The Devil Movie : ದರ್ಶನ್ ಚಿತ್ರದಲ್ಲಿ ಬಿಗ್‌ಬಾಸ್‌ ಸ್ಪರ್ಧಿ ಗಿಲ್ಲಿ ನಟ ಕಾಮಿಡಿ ಧಮಾಕಾ! ಆ ಡೈಲಾಗ್ ಫುಲ್ ವೈರಲ್!

11 Dec 2025 8:16 PM IST

ಸದ್ಯ ಸೋಶಿಯಲ್ ಮೀಡಿಯಾದಿಂದ ಹಿಡಿದು ಟಿವಿ ಪರದೆಯವರೆಗೆ ಎಲ್ಲೆಲ್ಲೂ ಒಂದೇ ಹೆಸರು, ಒಂದೇ ಹವಾ. ಅದು ಬೇರಾರೂ ಅಲ್ಲ, ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ 'ಗಿಲ್ಲಿ ನಟ'. ಬಿಗ್‌ಬಾಸ್‌ ಮನೆಯಲ್ಲಿ ತಮ್ಮ ನೇರ ನಡೆ-ನುಡಿ ಮತ್ತು ಹಾಸ್ಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಗಿಲ್ಲಿ, ಈಗ ಬೆಳ್ಳಿತೆರೆಯ ಮೇಲೂ ಧೂಳೆಬ್ಬಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ 'ಡೆವಿಲ್' ಚಿತ್ರದಲ್ಲಿ ಗಿಲ್ಲಿ ಒಂದು ಸ್ಪೆಷಲ್ ರೋಲ್‌ನಲ್ಲಿ ಮಿಂಚಿದ್ದಾರೆ.