Loksabha Election Results 2024| ಬಿಜೆಪಿ+ ಜೆಡಿಎಸ್‌ -19 , ಕಾಂಗ್ರೆಸ್- 9

ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಇಂದು ಬೆಳಿಗ್ಗೆ 8 ರಿಂದಲೇ ಮತ ಎಣಿಕೆ ಆರಂಭವಾಗಲಿದೆ. ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ʻದ ಫೆಡರಲ್‌ ಕರ್ನಾಟಕʼ ವೆಬ್‌ ಪೋರ್ಟಲ್‌ನಲ್ಲಿ ಲಭ್ಯ.

Update: 2024-06-04 01:04 GMT

ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಇಂದು ಬೆಳಿಗ್ಗೆ 8 ರಿಂದಲೇ ಮತ ಎಣಿಕೆ ಆರಂಭವಾಗಲಿದೆ.

ಮತ ಎಣಿಕೆ ಕಾರ್ಯಕ್ಕಾಗಿ ಚುನಾವಣಾ ಆಯೋಗ ವ್ಯಾಪಕ ತಯಾರಿ ಮಾಡಿಕೊಂಡಿದ್ದು, ಆಯಾ ಲೋಕಸಭಾ ಕ್ಷೇತ್ರಗಳ ಜಿಲ್ಲಾ ಕೇಂದ್ರಗಳಲ್ಲಿ ಮತಪೆಟ್ಟಿಗೆಗಳನ್ನು ಇಟ್ಟಿರುವ ಮತ ಎಣಿಕೆ ಕೇಂದ್ರಗಳಲ್ಲಿ ಬೆಳಿಗ್ಗೆ 8 ರಿಂದಲೇ ಮತ ಎಣಿಕೆ ಆರಂಭವಾಗಲಿದೆ. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠರ ನೇತೃತ್ವದಲ್ಲಿ ಮತ ಎಣಿಕೆ ಸುಸೂತ್ರವಾಗಿ ನಡೆಯಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವ್ಯಾಪಕ ಬಂದೋಬಸ್ತಿನ ಏರ್ಪಾಡು ಕೂಡ ಆಗಿದೆ.

Live Updates
2024-06-04 08:09 GMT

ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ, ನಮಗೆ ಸಮಾಧಾನ ತಂದಿಲ್ಲ: ಸಿಟಿ ರವಿ

ಎನ್ ಡಿಎ ಅಧಿಕಾರಕ್ಕೆ ಬರಲಿದ್ದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಫಲಿತಾಂಶ ನಮ್ಮ ನಿರೀಕ್ಷೆಯಂತೆ ಬಂದಿಲ್ಲ, ಒಟ್ಟಾರೆ ಫಲಿತಾಂಶ ಬಂದ ನಂತರ ಚರ್ಚೆ ನಡೆಸಲಿದ್ದೇವೆ. ನಮಗೆ ಸಮಾಧಾನ ತಂದಿಲ್ಲ ಪೂರ್ಣ ಫಲಿತಾಂಶದ ನಂತರ ಈ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದು ಬಿಜೆಪಿ ಮುಖಂಡ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಸ್ಪಷ್ಟ ಬಹುಮತ ಎನ್ ಡಿಎ ಗೆ ಇದೆ. ಅಜೆಂಡಾ ಇಟ್ಟುಕೊಂಡು ನಾವು ಚುನಾವಣೆ ಎದುರಿಸಿದ್ದೇವೆ. ಈಗಿನ ಫಲಿತಾಂಶ ನಾವು ನಿರೀಕ್ಷೆ ಮಾಡಿದಷ್ಟು ಬಂದಿಲ್ಲ. 16, 18 ಕರ್ನಾಟಕದಲ್ಲಿ ಸಾಮಾನ್ಯವಾಗಿ ಬಿಜೆಪಿ ಗಳಿಸುತ್ತಿರುವ ಸ್ಥಾನಗಳು ಪೂರ್ಣ ಫಲಿತಾಂಶದ ನಂತರ ಸ್ಪಷ್ಟತೆ ಸಿಗಲಿದೆ. ಮ್ಯಾಜೀಕ್ ನಂಬರ್ ತಲುಪಿದ್ದೇವೆ. ಅಪಪ್ರಚಾರ, ಜಾತಿ ವಿಭಜನೆ ಮಾಡುವುದು ಹೆಚ್ಚಾಗಿರಬಹುದು ಚರ್ಚಿಸುತ್ತೇವೆ. ಜೆಡಿಯು ಈಗಾಗಲೇ ಸ್ಪಷ್ಟನೆ ನೀಡಿದೆ. ಯಾರ ಮೇಲೂ ಅನುಮಾನ ಪಡಲು ಸಾಧ್ಯವಿಲ್ಲ. ಬೆಂ.ಗ್ರಾಮಾಂತರದಲ್ಲಿ ಜನ ಬಲ ಗೆದಿದ್ದೆ. ಕಾಂಗ್ರೆಸ್ ನವರು ಸೀರೆ ಹಾಗೂ ಹಣ ಹಂಚಿದರು ಆದರೆ, ಜನ ಬಿಜೆಪಿಯನ್ನು ಬೆಂಬಲಿಸಿದ್ದಾರೆ‌. ಮತ್ತೊಮ್ಮೆ ಮೋದಿ ಎನ್ನುವುದಕ್ಕೆ ಜನ ಮನ್ನಣೆ ಸಿಕ್ಕಿದೆʼʼ ಎಂದು ಹೇಳಿದ್ದಾರೆ.


2024-06-04 08:01 GMT

ಬಾಗಲಕೋಟೆ ಲೋಕಸಭಾ ಕ್ಷೇತ್ರ

ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಪಿಸಿ ಗದ್ದಿಗೌಡರ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಕಾಂಗ್ರೆಸ್ಸಿನ ಅಭ್ಯರ್ಥಿ, ಸಚಿವ ಶಿವಾನಂದ್‌ ಪಾಟೀಲ್‌ ಅವರ ಪುತ್ರಿ ಸಂಯುಕ್ತಾ ಪಾಟೀಲ್ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಗದ್ದಿಗೌಡರ್‌ ಅವರು ಐದನೇ ಬಾರಿ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದ್ದಾರೆ.

2024-06-04 07:49 GMT

NDAಗೆ ಕಡಿಮೆ ಸ್ಥಾನ: ಫಲಿತಾಂಶ ನೋಡಿ ಹೃದಯಾಘಾತದಿಂದ ವ್ಯಕ್ತಿ ಸಾವು

ಲೋಕಸಭಾ ಚುನಾವಣೆಯಲ್ಲಿ NDAಗೆ ಕಡಿಮೆ ಸ್ಥಾನ ಹಿನ್ನೆಲೆ ಫಲಿತಾಂಶ ನೋಡಿ ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟ ಘಟನೆ ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ನಡೆದಿದೆ. ಶಿವಪ್ರಕಾಶ್ ಹಿರೇಮಠ ಎಂಬ ವ್ಯಕ್ತಿ ಮೃತ ದುರ್ದೈವಿ. ಬಿಜೆಪಿ ಅಭಿಮಾನಿಯಾಗಿದ್ದ ಶಿವಪ್ರಕಾಶ್, ಮನೆಯಲ್ಲಿ ಟಿವಿ ನೋಡುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

2024-06-04 07:47 GMT

ಧಾರವಾಡ ಲೋಕಸಭಾ ಕ್ಷೇತ್ರ

ಧಾರವಾಡ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ, ಪ್ರಧಾನಿ ಮೋದಿ ಆಪ್ತ ಪ್ರಲ್ಹಾದ ಜೋಶಿ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಕಾಂಗ್ರೆಸ್ಸಿನ ವಿನೋದ್‌ ಅಸೂಟಿ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಸತತ ಐದನೇ ಬಾರಿಗೆ ಪ್ರಲ್ಹಾದ ಜೋಶಿ ಜಯ ದಾಖಲಿಸಿದ್ದಾರೆ.

2024-06-04 07:45 GMT

ಶಿವಮೊಗ್ಗ ಲೋಕಸಭಾ ಕ್ಷೇತ್ರ

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಪುತ್ರ ಬಿಜೆಪಿಯ ಬಿ ವೈ ರಾಘವೇಂದ್ರ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಸತತ ನಾಲ್ಕನೇ ಬಾರಿಗೆ  ರಾಘವೇಂದ್ರ ಗೆಲುವು ದಾಖಲಿಸಿದ್ದಾರೆ.

2024-06-04 07:43 GMT

ಚಾಮರಾಜನಗರ ಲೋಕಸಭಾ ಕ್ಷೇತ್ರ

ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ, ಸಚಿವ ಮಹದೇವಪ್ಪ ಪುತ್ರ ಬೋಸ್‌ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಬಿಜೆಪಿಯ ಬಾಲರಾಜ್‌ ವಿರುದ್ಧ ಜಯಭೇರಿ ಬಾರಿಸಿದ್ದಾರೆ.

2024-06-04 07:38 GMT

ಕೊಪ್ಪಳ ಲೋಕಸಭಾ ಕ್ಷೇತ್ರ

ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ರಾಜಶೇಖರ್‌ ಹಿಟ್ನಾಳ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಬಿಜೆಪಿಯ ಡಾ.ಬಸವರಾಜ ಶರಣಪ್ಪ ಕ್ಯಾವಟರ್ ವಿರುದ್ಧ ಜಯಭೇರಿ ಬಾರಿಸಿದ್ದಾರೆ

2024-06-04 07:31 GMT

ತುಮಕೂರು ಲೋಕಸಭಾ ಕ್ಷೇತ್ರ

ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಬಿಜೆಪಿಯ ವಿ ಸೋಮಣ್ಣ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಕಾಂಗ್ರೆಸ್ಸಿನ ಕಾಂಗ್ರೆಸ್ಸಿನ ಮುದ್ದುಹನುಮೇಗೌಡ ವಿರುದ್ಧ ಜಯಭೇರಿ ಬಾರಿಸಿದ್ದಾರೆ.

2024-06-04 07:29 GMT

ಮೂವರೂ ಮಾಜಿ ಸಿಎಂ ಜಯಭೇರಿ

ಈ ಬಾರಿ ಲೋಕಸಭಾ ಕಣಕ್ಕಿಳಿದಿದ್ದ ರಾಜ್ಯದ ಮೂವರೂ ಮಾಜಿ ಮುಖ್ಯಮಂತ್ರಿಗಳು ಜಯ ಗಳಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿಗಳಾಗಿದ್ದ ಬಸವರಾಜ ಬೊಮ್ಮಾಯಿ(ಹಾವೇರಿ ಕ್ಷೇತ್ರ) ಮತ್ತು ಜಗದೀಶ್‌ ಶೆಟ್ಟರ್(ಬೆಳಗಾವಿ ಕ್ಷೇತ್ರ) ಹಾಗೂ ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿ(ಮಂಡ್ಯ ಲೋಕಸಭಾ ಕ್ಷೇತ್ರ) ತಮ್ಮ ಎದುರಾಳಿ ಕಾಂಗ್ರೆಸ್‌ ಅಭ್ಯರ್ಥಿಗಳ ವಿರುದ್ಧ ಜಯಗಳಿಸಿ ಲೋಕಸಭೆಗೆ ಪ್ರವೇಶಿಸಿದ್ದಾರೆ.

2024-06-04 07:26 GMT

ಹಾವೇರಿ ಲೋಕಸಭಾ ಕ್ಷೇತ್ರ

ಹಾವೇರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಕಾಂಗ್ರೆಸ್ಸಿನ ಆನಂದ ಸ್ವಾಮಿ ಗಡ್ಡದೇವರ ಮಠ ವಿರುದ್ಧ ಜಯಭೇರಿ ಬಾರಿಸಿದ್ದಾರೆ.

Tags:    

Similar News