Maha Kumbh 2025 : ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ, ಐವರು ಮಕ್ಕಳು ಸೇರಿ 18 ಭಕ್ತರ ಸಾವು
ಶಿವಸೇನಾ ನಾಯಕಿ ಹೇಳುವುದೇನು?
ಪೋಸ್ಟ್ ಎಡಿಟ್ ಮಾಡಿದ ಎಲ್ಜಿ!
ದೆಹಲಿಯ ಲೆಫ್ಟಿನೆಂಟ್ ಜನರಲ್ ಸಕ್ಸೇನಾ ಸಾವು ಸಂಭವಿಸಿದೆ ಎಂದು ಪೋಸ್ಟ್ ಮಾಡಿ, ಸಂತಾಪ ಸೂಚಿಸಿದ್ದರು. ಬಳಿಕ ಅದನ್ನು ಅವರು ಎಡಿಟ್ ಮಾಡಿದರು. ಸಾವು ಆಗಿದೆ ಎಂಬ ತಮ್ಮ ಹೇಳಿಕೆಯನ್ನು ತಿದ್ದುಪಡಿ ಮಾಡಿದರು.
ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಉಂಟಾಗಿರುವ ಅವ್ಯವಸ್ಥೆ ಮತ್ತು ಕಾಲ್ತುಳಿತ ದಿಂದಾಗಿ ಉಂಟಾಗಿರುವ ಗಾಯಗಳು ಮತ್ತು ಪ್ರಾಣ ಹಾನಿ ದುರದೃಷ್ಟಕರ. ಈ ದುರಂತದಲ್ಲಿ ಬಲಿಯಾದವರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ಮೊದಲು ಬರೆದಿದ್ದರು. 15 ನಿಮಿಷಗಳ ನಂತರ, ಸಕ್ಸೇನಾ ಸಾವಿನ ಉಲ್ಲೇಖ ತೆಗೆದು ಹಾಕಿದ್ದಾರೆ.
ರಾಜನಾಥ್ ಸಿಂಗ್ ಟ್ವೀಟ್
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಸಾವುಗಳಿಂದ ತಮಗೆ ನೋವಾಗಿದೆ ಎಂದು ಹೇಳಿದ್ದಾರೆ.
"ನವದೆಹಲಿ ರೈಲ್ವೆ ನಿಲ್ದಾಣದಿಂದ ಆಘಾತಕಾರಿ ಸುದ್ದಿ ಬಂದಿದೆ. ರೈಲ್ವೆ ಪ್ಲಾಟ್ ಫಾರ್ಮ್ನಲ್ಲಿ ಕಾಲ್ತುಳಿತದಿಂದಾಗಿ ಪ್ರಾಣಹಾನಿಯಾಗಿರುವುದು ನನಗೆ ತುಂಬಾ ನೋವುಂಟು ಮಾಡಿದೆ. ಎಂದು ಬರೆದುಕೊಂಡಿದ್ದಾರೆ.
ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ ರೈಲ್ವೆ ಇಲಾಖೆ
ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರೈಲ್ವೆ ಇಲಾಖೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ದುರಂತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ತಲಾ 2.5 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಾಳುಗಳಿಗೆ 1 ಲಕ್ಷ ರೂ. ಪರಿಹಾರ ಘೋಷಿಸಿದೆ.
ಕಾಲ್ತುಳಿತದಲ್ಲಿ ಒಟ್ಟು 18 ಜನ ಭಕ್ತರು ಮೃತಪಟ್ಟಿದ್ದಾರೆ.
ರೈಲ್ವೆ ಮಂಡಳಿಯ ಹೇಳಿಕೆ ಇಲ್ಲಿದೆ
ರೈಲ್ವೆ ಮಂಡಳಿ ಘಟನೆ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ನಿಲ್ದಾಣದ ಪ್ಲಾಟ್ಫಾರ್ಮ್ 13 ಮತ್ತು 14ರಲ್ಲಿ ಶನಿವಾರ ರಾತ್ರಿ 9.30ಕ್ಕೆ ಪ್ರಯಾಣಿಕರ ದಟ್ಟಣೆ ಉಂಟಾಗಿತ್ತು.
"ಜನ ಸಂಖ್ಯೆ ಏರಿಕೆಯಿಂದಾಗಿ ಉಂಟಾಗಿರುವ ಗೊಂದಲದಲ್ಲಿ ಕೆಲವು ವ್ಯಕ್ತಿಗಳು ಮೂರ್ಛೆ ಹೋದರು. ಇದು ವದಂತಿಗಳಿಗೆ ಕಾರಣವಾಯಿತು ಹಾಗೂ ಪ್ರಯಾಣಿಕರಲ್ಲಿ ಭೀತಿ ಉಂಟುಮಾಡಿತು. ನಂತರ ದಟ್ಟಣೆ ಸರಾಗಗೊಳಿಸುವ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು" ಎಂದು ತಿಳಿಸಲಾಗಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಶನಿವಾರ ತಡರಾತ್ರಿ ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಪರಿಸ್ಥಿತಿ ನಿಭಾಯಿಸಲು ಮತ್ತು ಪರಿಹಾರ ಕಾರ್ಯಕ್ಕೆ ಸಿಬ್ಬಂದಿ ನಿಯೋಜಿಸಲು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಅವರು ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
"ಎಲ್ಲಾ ಆಸ್ಪತ್ರೆಗಳು ಸಿದ್ಧವಾಗಿವೆ. ಸ್ಥಳದಲ್ಲಿದ್ದು ಪರಿಹಾರ ಕ್ರಮಗಳ ನಿಯಂತ್ರಣವನ್ನು ತೆಗೆದುಕೊಳ್ಳುವಂತೆ ಸಿಎಸ್ ಮತ್ತು ಸಿಪಿಗೆ ಸೂಚನೆ ನೀಡಿದ್ದೇನೆ" ಎಂದು ಸಕ್ಸೇನಾ ಹೇಳಿದರು.
ಹೆಚ್ಚುವರಿ ರೈಲುಗಳು ವ್ಯವಸ್ಥೆ
ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರ ಕಾರ್ಯನಿರ್ವಾಹಕ ದಿಲೀಪ್ ಕುಮಾರ್ ಮಾತನಾಡಿ, ಪ್ರಯಾಣಿಕರ ಅನುಕೂಲಕ್ಕಾಗಿ ಈವರೆಗೆ ನಾಲ್ಕು ವಿಶೇಷ ರೈಲುಗಳನ್ನು ಬಿಡಲಾಗಿದೆ. ಹೆಚ್ಚುವರಿ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳಲ್ಲಿ ವರದಿಯಾದಂತೆ ಯಾವುದೇ ರೈಲುಗಳನ್ನು ರದ್ದುಗೊಳಿಸಲಾಗಿಲ್ಲ ಎಂದು ಅವರು ತಿಳಿಸಿದರು. "ಪ್ರಯಾಣಿಕರ ಭಾರಿ ವಾರಾಂತ್ಯದ ನೂಕುನುಗ್ಗಲು ಇತ್ತು" ಎಂದು ಅವರು ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರವೇ ನಿಜವಾದ ಕಾರಣವನ್ನು ಕಂಡುಹಿಡಿಯಲಾಗುವುದು. ಆದಾಗ್ಯೂ, ನಮಗೆ ತಿಳಿದಿರುವುದು ಏನೆಂದರೆ, ಕೆಲವರು ಪರಸ್ಪರ ತಳ್ಳಿದ ಕಾರಣ ಘಟನೆ ಉಂಟಾಗಿದೆ" ಎಂದು ಕುಮಾರ್ ಹೇಳಿದರು. ದೊಡ್ಡ ಪ್ರಮಾಣದ ಸಾವು ನೋವುಗಳ ವರದಿ ತಳ್ಳಿಹಾಕಿದ್ದಾರೆ.