'ಎಂದೆಂದೂ ನಿನ್ನನು ಮರೆತೂ...' ಎಂದ ಮಾಲಿವುಡ್‌ ನಟ ಮೋಹನ್ ಲಾಲ್: ವಿಡಿಯೋ ವೈರಲ್‌

ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ ಲಾಲ್‌ ಅವರು ಡಾ. ರಾಜ್‌ಕುಮಾರ್ ನಟನೆಯ ‘ಎರಡು ಕನಸು’ ಸಿನಿಮಾದ ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ..’ ಹಾಡನ್ನು ಗುನುಗುತ್ತಾ ಖುಷಿಪಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.;

Update: 2024-05-21 14:15 GMT
ನಟ ಮೋಹನ್‌ಲಾಲ್‌
Click the Play button to listen to article

ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ ಲಾಲ್‌ ಅವರು ಡಾ. ರಾಜ್‌ಕುಮಾರ್ ನಟನೆಯ ‘ಎರಡು ಕನಸು’ ಸಿನಿಮಾದ ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ..’ ಹಾಡು ಗುನುಗುತ್ತಾ ಎಂಜಾಯ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೋಹನ್ ಲಾಲ್ ಡಾ. ರಾಜ್‌ಕುಮಾರ್‌ ಸಿನಿಮಾಗಳು ಹಾಗೂ ಹಾಡುಗಳ ಅಭಿಮಾನಿ. ಹಾಗೂ ಡಾ. ರಾಜ್‌ಕುಮಾರ್‌ ಅವರೊಂದಿಗೆ ಉತ್ತಮ ಒಡನಾಟ ಇತ್ತು. ಇದೀಗ ನಟ ತಮ್ಮ ಮೊಬೈಲ್‌ನಲ್ಲಿ ಅಣ್ಣಾವ್ರ ಹಾಡು ನೋಡುತ್ತಾ ಗುನುಗಿರುವ ವೀಡಿಯೋ ವೈರಲ್ ಆಗುತ್ತಿದೆ. 'ಎರಡು ಕನಸು' ಚಿತ್ರದ 'ಎಂದೆಂದೂ ನಿನ್ನನು ಮರೆತು ಬದುಕಿರಲಾರೆ' ಹಾಡಿನ ವಿಡಿಯೋ ನೋಡುತ್ತಾ ಮೋಹನ್‌ ಲಾಲ್ ನೋಡಿ ಗುನುಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮೋಹನ್‌ ಲಾಲ್ ಅವರು ಮಲಯಾಳಂನಲ್ಲಿ ಜನಪ್ರಿಯ ನಟರಾಗಿದ್ದು, ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರಿಗೆ ಕನ್ನಡದಲ್ಲೂ ಅಭಿಮಾನಿಗಳು ಇದ್ದಾರೆ. ಅಪ್ಪು ಜೊತೆ ಮೈತ್ರಿ ಸಿನಿಮಾದಲ್ಲಿ ಮೋಹನ್ ಲಾಲ್ ಕನ್ನಡದಲ್ಲಿ ನಟಿಸಿದ್ದರು.

50 ವರ್ಷಗಳ ಹಿಂದೆ ತೆರೆಕಂಡ ದೊರೆ ಭಗವಾನ್ ನಿರ್ದೇಶನದ ʼಎರಡು ಕನಸುʼ ಚಿತ್ರದಲ್ಲಿ ರಾಜ್‌ಕುಮಾರ್ ಮತ್ತು ಮಂಜುಳಾ ಜೋಡಿಯಾಗಿದ್ದರು. ರಾಜನ್‌-ನಾಗೇಂದ್ರ ಸಂಗೀತದಲ್ಲಿ ಒಟ್ಟು 6 ಹಾಡುಗಳು ಮೋಡಿ ಬಂದಿದ್ದವು. ಪಿ. ಬಿ ಶ್ರೀನಿವಾಸ್ ಹಾಗೂ ವಾಣಿ ಜಯರಾಂ ಈ ಹಾಡಿಗೆ ದನಿಯಾಗಿದ್ದರು. 30 ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡಿದ್ದ 'ಎರಡು ಕನಸು' ಸಿನಿಮಾ 1982ರಲ್ಲಿ ರೀ ರಿಲೀಸ್ ಆಗಿ ಶತದಿನೋತ್ಸವ ಆಚರಿಸಿತ್ತು. 2015ರಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದು ಸಿನಿಮಾ ಗಮನ ಸೆಳೆದಿತ್ತು.

ಸದ್ಯ ನಟ ಮೋಹನ್‌ಲಾಲ್‌ ಕನ್ನಡದ ಹಾಡನ್ನು ಹಾಡುತ್ತಾ ಎಂಜಾಯ್‌ ಮಾಡುತ್ತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

Tags:    

Similar News