'ದಿ ಡೆವಿಲ್' ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್‌| ಫಸ್ಟ್‌ ಡೇ ಕಲೆಕ್ಷನ್‌ ಎಷ್ಟು ಗೊತ್ತಾ?

'ದಿ ಡೆವಿಲ್' ಉತ್ತಮ ಆರಂಭ ಪಡೆದಿದ್ದರೂ, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಿದ್ದರೆ ಡೆವಿಲ್‌ ಮೊದಲ ದಿನದ ಕಲೆಕ್ಷನ್‌ ಎಷ್ಟಾಗಿದೆ? ಇಲ್ಲಿದೆ ಡಿಟೇಲ್ಸ್‌

Update: 2025-12-12 07:48 GMT
ಡೆವಿಲ್‌ ಚಿತ್ರದ ಪೋಸ್ಟರ್‌
Click the Play button to listen to article

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಕನ್ನಡ ಚಿತ್ರ 'ದಿ ಡೆವಿಲ್' ಡಿಸೆಂಬರ್ 11 ರಂದು ರಾಜ್ಯಾದ್ಯಂತ ತೆರೆ ಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ನಿಧಾನವಾಗಿ ಆದರೆ ಸ್ಥಿರವಾದ ಆರಂಭವನ್ನು ಪಡೆದಿದೆ. ವರದಿಗಳ ಪ್ರಕಾರ, ಈ ಸಿನಿಮಾ ಮೊದಲ ದಿನ 10 ಕೋಟಿ ರೂ.ಕಲೆಕ್ಷನ್‌ ಮೂಲಕ ಆರಂಭ ಕಂಡಿದೆ. 

ಪಿವಿಆರ್, ಐನಾಕ್ಸ್ ಸೇರಿದಂತೆ ಬಹುತೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರ ಕನಿಷ್ಠ 500 ರೂಪಾಯಿ ಇಂದ ಆರಂಭ ಆಗಿತ್ತು. ಏಕಪರದೆಯಲ್ಲಿ 400 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿತ್ತು. ದಿ ಡೆವಿಲ್ ಡೇ 1 ಕನ್ನಡ (2D) ಚಿತ್ರಮಂದಿರಗಳಲ್ಲಿ , ಬೆಳಗ್ಗೆ ಪ್ರದರ್ಶನಗಳು: 60.44%, ಮಧ್ಯಾಹ್ನ ಪ್ರದರ್ಶನಗಳು: 51.74%, ಸಂಜೆ ಪ್ರದರ್ಶನಗಳು: 63.47% ರಾತ್ರಿ ಪ್ರದರ್ಶನಗಳು: 79.34% ಆಗಿವೆ.

ನಗರವಾರು ಅಂಕಿಅಂಶಗಳನ್ನು ಗಮನಿಸಿದರೆ, ಮೈಸೂರು ನಗರದಲ್ಲಿ ಈ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೈಸೂರಿನಲ್ಲಿ ಶೇ. 88.75 ರಷ್ಟು ಆಕ್ಯುಪೆನ್ಸಿ ದಾಖಲಾಗಿದ್ದು, ರಾತ್ರಿ ಪ್ರದರ್ಶನಗಳಲ್ಲಿ ಶೇ. 95 ರ ಗರಿಷ್ಠ ಮಟ್ಟವನ್ನು ತಲುಪಿರುವುದು ಮೈಸೂರಿನ ಪ್ರೇಕ್ಷಕರ ಉತ್ಸಾಹವನ್ನು ತೋರಿಸುತ್ತದೆ. ಅದೇ ರೀತಿ, ಮಂಗಳೂರು ಮತ್ತು ಮಣಿಪಾಲ್‌ನಂತಹ ಸ್ಥಳಗಳಲ್ಲಿ ಪ್ರೇಕ್ಷಕರ ಹಾಜರಾತಿ ಕಡಿಮೆಯಾಗಿತ್ತು. ಒಟ್ಟಾರೆ, ಮೈಸೂರು ಈ ಚಿತ್ರದ ಬಗ್ಗೆ ಅತಿ ಹೆಚ್ಚು ಉತ್ಸಾಹ ತೋರಿದ ನಗರವಾಗಿ ಹೊರಹೊಮ್ಮಿದೆ.

'ದಿ ಡೆವಿಲ್' ಉತ್ತಮ ಆರಂಭ ಪಡೆದಿದ್ದರೂ, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬ ಪ್ರೇಕ್ಷಕರು ಚಿತ್ರದ ಮೊದಲಾರ್ಧವನ್ನು ಸಾಮಾನ್ಯ ರಾಜಕೀಯ ಕಥೆ ಎಂದು ಬಣ್ಣಿಸಿದ್ದು, ಭಾವನಾತ್ಮಕ ಆಳವನ್ನು ಸೃಷ್ಟಿಸಲು ಚಿತ್ರವು ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಮುಂಗಡ ಬುಕಿಂಗ್‌ನಲ್ಲೇ 7 ಕೋಟಿ ರೂ. ದಾಖಲೆ 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಬಿಡುಗಡೆಗೂ ಮುನ್ನವೇ ಭರ್ಜರಿ ಗಳಿಕೆ ಮಾಡಿತ್ತು. ಮುಂಗಡ ಬುಕಿಂಗ್‌ನಲ್ಲೇ ಚಿತ್ರವು 7 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಗಳಿಸಿತ್ತು. ಚಿತ್ರ ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್ 1 ಕೋಟಿ ಗಡಿಯನ್ನು ದಾಟಿ, ನಂತರ ಬಹುಕೋಟಿ ಗಡಿ ತಲುಪಿದೆ ಎಂದು ವ್ಯಾಪಾರ ವಿಶ್ಲೇಷಕರು ತಿಳಿಸಿದ್ದರು. 

'ದಿ ಡೆವಿಲ್' ಚಿತ್ರ ಕಥಾವಸ್ತು

'ದಿ ಡೆವಿಲ್' ಆಕ್ಷನ್ ಚಲನಚಿತ್ರವಾಗಿದ್ದು, ಪ್ರಕಾಶ್ ಅವರು ಬರೆದು ನಿರ್ದೇಶಿಸಿದ್ದಾರೆ. ಇದರಲ್ಲಿ ದರ್ಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀ ಜೈಮಾತಾ ಕಂಬೈನ್ಸ್ ಮತ್ತು ವೈಷ್ಣೋ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ರಾಜಕೀಯ ಪಿತೂರಿ, ಪ್ರತೀಕಾರದ ಕಥೆ ಮತ್ತು ಸಾಂಪ್ರದಾಯಿಕ ಪ್ರಣಯದ ಅಂಶಗಳನ್ನು ಒಳಗೊಂಡಿದೆ. 

ಈ ಸಿನಿಮಾದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್ ಮತ್ತು ಶರ್ಮಿಳಾ ಮಾಂಡ್ರೆ ಇದ್ದಾರೆ.  ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಸುಧಾಕರ್ ಎಸ್. ರಾಜ್ ಅವರ ಛಾಯಾಗ್ರಹಣ ಇದೆ. 

Tags:    

Similar News