'45' ಸಿನಿಮಾದ 'AFRO ಟಪಾಂಗ್' ಮೇಕಿಂಗ್ ವಿಡಿಯೋ ಔಟ್
ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಈ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಎಂ.ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿ ಬಿಗ್ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.
ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟ ರಾಜ್ ಬಿ. ಶೆಟ್ಟಿ ನಟಿಸಿರುವ '45' ಸಿನಿಮಾದ 'AFRO ಟಪಾಂಗ್' ಶೀರ್ಷಿಕೆ ಹಾಡಿನ ಮೇಕಿಂಗ್ ವಿಡಿಯೊ ಬಿಡುಗಡೆ ಆಗಿದೆ.
ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಈ ಚಿತ್ರದ ಮೂಲಕ ಚೊಚ್ಚಲ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಎಂ.ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿ ಬಿಗ್ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ 'AFRO ಟಪಾಂಗ್' ಹಾಡು ಭಾರೀ ಸದ್ದು ಮಾಡಿತ್ತು. ಇದರ ಮೇಕಿಂಗ್ ವಿಡಿಯೊ ಕೂಡ ಈಗ ಅನಾವರಣಗೊಂಡಿದೆ. '45' ಚಿತ್ರದಲ್ಲಿ ಈ ಒಂದೇ ಪ್ರಮೋಷನಲ್ ಸಾಂಗ್ ಇರಲಿದೆ. ಉಗಾಂಡದ ಹೆಸರಾಂತ ನೃತ್ಯ ತಂಡ 'ಜಿಟೊ ಕಿಡ್ಸ್' ಇದೇ ಮೊದಲ ಬಾರಿಗೆ ಈ ಹಾಡಿನ ಮೂಲಕ ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟಿದೆ. ಇದು ಅವರ ಮೊದಲ ಭಾರತೀಯ ಸಿನಿಮಾ ಪ್ರಾಜೆಕ್ಟ್ ಆಗಿದೆ. ಎಂ.ಸಿ.ಬಿಜ್ಜು ಹಾಡಿಗೆ ಸಾಹಿತ್ಯ ಬರೆದು ಹಾಡಿದ್ದರೆ, ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಹಾಲಿವುಡ್ ಗುಣಮಟ್ಟದ ತಂತ್ರಜ್ಞಾನ
'45' ಸಿನಿಮಾ ತಾಂತ್ರಿಕವಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಭಾರತದಲ್ಲೇ ಅತ್ಯಧಿಕ ಸಿಜಿ (VFX) ಅಳವಡಿಸಿರುವ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅನೇಕ ಹಾಲಿವುಡ್ ಪ್ರಾಜೆಕ್ಟ್ಗಳಿಗೆ ಕೆಲಸ ಮಾಡಿರುವ ಕೆನಡಾದ ಪ್ರತಿಷ್ಠಿತ ಸಂಸ್ಥೆ ʻMARZʼ ಈ ಚಿತ್ರಕ್ಕೆ ವಿ.ಎಫ್.ಎಕ್ಸ್ ಒದಗಿಸಿದೆ. ಹಾಲಿವುಡ್ನ ಖ್ಯಾತ ತಂತ್ರಜ್ಞರಿಂದ ಸಿಜಿ (ಕಂಪ್ಯೂಟರ್ ಗ್ರಾಫಿಕ್ಸ್) ಕೆಲಸಗಳು ನಡೆದಿವೆ.
ಸಂಗೀತದ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರುವ ಅರ್ಜುನ್ ಜನ್ಯ ಅವರು, ನಾನು ನಿರ್ದೇಶಕನಾಗಲು ಶಿವರಾಜ್ಕುಮಾರ್ ಅವರೇ ಕಾರಣ ಎಂದು ತಿಳಿಸಿದ್ದರು. ಇದಕ್ಕೆ ಶಿವಣ್ಣ, ಅರ್ಜುನ್ ಜನ್ಯ ಅವರು ಕಥೆ ಹೇಳಿದಾಗ ನೀವೇ ನಿರ್ದೇಶನ ಮಾಡಿ ಎಂದು ಹೇಳಿದ್ದೆ. ಈ ಹಾಡು ನೋಡಿದಾಗ ಅವರ ನಿರ್ದೇಶನದ ಸಾಮರ್ಥ್ಯ ತಿಳಿಯುತ್ತಿದೆ ಎಂದು ಗುಣಗಾನ ಮಾಡಿದ್ದಾರೆ.
ಅದ್ಧೂರಿ ತಾರಾಗಣ ಮತ್ತು ತಾಂತ್ರಿಕತೆಯನ್ನು ಹೊಂದಿರುವ ಈ ಬಹುನಿರೀಕ್ಷಿತ ಸಿನಿಮಾ ಡಿಸೆಂಬರ್ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.