Loksabha Election Results 2024| ಬಿಜೆಪಿ+ ಜೆಡಿಎಸ್‌ -19 , ಕಾಂಗ್ರೆಸ್- 9

Update: 2024-06-04 01:04 GMT
Live Updates - Page 5
2024-06-04 06:09 GMT

ಧಾರವಾಡ ಲೋಕಸಭಾ ಕ್ಷೇತ್ರ

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿ ಅವರು 342354 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 277232 ಮತಗಳನ್ನು ಪಡೆದಿದ್ದಾರೆ.

ಜೋಶಿ ಅವರು 65122 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

2024-06-04 06:08 GMT

ಕೊಪ್ಪಳ ಲೋಕಸಭಾ ಕ್ಷೇತ್ರ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಹಿನ್ನಡೆಯ ಬಳಿಕ ಮತ್ತೆ ಮುನ್ನಡೆ ಪಡೆದುಕೊಂಡಿದ್ದಾರೆ. ರಾಜಶೇಖರ 3,02,787 ಮತಗಳನ್ನು ಪಡೆದು 4,446 ಮತಗಳಲ್ಲಿ ಮುನ್ನಡೆ ಹೊಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ 2,98,341 ಮತಗಳನ್ನು ಪಡೆದಿದ್ದಾರೆ.

2024-06-04 04:54 GMT

ರಾಜ್ಯದ 28 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಬಿಜೆಪಿ, 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ 2 ಕ್ಷೇತ್ರಗಳಲ್ಲಿ ಜೆಡಿಎಸ್‌ ಮುನ್ನಡೆ ಸಾಧಿಸಿದೆ.

2024-06-04 04:44 GMT

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 42,156 ಮತಗಳ ಮುನ್ನಡೆ ಸಾಧಿಸಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ 76,198 ಮತ ಗಳಿಸಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ವರ 34,042 ಮತ ಗಳಿಸಿದ್ದಾರೆ.

2024-06-04 04:40 GMT

ಧಾರವಾಡ ಲೋಕಸಭಾ ಕ್ಷೇತ್ರ

ಪ್ರಲ್ಲಾದ ಜೋಶಿ (ಬಿಜೆಪಿ) - 33,579

ವಿನೋದ ಅಸೂಟಿ- 26,962

2024-06-04 04:39 GMT

ಹಾಸನ ಲೋಕಸಭಾ ಕ್ಷೇತ್ರ

ಪ್ರಜ್ವಲ್ ರೇವಣ್ಣ 76,767 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 73,295 ಮತ ಪಡೆದಿದ್ದಾರೆ.

2024-06-04 04:38 GMT

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ:

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕ್ಯಾ.ಬ್ರಿಜೆಶ್ ಚೌಟ 7582 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಮೊದಲ ಸುತ್ತಿನಲ್ಲಿ ಚೌಟ 18,181 ಮತ, ಕಾಂಗ್ರೆಸ್‌ನ ಪದ್ಮರಾಜ್' ಆರ್.ಪೂಜಾರಿ 10,599 ಮತ ಪಡೆದಿದ್ದಾರೆ.

2024-06-04 04:38 GMT

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ

ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು 36,394 ಮತಗಳನ್ನು ಪಡೆದಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು 28,211 ಮತಗಳನ್ನು ಪಡೆದಿದ್ದಾರೆ.

ಮಂಜುನಾಥ್ ಅವರು 8,183 ಮತಗಳ ಮುನ್ನಡೆ ಸಾಧಿಸಿದ್ದಾರೆ.

2024-06-04 04:36 GMT

ಶಿವಮೊಗ್ಗ ಲೋಕಸಭಾ ಚುನಾವಣೆ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಚಾಲನೆಯಲ್ಲಿದೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಗೀತಾ ಶಿವರಾಜ ಕುಮಾರ್ ಅವರಿಗಿಂತ 12,485 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿ.ವೈ.ರಾಘವೇಂದ್ರ 41,977, ಗೀತಾ ಶಿವರಾಜಕುಮಾರ್ 29,492 ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ 2,391 ಮತಗಳನ್ನು ಪಡೆದಿದ್ದಾರೆ.

2024-06-04 04:35 GMT

ದಾವಣಗೆರೆ ಲೋಕಸಭಾ ಕ್ಷೇತ್ರ

ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ 20,871 ಮತಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ 17,232 ಹಾಗೂ ಜಿ.ಬಿ.ವಿನಯ್ ಕುಮಾರ್ 2,383 ಮತಗಳನ್ನು ಪಡೆದಿದ್ದಾರೆ.

Tags:    

Similar News