Tirupati Laddu Controversy | ಪರೀಕ್ಷೆ ಸೌಲಭ್ಯ ಕೊರತೆಯ ದುರ್ಬಳಕೆ: ಟಿಟಿಡಿ

ದೇವಸ್ಥಾನದಲ್ಲಿ ಪ್ರಯೋಗಾಲಯ ಇಲ್ಲದೆ ಇರುವುದು, ಪರೀಕ್ಷೆಗೆ ಹೊರಗಿನ ಪ್ರಯೋಗಾಲಯಗಳಿಗೆ ಕಳುಹಿಸುವುದು ಮತ್ತು ಅಸಮರ್ಥನೀಯ ದರ. ಪೂರೈಕೆದಾರರು ಈ ಕೊರತೆಗಳನ್ನು ಬಳಸಿಕೊಂಡಿದ್ದಾರೆ ಎಂದು ಟಿಟಿಡಿ ಇಒ ವಿವರಿಸಿದರು.

Update: 2024-09-20 11:19 GMT

ತುಪ್ಪದ ಪರೀಕ್ಷೆ ಸೌಲಭ್ಯದ ಕೊರತೆಯನ್ನು ಪೂರೈಕೆದಾರರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಶುಕ್ರವಾರ (ಸೆಪ್ಟೆಂಬರ್ 20) ಹೇಳಿದೆ. 

ದೇವಾಲಯದಲ್ಲಿ ಕಲಬೆರಕೆ ಪರೀಕ್ಷೆ ಸೌಲಭ್ಯದ ಕೊರತೆಯಿದ್ದು, ಹೊರಗಿನ ಸೌಲಭ್ಯಗಳನ್ನು ಬಳಸಿಕೊಂಡಿಲ್ಲ.ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇರುವುದನ್ನು ಪ್ರಯೋಗಾಲಯದ ಪರೀಕ್ಷೆಗಳು ಬಹಿರಂಗಪಡಿಸಿವೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲಾ ರಾವ್ ತಿಳಿಸಿದ್ದಾರೆ. 

ತುಪ್ಪದ ಗುಣಮಟ್ಟ ಕುಸಿತ

ತಿರುಪತಿ ಲಡ್ಡು ತಯಾರಿಸಲು ಬಳಸುವ ತುಪ್ಪದ ಗುಣಮಟ್ಟದ ಬಗ್ಗೆ ಮಾತನಾಡಿ, ಪೂರೈಕೆಯಾಗುತ್ತಿರುವ ತುಪ್ಪದ ಗುಣಮಟ್ಟ ತೀವ್ರವಾಗಿ ಕುಸಿದಿದೆ ಎಂದು ಹೇಳಿದರು. 

ʻಇದಕ್ಕೆ ಕಾರಣವೆಂದರೆ ದೇವಸ್ಥಾನದಲ್ಲಿ ಪ್ರಯೋಗಾಲಯ ಇಲ್ಲದೆ ಇರುವುದು, ಪರೀಕ್ಷೆಗೆ ಹೊರಗಿನ ಪ್ರಯೋಗಾಲಯಗಳಿಗೆ ಕಳುಹಿಸುವುದು ಮತ್ತು ಅಸಮರ್ಥನೀಯ ದರ. ಪೂರೈಕೆದಾರರು ಈ ಕೊರತೆಗಳನ್ನು ಬಳಸಿಕೊಂಡಿದ್ದಾರೆʼ ಎಂದು ಇಒ ವಿವರಿಸಿದರು. 

ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆ

 ಸಿಎಂ ನಾಯ್ಡು ಅವರು ಈ ಹಿಂದೆ ತುಪ್ಪ ಹಾಗೂ ಲಡ್ಡುವಿನ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಸಿಹಿತಿಂಡಿಯಲ್ಲಿ ಪ್ರಾಣಿಗಳ ಕೊಬ್ಬು ಇರುವ ಬಗ್ಗೆ ದೂರುಗಳನ್ನು ಎತ್ತಿ ತೋರಿಸಿದ್ದರು ಎಂದು ರಾವ್ ತಿಳಿಸಿದರು.

ಆನಂತರ ಸರಬರಾಜುದಾರರಿಗೆ ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಲಾಗಿತ್ತು. ನಾಲ್ಕು ಟ್ರಕ್ ತುಪ್ಪದ ಗುಣಮಟ್ಟಕಡಿಮೆ ಇದೆ ಎಂದು ಕಂಡುಬಂದ ನಂತರ ವಿಶ್ಲೇಷಣೆಗೆ ಕಳುಹಿಸಲಾಗಿದೆ.

ಒಂದೇ ರೀತಿಯ ಫಲಿತಾಂಶ

ತುಪ್ಪದಲ್ಲಿ ಹಂದಿ ಕೊಬ್ಬು ಮಿಶ್ರವಾಗಿದೆ ಎಂದು ನಾಲ್ಕು ವರದಿಗಳೂ ತಿಳಿಸಿವೆ. ನಾವು ತಕ್ಷಣವೇ ಸರಬರಾಜು ನಿಲ್ಲಿಸಿದ್ದೇವೆ. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಮತ್ತು ದಂಡ ವಿಧಿಸುವಿಕೆಯನ್ನು ಆರಂಭಿಸಲಾಗುವುದು. ಈಗ, ಕಾನೂನು ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಹೇಳಿದರು.

Tags:    

Similar News