲಿ ಅತ್ಯಂತ ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದ್ದು, ಈ ಸುದ್ದಿಯನ್ನು ವಿಜಯ್ ದೇವರಕೊಂಡ ಅವರ ತಂಡ ದೃಢಪಡಿಸಿದೆ.
ರಶ್ಮಿಕಾ ಕೈಗೆ ಪ್ರೀತಿಯ ಮುತ್ತು
'ದ ಗರ್ಲ್‌ಫ್ರೆಂಡ್' ಚಿತ್ರದ ಯಶಸ್ಸಿನ ಆಚರಣೆಯ ವೇಳೆ ರಶ್ಮಿಕಾ ಅವರ ಬಳಿ ಬಂದ ವಿಜಯ್, ವೇದಿಕೆಯ ಮೇಲೆ ಎಲ್ಲರೆದುರು ತಮ್ಮ ಪ್ರೀತಿಯ ಗೆಳತಿಯ ಕೈ ಹಿಡಿದು ಮುತ್ತಿಟ್ಟರು.
ಈ ಅನಿರೀಕ್ಷಿತ ಮತ್ತು ಪ್ರಾಮಾಣಿಕವಾದ ಪ್ರೀತಿಯ ಪ್ರದರ್ಶನಕ್ಕೆ ನಟಿ ರಶ್ಮಿಕಾ ಮುಜುಗರದಿಂದ ನಕ್ಕರು. ಅಲ್ಲಿ ನೆರೆದಿದ್ದ ಅಭಿಮಾನಿಗಳಿಂದ ಜೋರಾದ ಹರ್ಷೋದ್ಗಾರ ಕೇಳಿಬಂದಿತು ಮತ್ತು ಈ ವಿಡಿಯೊ ತುಣುಕು ತಕ್ಷಣವೇ ಆನ್‌ಲೈನ್‌ನಲ್ಲಿ ವೈರಲ್ ಆಗಿ ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
ಫೆಬ್ರವರಿ 2026ರಲ್ಲಿ ವಿವಾಹ?
ಖಾಸಗಿ ನಿಶ್ಚಿತಾರ್ಥದ ನಂತರ, ಈ ಪ್ರೇಮಿಗಳು ಮುಂದಿನ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಜೋರಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಈ ತಾರೆ ಜೋಡಿ ಫೆಬ್ರವರಿ 26, 2026 ರಂದು ರಾಜಸ್ಥಾನದ ಉದಯಪುರದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮೂಲಕ ವಿವಾಹವಾಗಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

