ವಿಜಯೋತ್ಸವ ಮೆರವಣಿಗೆ | ಟೀಮ್ ಇಂಡಿಯಾ ಅಭಿಮಾನಿಗಳ ಸಾಗರದಿಂದ ಸ್ತಬ್ಧಗೊಂಡ ಮುಂಬೈ
ವಾಂಖೇಡೆ ಕೀಡಾಂಗಣದಲ್ಲಿ ನಡೆದ ವಿಜಯೋತ್ಸವವನ್ನು ಆಚರಿಸಲು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಭಾರಿ ಮಳೆ, ಕಾರ್ಯಕ್ರಮದ ವಿಳಂಬ ಇದ್ಯಾವುದೂ ಜನರ ಉತ್ಸಾಹವನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ.;
ದಕ್ಷಿಣ ಮುಂಬೈಯ ಮರೈನ್ ಡ್ರೈವ್‌ನಲ್ಲಿ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಗೆಲುವಿನ ಮೆರವಣಿಗೆಯು ಜನರು-ವಾಹನ ಸಂಚಾರವನ್ನು ಸ್ತಬ್ಧಗೊಳಿಸಿತು. ಸಾವಿರಾರು ಉತ್ಸಾಹಿ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ದರ್ಶನ ಪಡೆಯಲು ಜಮಾಯಿಸಿದ್ದರು. ಎರಡು ಗಂಟೆ ತಡವಾಗಿ ನಡೆದ ಆರಂಭಗೊಂಡ ಬಸ್ ಮೆರವಣಿಗೆಯು ನಾರಿಮನ್ ಪಾಯಿಂಟ್‌ನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (ಎನ್‌ಸಿಪಿಎ) ನಿಂದ ಸಂಜೆ 7:30 ಕ್ಕೆ ಪ್ರಾರಂಭವಾಗಿ, ವಾಂಖೇಡೆ ಕ್ರೀಡಾಂಗಣಕ್ಕೆ ತೆರಳಿತು.
ಐದು ನಿಮಿಷದಲ್ಲಿ ಕ್ರಮಿಸಬಹುದಾದ ದೂರವನ್ನುಸಾಗಲು ಒಂದು ಗಂಟೆಗೂ ಅಧಿಕ ಕಾಲ ತೆಗೆದುಕೊಂಡಿತು. ಆಟಗಾರರು ಅಭಿಮಾನಿಗಳ ಸಹಜ ಪ್ರೀತಿಯಲ್ಲಿ ತೊಯ್ದುಹೋದರು. ರೋಹಿತ್ ಶರ್ಮಾ 2007 ರಲ್ಲಿ ಮಹೇಂದ್ರ ಸಿಂಗ್ ಧೋನಿಯವರ ತಂಡದ ಕಿರಿಯ ಸದಸ್ಯರಾಗಿ ದ್ದರು. ರೋಹಿತ್ ತಮ್ಮ 37 ನೇ ವಯಸ್ಸಿನಲ್ಲಿ ಟಿ20 ವಿಶ್ವ ಚಾಂಪಿಯನ್ ಭಾರತೀಯ ಕ್ರಿಕೆಟ್ ತಂಡವನ್ನು ವಿಜಯ ಪರೇಡ್‌ನಲ್ಲಿ ಮುನ್ನಡೆ ಸುತ್ತಿರುವುದು ಅತಿ ಸಂತೋಷವನ್ನು ನೀಡಿರಬೇಕು.
ಅವರು ಈಗ ಪ್ರಸ್ತುತ ತಂಡದ ಅತ್ಯಂತ ಹಳೆಯ ಸದಸ್ಯ. ಒಂದೂವರೆ ದಶಕಗಳಲ್ಲಿ ಅವರ ಸುತ್ತಲಿನವರು ಬದಲಾದಲೂ, ಈಗ ನಿವೃತ್ತರಾಗಿರುವ ರೋಹಿತ್, ಸ್ಥಿರವಾಗಿ ನಿಂತರು. ಬಸ್ ಜನಸಾಗರದ ಮೂಲಕ ಹಾದು ಹೋದಂತೆ, ಗುರುವಾರ ಸಂಜೆಯಂತೆಯೇ 2007 ರ ಸೆಪ್ಟೆಂಬರ್ ಬೆಳಗಿನ ಘಟನೆಗಳು ಅವರ ಮನಸ್ಸಿನಲ್ಲಿ ಹಾದು ಹೋಗಿರಬೇಕು.
ʻಮುಂಬೈಚಾ ರಾಜಾ ಕೌನ್? ರೋಹಿತ್ ಶರ್ಮಾʼ (ಮುಂಬೈನ ರಾಜ ಯಾರು? ರೋಹಿತ್ ಶರ್ಮಾ) ಎಂಬ ಘೋಷಣೆಗಳು ರಸ್ತೆಗಳಲ್ಲಿ ಪ್ರತಿಧ್ವನಿಸಿತು.
ರೋಹಿತ್ ಕ್ರೀಡಾಂಗಣದೊಳಗೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರೋಹಿತ್, ʻಗೆಲ್ಲಬೇಕೆಂಬ ನಮ್ಮ ಅಭಿಲಾಷೆಯು ಅಭಿಮಾನಿಗಳು ಹೊಂದಿದ್ದ ಅಭಿಲಾಷೆಯನ್ನು ಹೋಲುತ್ತದೆ ಎಂದು ಜನಸಮೂಹ ಹೇಳುತ್ತದೆ. ಈ ಗೆಲುವು ಕೋಟ್ಯಂತರ ಜನರ ಮುಖದಲ್ಲಿ ನಗುವನ್ನು ತಂದಿದೆ. ಇದು ವಿಶೇಷ ತಂಡ ಮತ್ತು ಈ ಟ್ರೋಫಿಯು ರಾಷ್ಟ್ರಕ್ಕೆ ಸೇರಿದೆ,ʼ ಎಂದು ಹೇಳಿದರು.
ಹಾರ್ದಿಕ್ ಪಾಂಡ್ಯ ಅವರು ಟ್ರೋಫಿಯನ್ನು ಎತ್ತಿಹಿಡಿದು ಅಭಿಮಾನಿಗಳಿಗೆ ತೋರಿಸಿದರು. ಒಂದು ಕಾಲದಲ್ಲಿ 'ಮುಂಬೈ ಇಂಡಿಯನ್' ಎಂದು ಗೇಲಿ ಮಾಡಿದವರು, 'ಇಂಡಿಯನ್' ಎಂದು ಹರ್ಷೋದ್ಗಾರ ಮಾಡಿದರು. ಮುಂಬೈ ಯನ್ನು ತನ್ನ ಮನೆಯನ್ನಾಗಿ ಮಾಡಿಕೊಂಡಿ ರುವ ಬರೋಡಾ ಬಾಂಬರ್ ಗೆ 'ಮ್ಯಾಕ್ಸಿಮಮ್ ಸಿಟಿ' ಗರಿಷ್ಠ ಪ್ರೀತಿಯನ್ನು ನೀಡಲು ಸಿದ್ಧವಾಗಿತ್ತು.
ಕ್ರೀಡಾಂಗಣದಲ್ಲಿ ನೆರೆದ ಅಭಿಮಾನಿಗಳು: ವಾಂಖೇಡೆ ಸ್ಟೇಡಿಯಂನ ಸ್ಟ್ಯಾಂಡ್‌ಗಳು ಅಭಿಮಾನಿಗಳಿಂದ ತುಂಬಿ ತುಳುಕಿದವು. ಸಂಜೆ 5 ಗಂಟೆ ಸುಮಾರಿಗೆ ಮುಚ್ಚಿದ ಪ್ರವೇಶದ್ವಾರದ ಹೊರಗೆ ಸಾವಿರಾರು ಜನ ಕಾಯುತ್ತಿದ್ದರು.
ಆಗಾಗ ಸುರಿದ ಮಳೆ, ವಿಪರೀತ ಆರ್ದ್ರತೆ ಮತ್ತು ಸುತ್ತಮುತ್ತಲಿನ ಗೊಂದಲಗಳ ನಡುವೆ ಗೇಟ್ ಮುಚ್ಚಲ್ಪಟ್ಟಿದ್ದರಿಂದ, ವಾಂಖೇಡೆಯಲ್ಲಿ ಸ್ಥಳಾವಕಾಶ ಸಿಕ್ಕವರು ಆಹಾರ ಮತ್ತು ನೀರಿನ ಕೊರತೆಯಿದ್ದರೂ ಆಸನ ಬಿಟ್ಟು ಮೇಲೇಳಲಿಲ್ಲ.
ಭಾರೀ ಮಳೆಯಲ್ಲೇ ಸ್ಟ್ಯಾಂಡ್‌ನಲ್ಲಿ ತಮ್ಮ ಸ್ಥಾನದಲ್ಲಿ ಕುಳಿತುಕೊಳ್ಳಲು ಅಭಿಮಾನಿಗಳು ಓಡಿದಾಗ, ಹಲವರು ಪಾದರಕ್ಷೆಗಳನ್ನು ಕಳೆದುಕೊಂಡರು.ಕಾಯುವಿಕೆ ಮುಂದುವರಿದು, ಮಳೆ ಆಗಾಗ ಬಿಡುವುದು ಕೊಟ್ಟು ಸುರಿಯುತ್ತಲೇ ಇತ್ತು. ಆದರೆ, ಅಭಿಮಾನಿಗಳು ಕ್ರೀಡಾಂಗಣದ ಒಳಗೆ ತಮ್ಮ ಆಸನ ಬಿಟ್ಟು ಮೇಲೇಳಲಿಲ್ಲ.
ಡಿಜೆಯಿಂದ ಎಲ್ಲ ಜಾಯಮಾನಗಳ ಹಾಡುಗಳ ಮೂಲಕ ಮನರಂಜನೆ ನೀಡುತ್ತಿದ್ದರು; ಮಳೆಯಿಂದಾಗಿ ವಾಂಖೇಡೆಯಲ್ಲಿ ರೇನ್ ಡ್ಯಾನ್ಸ್ ನಡೆಯುತ್ತಿರುವಂತೆ ಭಾಸವಾಯಿತು. ಸ್ಟೇಡಿಯಂನ ಸ್ಪೀಕರ್‌ಗಳು ವೆಂಗಾಬಾಯ್ಸ್ ತಂಡದ ಯಶಸ್ವಿ ಹಾಡು 'ಟು ಬ್ರೆಜಿಲ್' ಮತ್ತು ʻಚಕ್ ದೇ ಇಂಡಿಯಾʼ ಹಾಡು ಮೊಳಗಿತು. ಆನಂತರ ವಾಂಖೇಡೆ 'ಸಚಿನ್... ಸಚಿನ್', 'ಮುಂಬೈಚಾ ರಾಜಾ, ರೋಹಿತ್ ಶರ್ಮಾʼ ಮತ್ತು 'ಇಂಡಿಯ...ಇಂಡಿಯʼ ಘೋಷಣೆಗಳಿಂದ ಮಾರ್ದನಿಸಿತು.