ʼಉತ್ತರಕಾಂಡʼದಲ್ಲಿ ಶಿವಣ್ಣಗೆ ಮತ್ತೆ ಜೋಡಿಯಾದ ಭಾವನಾ ಮೆನನ್
ಡಾಲಿ ಧನಂಜಯ್ ಮತ್ತು ಶಿವರಾಜಕುಮಾರ್ ಅಭಿನಯದ ಉತ್ತರಕಾಂಡ ಸಿನಿಮಾದಲ್ಲಿ ಭಾವನಾ ಮೆನನ್ ಮತ್ತೆ ಶಿವರಾಜ್‌ಕುಮಾರ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ;
ಡಾಲಿ ಧನಂಜಯ್ ಮತ್ತು ಶಿವರಾಜಕುಮಾರ್ ಅಭಿನಯದ ‘ಉತ್ತರಕಾಂಡ’ ಸಿನಿಮಾದಲ್ಲಿ ʼಟಗರುʼ ಮತ್ತು ʼಭಜರಂಗಿ 2ʼ ಖ್ಯಾತಿಯ ಭಾವನಾ ಮೆನನ್ ಮತ್ತೆ ಶಿವರಾಜ್‌ಕುಮಾರ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ರೋಹಿತ್ ಪದಕಿ ನಿರ್ದೇಶನದ ಚಿತ್ರಕ್ಕಾಗಿ ದಕ್ಷಿಣ ಭಾರತದ ನಟಿ ಐಶ್ವರ್ಯಾ ರಾಜೇಶ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಧನಂಜಯ್‌ಗೆ ಜೋಡಿಯಾಗಿ ನಟಿ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಉತ್ತರಕಾಂಡ ಚಿತ್ರತಂಡ ಸೇರಿದ ಉಮಾಶ್ರೀ
ʼಉತ್ತರಕಾಂಡʼದಲ್ಲಿ ಚೈತ್ರಾ ಆಚಾರ್ ಅವರಿಗೆ ಜೋಡಿಯಾಗಿ ನಟ ದಿಗಂತ್ ಮಲ್ಲಿಗೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ನಿರ್ದೇಶಕ-ನಟ ಯೋಗರಾಜ್ ಭಟ್ ಅವರನ್ನು ಪಾಟೀಲ ಪಾತ್ರಕ್ಕಾಗಿ ಮತ್ತು ಗೋಪಾಲ್ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಹಿಂದೆ ಕೆಆರ್‌ಜಿ ಸ್ಟುಡಿಯೋಸ್ ಮತ್ತು ರೋಹಿತ್ ಪದಕಿ ಅವರ ʼರತ್ನನ್ ಪ್ರಪಂಚʼ ಚಿತ್ರದಲ್ಲಿ ನಟಿಸಿದ್ದ ಹಿರಿಯ ನಟಿ ಉಮಾಶ್ರೀ ʼಉತ್ತರಕಾಂಡʼ ಚಿತ್ರತಂಡ ಸೇರಿದ್ದಾರೆ. ಅವರು ʼಉತ್ತರಕಾಂಡʼದಲ್ಲಿ ಪಂಡರಿ ಭಾಯಿ ಪಾತ್ರ ನಿರ್ವಹಿಸಲಿದ್ದಾರೆ. ಚಿತ್ರತಂಡದ ಪ್ರಕಾರ, ಉಮಾಶ್ರೀ ಚಿತ್ರದಲ್ಲಿ ಅಜ್ಜಿ ಪಾತ್ರದಲ್ಲಿ ನಟಿಸುತ್ತಿದ್ದು, ಇದೊಂದು ಕುತೂಹಲಕಾರಿ ಪಾತ್ರವಾಗಿದ್ದು, ʼಉತ್ತರಕಾಂಡʼದ ಹೈಲೈಟ್‌ಗಳಲ್ಲಿ ಒಂದಾಗಲಿದೆ ಎನ್ನಲಾಗಿದೆ.
ಉತ್ತರಕಾಂಡ ಸಿನಿಮಾದಲ್ಲಿ ಉಮಾಶ್ರೀ
ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದ ಮೂಲಕ ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಾಹಕರಾಗಿದ್ದಾರೆ.